ಸಿನಿಮಾ

ಮತ್ತೆ ಒಂದಾಯ್ತು ನೀರ್​ದೋಸೆ ಜೋಡಿ- ಮೋಡಿ ಮಾಡೋಕೆ ಜಗ್ಗೇಶ್- ವಿಜಯ್ ಪ್ರಸಾದ್ ರೆಡಿ.

ಈ ಹಿಂದೆ ನವರಸ ನಾಯಕ ಜಗ್ಗೇಶ್, ಹಿರಿಯ ನಟ ದತ್ತಣ್ಣ, ನಟಿ ಹರಿಪ್ರಿಯ ಮತ್ತು ನಟಿ ಸುಮನಾ ರಂಗನಾಥ್ ರವರನ್ನು ಕಟ್ಟಿಕೊಂಡು ನಿರ್ದೇಶಕ ವಿಜಯ್ ಪ್ರಸಾದ್ ಅವರು ‘ನೀರ್ ದೋಸೆ’ ಸಿನಿಮಾ ಮಾಡಿ ಯಶಸ್ಸು ಕಂಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಇದಾಗ ಬಳಿಕ ಜಗ್ಗೇಶ್ ಹಾಗು ವಿಜಯ್ ಪ್ರಸಾದ್ ಅವರ ಕಾಂಬಿನೇಶನ್ ನಲ್ಲಿ ಯಾವುದೇ ಸಿನೆಮಾ ಬಂದಿರಲಿಲ್ಲ. ಈ ಜೋಡಿ ಮತ್ತೆ ಒಂದಾಗಿ ಸಿನಿಮಾ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆಯಾಗಿತ್ತು. ಈಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಜಗ್ಗೇಶ್ ಹಾಗು ವಿಜಯ್ ಪ್ರಸಾದ್ ಕಾಂಬಿನೇಷನ ನಲ್ಲಿ ಚಿತ್ರವೊಂದು ಬರಲಿದೆ ಎಂದು ತಿಳಿದು ಬಂದಿದೆ.

 

 

ಮೂಲಗಳ ಮಾಹಿತಿಯ ಪ್ರಕಾರ ಈ ಸಿನೆಮಾಗೆ ಕೆ.ಎ ಸುರೇಶ್ ಬಂಡವಾಳ ಹೂಡಲಿದ್ದಾರೆ, ಒಂದು ಹಂತದ ಮಾತುಕತೆ ಕೂಡ ಮುಕ್ತಾಯ ಆಗಿದೆ. ಆದರೆ, ಈ ರೀತಿಯ ಚಿತ್ರ ನಿರ್ಮಾಣವಾಗುತ್ತಿದೆ ಎಂದು ನಿರ್ದೇಶಕ ವಿಜಯಪ್ರಸಾದ್ ಆಗಲಿ, ನಟ ಜಗ್ಗೇಶ್ ಎಲ್ಲಿಯೂ ಕೂಡ ಅಧಿಕೃತವಾಗಿ ಹೇಳಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಇನ್ನು ನಿರ್ದೇಶಕ ವಿಜಯ್ ಪ್ರಸಾದ್ ‘ಸಿದ್ಲಿಂಗು’ ಮತ್ತು ‘ನೀರ್​ದೋಸೆ’ ಯಶಸ್ವಿ ಚಿತ್ರಗಳ ಬಳಿಕ ಮತ್ತೊಂದು ಸಿನಿಮಾ ಮಾಡುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ ಎನ್ನಲಾಗಿದೆ. ಈ ಹಿಂದೆ ಅವರು ‘34:34 ಲೇಡಿಸ್ ಟೇಲರ್’ ಎಂಬ ಮಾಡುವವರಿದ್ದಾರೆ ಎಂಬ ಸುದ್ದಿ ಇತ್ತು ಆದರೆ ಆಮೇಲೆ ಏನಾಯಿತೋ ಏನೋ ಆ ಚಿತ್ರ ತೆರೆ ಮರೆಗೆ ಸರಿದುಹೋಯಿತು. ಈಗ ಅದೇ ಗ್ಯಾಪ್​ನಲ್ಲಿ ಮತ್ತೊಂದು ಸ್ಟೋರಿ ಸಿದ್ಧಪಡಿಸಿಕೊಂಡು ಬಂದಿದ್ದಾರಂತೆ. ಚಿತ್ರದಲ್ಲಿ ಯಾರೆಲ್ಲ ಅಭಿನಯ ಮಾಡಲಿದ್ದಾರೆ ಇನ್ನು ಅಂತಿಮವಾಗಿಲ್ಲ ಎಂದು ತಿಳಿದು ಬಂದಿದೆ.

ನಟ ಜಗ್ಗೇಶ್ ಈಗ ‘8 ಎಂಎಂ’ ಮತ್ತು ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಶೂಟಿಂಗ್ ಕೆಲಸದಲ್ಲಿ ಫುಲ್ ಬ್ಯುಸಿ ಆಗಿದ್ದು ಜೊತೆಗೆ ರಾಜಕೀಯದಲ್ಲೂ ಕೂಡ ಸಕ್ರಿಯವಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top