ಹೆಚ್ಚಿನ

ನೀವು ಸುಖ,ಶಾಂತಿ, ಆಯಸ್ಸು ,ಸಕಲ ಸಂಪತ್ತು ಹಾಗೂ ಅದೃಷ್ಟ ಬಯಸಿದರೆ ಮನೆಯ ವಾಸ್ತು ಹೀಗಿರಲಿ.

“ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು” ಎಂಬ ಗಾದೆ ಮಾತಿನಂತೆ,ಮನೆಯನ್ನು ಕಟ್ಟಿ ಅ ಮನೆಯಲ್ಲಿ ಕುಟುಂಬದವರೆಲ್ಲಾ ಜೀವನ ನೆಡೆಸಲು ಎಲ್ಲರೂ ಇಷ್ಟ ಪಡುತ್ತಾರೆ.
ಆದರೆ ಮನೆಯನ್ನು ಕಟ್ಟುವಾಗ ವಾಸ್ತು ಪ್ರಕಾರ ಕಟ್ಟಿದರೆ ಆ ಮನೆಯಲ್ಲಿ ಸಂತಸ ಇನ್ನೂ ಹೆಚ್ಚಾಗಿರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾಸ್ತು ಹೇಗಿದ್ದರೆ ಓಳ್ಳೆಯದು ಎಂದು ಈಗ ನಾವು ತಿಳಿದುಕೊಳ್ಳೋಣ ಬನ್ನಿ.

 

 

ಮನೆಯ ಮುಂಬಾಗಿಲು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು .ಮನೆಯ ಮುಂಬಾಗಿಲಿನಲ್ಲಿ ಸದಾ ಗಾಳಿ ಮತ್ತು ಸೂರ್ಯನ ಬೆಳಕು ಬರುವಂತೆ ನೋಡಿಕೊಳ್ಳಬೇಕು. ಮನೆಯೊಳಗೆ ವಿಷಕಾರಿ ಸಸ್ಯಗಳನ್ನು ಬೆಳೆಸಬಾರದು.

ಅಡುಗೆ ಮನೆ ಆಗ್ನೇಯ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು. ಸ್ವಚ್ಛಗೊಳಿಸುವ ಸಾಧನಗಳನ್ನು ಅಡುಗೆ ಮನೆಯಲ್ಲಿ ಇಡಬಾರದು.

ದೇವರ ಮನೆಯನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಒಳ್ಳೆಯದು.ಎರಡು ಕೋಣೆಯ ಮದ್ಯೆ ದೇವರ ಮನೆ ಇರಬಾರದು.

ನೈರುತ್ಯ ದಿಕ್ಕಿನಲ್ಲಿ ಮಲಗುವ ಕೋಣೆಯನ್ನು ಸ್ಥಾಪಿಸಿದರೆ ಉತ್ತಮ,ಮಲಗುವ ಕೋಣೆಯಲ್ಲಿ ಸಸ್ಯಗಳನ್ನು ಬೆಳೆಸುವುದು ಅಷ್ಟೊಂದು ಒಳ್ಳೆಯದಲ್ಲ.

ನಗದು ಮತ್ತು ಚಿನ್ನಾಭರಣಗಳನ್ನು ಉತ್ತರ ದಿಕ್ಕಿನಲ್ಲಿ ಅಲ್ಮಿರಾನಲ್ಲಿ ಇಟ್ಟರೆ ಲಕ್ಷ್ಮೀ ದೇವಿಯು ಸದಾ ಕಾಲ ನಿಮ್ಮ ಮನೆಯಲ್ಲಿಯೇ ನೆಲೆಸಿರುತ್ತಾಳೆ.

ದಕ್ಷಿಣದಲ್ಲೂ ಕೊಳವೆ ಬಾವಿ ಇದ್ದರೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತವೆ.

ಕೆಲವು ದೇವರ ಫೋಟೋ ಹಾಗೂ ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ, ಆರ್ಥಿಕ ಲಾಭಗಳು ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ.

ಮನೆಯ ಉತ್ತರ ದಿಕ್ಕಿನಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ಇದ್ದರೆ ತುಂಬಾ ಒಳ್ಳೆಯದು.ನೀರಿನ ಚಿಲುಮೆ ಮನೆಯ ಈಶಾನ್ಯ ಕೋಣೆಯಲ್ಲಿ ಇರುವುದು ತುಂಬಾ ಒಳ್ಳೆಯದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top