ಸಿನಿಮಾ

ತಮ್ಮ ಹೆಸರನ್ನೇ ಬದಲಾಯಿಸಿಕೊಂಡು ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಮೆರೆದ ಪ್ರಮುಖ 10 ಕಲಾವಿದರು.

ಕನ್ನಡ ಚಿತ್ರರಂಗದಲ್ಲಿ ಅನೇಕ ನಟ ನಟಿಯರು ತಮ್ಮ ಹೆಸರು ಬದಲಾವಣೆ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ ಹಾಗಾದರೆ ಯಾವ ಯಾವ ನಟ ನಟಿಯರು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ ನೋಡೋಣ ಬನ್ನಿ.

ಡಾ. ರಾಜಕುಮಾರ್

ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಮೂಲ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು. ಸಿನಿಮಾ ರಂಗದಲ್ಲಿ ತಮ್ಮ ಹೆಸರು ಬದಲಾವಣೆ ಮಾಡಿಕೊಂಡರು. ಇವರು ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.

 

 

ಡಾ. ವಿಷ್ಣುವರ್ಧನ್

ಸಾಹಸಸಿಂಹ ಡಾ. ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು 200 ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ.

 

ಅಂಬರೀಷ್

ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಖ್ಯಾತ ನಟ. ಇವರ ಮೂಲ ಹೆಸರು ಮಳವಳ್ಳಿ ಹುಚ್ಚೆ ಗೌಡ ಅಮರನಾಥ್.

 

ಜಗ್ಗೇಶ್
ಜಗ್ಗೇಶ್ ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾದವರು. ಇವರ ಮೂಲ ಹೆಸರು ಈಶ್ವರ್ ಗೌಡ. ವಿಶಿಷ್ಟ ಅಮೋಘ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ

 

 

 

 

ದರ್ಶನ್ ತೂಗುದೀಪ್
ದರ್ಶನ್ ತೂಗುದೀಪ್ ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಇವರ ಮೂಲ ಹೆಸರು ಹೇಮಂತ್ ಕುಮಾರ್

 

ಪುನೀತ್
ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಪುನೀತ್ ನಂತರ ನಾಯಕ ನಟನಾಗಿ ಅಭಿ ಚಿತ್ರದಲ್ಲಿ ಮೊದಲಿಗೆ ನಟಿಸಿದರು. ಇವರ ಮೂಲ ಹೆಸರು ಲೋಹಿತ್.

 

ಯಶ್

ನವೀನ್ ಕುಮಾರ್ ಗೌಡ ಅವರ ಮೂಲ ಹೆಸರು. ಯಶ್ 2007 ರಲ್ಲಿ ಜಂಬದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು. ನಂತರ ಮೊಗ್ಗಿನ ಮನಸು ಚಿತ್ರದ ಇವರಿಗೆ ಹೆಸರು ತಂದಿತು.

 

ರಮ್ಯಾ

ರಮ್ಯಾ ಅವರ ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು ‘ಅಭಿ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು ‘ತನನಂ ತನನಂ’ ಮತ್ತು ‘ಸಂಜು ವೆಡ್ಸ್ ಗೀತಾ’ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ

 

ರಕ್ಷಿತಾ

ನಟಿ ರಕ್ಷಿತಾ ಮೂಲ ಹೆಸರು ಶ್ವೇತಾ. ಇವರು ಮಮತಾ ರಾವ್ ಹಾಗೂ ಬಿ.ಸಿ. ಗೌರಿಶಂಕರ್ ರವರ ಮಗಳು. ಬಿ.ಸಿ. ಗೌರಿಶಂಕರ್ ಕನ್ನಡ ಚಿತ್ರರಂಗದ ಪ್ರಸಿದ್ಧ ಛಾಯಾಗ್ರಹಕರು.

 

ಶೃತಿ

ಶೃತಿ ಅವರ ಮೂಲ ಹೆಸರು ಗಿರಿಜಾ. ದ್ವಾರಕೇಶ್ ಅವರು ನಿರ್ದೇಶನದ “ಶೃತಿ” ಚಿತ್ರದಲ್ಲಿ ನಟಿಸಿರುವ ಇವರಿಗೆ ಗಿರಿಜಾ ಇದ್ದ ಮೂಲ ಹೆಸರು ಹೋಗಿ ಶೃತಿ ಎಂದು ಕರೆಯಲಾಯಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top