ಸಿನಿಮಾ

ರವಿತೇಜಾ ಜೊತೆಗೆ ನಟಿಸಲು ಕಾಜಲ್ ಇಟ್ಟ ಬೇಡಿಕೆ ಕೇಳಿ ಕಂಗಾಲಾದ ನಿರ್ಮಾಪಕ.

ಇತ್ತೀಚಿಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಕಾಜಲ್ ಅಗರ್ವಾಲ್ ಈಗ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾಳೆ. ಕಾಜಲ್ ಅಗರ್ವಾಲ್ ಗೆ ಅನೇಕ ಬಾರಿ ಬಾಲಿವುಡ್ ಆಫರ್ ಕೂಡ ಬರುತ್ತಿವೆ. ಕಾಜಲ್ ಈ ವರ್ಷ ನಂದಮುರಿ ಕಲ್ಯಾಣ್ ರಾಮ್ ಅವರ ಎಂಎಲ್ಎ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ರವಿತೇಜಾ ಅವರು ಅಮರ್ ಅಕ್ಬರ್ ಅಂತೋನಿ” ಸಿನಿಮಾ ಮಾಡುತ್ತಿದ್ದು ಚಿತ್ರದಲ್ಲಿ ರವಿತೇಜಾ ಜೊತೆಗೆ ಯಾರು ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಕುರಿತಂತೆ ಚರ್ಚೆ ಸಾಗಿದ್ದವು. ಕಾಜಲ್ ಈ ಚಿತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎನ್ನುವ ಮಾತು ಕೇಳುತಿದ್ದವು. ಆದರೆ ಕಾಜಲ್ ಇಟ್ಟ ಬೇಡಿಕೆಯಿಂದ ಕಂಗಾಲಾದ ನಿರ್ದೇಶಕರು ಕೊನೆಗೆ ಆಕೆಯನ್ನು ಚಿತ್ರದಿಂದ ಕೈ ಬಿಡಬೇಕಾಯಿತು ಎಂದು ತಿಳಿದು ಬಂದಿದೆ.

 

 

ಅಂದ ಹಾಗೆ ಆಕೆ ಇಟ್ಟ ಬೇಡಿಕೆ ಎಂದು ಎಂದು ಯೋಚಿಸುತ್ತಿದ್ದೀರಾ. ಕಾಜಲ್ 7 ಡಿಜಿಟ್ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ. ಅದು ರವಿತೇಜಾ ಸಂಭಾವನೆಗಿಂತಲೂ ಹೆಚ್ಚಾಗಿತ್ತಂತೆ. ಇದಲ್ಲದೇ ಬರೀ 25 ದಿನಗಳ ಕಾಲ್ ಶೀಟ್ ಕೊಡುವುದಾಗಿ ಹೇಳಿದ್ದರಂತೆ ಇದರಿಂದ ನಿರ್ದೇಶಕರು ಇವರನ್ನು ಕೈ ಬಿಡಬೇಕಾಯಿತು ಎಂದು ಹೇಳಲಾಗಿದೆ.

ಇದಾದ ಬಳಿಕ ಈ ಚಿತ್ರಕ್ಕೆ ನಟಿಯಾಗಿ ಇಲಿಯಾನ ಅಭಿನಯ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದ್ದವು. ಆದರೆ ಇದೀಗ ಆ ಜಾಗಕ್ಕೆ ನಟಿ ಶೃತಿಹಾಸನ್ ಹೆಸರು ಕೇಳಿಬಂದಿದೆ. ಮೂಲಗಳ ಪ್ರಕಾರ ಹಾಟ್ ಬೇಬಿ ಶೃತಿ ಹಾಸನ್ , ಮಾಸ್ ಮಹಾರಾಜ ಜತೆ ಅಭಿನಯ ಮಾಡುವುದು ಪಕ್ಕಾ ಆಗಿದೆ ಎಂದು ಮೂಲಗಳು ಹೇಳುತ್ತಿವೆ, ಅಮರ್ ಅಕ್ಬರ್ ಅಂತೋನಿಯಲ್ಲಿ, ರವಿತೇಜಗೆ ಜೋಡಿಯಾಗಿ ಶೃತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಚಿತ್ರತಂಡ ಖಚಿತಪಡಿಸಿದೆ. ಈ ಮೂಲಕ ಶೃತಿ ಹಾಸನ್, ರವಿತೇಜ ಜೊತೆಗೆ ಮೂರನೇ ಬಾರಿಗೆ ಜೊತೆಗೆ ಅಭಿನಯ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top