ಹೆಚ್ಚಿನ

ನೀವು ಯಾರ ಶಾಪಕ್ಕೂ ಕಾರಣರಾಗಬೇಡಿ,ಶಾಪವು ಬಿಡದೆ ನಿಮ್ಮ ಮುಂದಿನ ಪೀಳಿಗೆ ಹಾಗೂ ಜನ್ಮ ಜನ್ಮಕ್ಕೂ ಕಾಡುತ್ತೆ ,ಅದರ ಹಿಂದಿರುವ ಈ ಕಠೋರ ಸತ್ಯಗಳನ್ನ ತಿಳ್ಕೊಳ್ಳಿ .

ಪ್ರತಿ ಜೀವಿಯು ತಾನು ಮಾಡಿದ ಕರ್ಮದಿಂದ ಈ ಭೂಮಿಯ ಮೇಲೆ ತನ್ನ ತಂದೆ ತಾಯಿಯರನ್ನು ಮತ್ತು ಕುಟುಂಬ ಸದಸ್ಯರನ್ನು ಮುಂದಿನ ಪೀಳಿಗೆಗೆ ದೊರೆಯುತ್ತಾರೆ.
ಕುಟುಂಬದಲ್ಲಿ ಯಾರಾದರೂ ಸ್ತ್ರೀಯರಿಗೆ,ತಂದೆ ತಾಯಿಯರಿಗೆ ಅನ್ಯಾಯ ಮಾಡಿದರೆ ಅಥವಾ ಪಿತೃ ಕಾರ್ಯಗಳನ್ನು ಸರಿಯಾಗಿ ಮಾಡದೆ ಇದ್ದರೂ ಸಹ ಅಂತವರಿಗೆ ಸ್ತ್ರೀ ಶಾಪ,ಮತ್ತು ಮಾತಾ ಪಿತೃಗಳ ಶಾಪ ತಗಲುತ್ತದೆ.ಅದು ಅವರಿಗೆ ಮಾತ್ರವಲ್ಲದೇ ಬರುವ ಪೀಳಿಗೆಗೂ ತಗಲುತ್ತದೆ.

ಸರ್ಪಗಳನ್ನು ಸಾಯಿಸಿದಾಗ ಸರ್ಪ ದೋಷ ಬರುತ್ತದೆ. ಈ ಎಲ್ಲಾ ಕಾರಣಗಳಿಂದ ಜೀವನದಲ್ಲಿ ಅಭಿವೃದ್ಧಿ ಇರುವುದಿಲ್ಲ. ಉದ್ಯೋಗಗಳು ಸಿಗುವುದಿಲ್ಲ, ಸಂತಾನ ದೋಷ,ವ್ಯಾಪಾರ ನಷ್ಟ ಅಂತಹದನ್ನು ಎದುರಿಸಬೇಕಾಗುತ್ತದೆ.ವಯಸ್ಸಿನಲ್ಲಿ ದುರಾಭ್ಯಾಸಗಳಿಗೆ ಒಳಗಾದರೆ,ಆ ಪಾಪಗಳು ಬರುವ ಪೀಳಿಗೆಗೂ ವ್ಯಾಧಿಯ ರೂಪದಲ್ಲಿ ವಂಶ ಪರಂಪರೆಯಾಗಿ ಇರುತ್ತವೆ.

 

 

ಅದ್ದರಿಂದ ನಾವು ವಯಸ್ಸಿನಲ್ಲಿ ಇರುವಾಗ ಧರ್ಮವನ್ನು ಪಾಲಿಸಿದರೆ ನಮಗೆ ಹುಟ್ಟುವ ಮಕ್ಕಳು ಸಹ,ಅದೇ ಧರ್ಮವನ್ನು ಹಂಚಿಕೊಂಡು ಹುಟ್ಟುತ್ತಾರೆ.ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.
ಈ ಲೋಕದಲ್ಲಿ ಹುಟ್ಟುವ ಪ್ರತಿ ಜೀವಿಯಲ್ಲಿಯೂ ಸಹ ದತ್ತ ದೇವನು ಇರುತ್ತಾನೆ.ಅಂದರೆ ಗುರು ಅವತಾರವಾದ ದತ್ತಾತ್ರೇಯರು. ತಿಳಿದೋ ಅಥವಾ ತಿಳಿಯದೆಯೋ ಗುರುವನ್ನು ನಾವು ನಿರ್ಲಕ್ಷಿಸುವುದರಿಂದ ಗುರುವಿನ ಶಾಪಕ್ಕೆ ತುತ್ತಾಗಬೇಕಾಗುತ್ತದೆ.

ಹಸಿರು ಗಿಡಗಳನ್ನು ಕಿತ್ತು ಹಾಕುವುದರಿಂದ ಜಾತಕ ಅಥವಾ ಕುಂಡಲಿಯಲ್ಲಿ ಗುರುವಿನ ದೋಷಕ್ಕೆ ಒಳಗಾಗುತ್ತಾರೆ. ಹಾಗೆಯೇ ಗುರು ಗ್ರಹದ ಅನುಗ್ರಹ ಇಲ್ಲದೇ ಹೋದರೆ ಮಕ್ಕಳ ಜೀವನದಲ್ಲಿ ವೃದ್ಧಿಯನ್ನು ಕಾಣಲು ಆಗುವುದಿಲ್ಲ.ಆದ್ದರಿಂದ ಬೃಹಸ್ಪತಿ ಅಥವಾ ಗುರುವಿನ ಧ್ಯಾನವನ್ನು ಮಾಡುವುದರಿಂದ ಗುರು ಶಾಪದಿಂದ ಮುಕ್ತಿ ಹೊಂದಬಹುದು.

ವಂಶ ಪರಂಪರೆಯಾಗಿ ಬರುತ್ತಿರುವ ಒಂದು ಕುಟುಂಬದವರ ಭೂಮಿಯನ್ನು ಅಕ್ರಮವಾಗಿ ಕಿತ್ತು ಕೊಳ್ಳುವುದರಿಂದ ಅವರ ಪಿತೃ ದೇವತೆಗಳು ದುಃಖಿಸುತ್ತಾರೆ.ಆದ್ದರಿಂದ ಅವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ.
ಈ ಪಾಪಗಳಿಂದ ಅಕಾಲಿಕ ಮರಣ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.ಅದ್ದರಿಂದ ನಾವು ಧರ್ಮದಿಂದ ಬಾಳುವುದರಿಂದ, ಆ ಧರ್ಮವೇ ನಮ್ಮನ್ನು ,ನಮ್ಮ ಮುಂದಿನ ಪೀಳಿಗೆಯನ್ನು ಕಾಪಾಡುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top