ಹೆಚ್ಚಿನ

ಜುಲೈ 27 ನೇ ತಾರೀಖು ರಾತ್ರಿ ಸುದೀರ್ಘ ಅವಧಿಯ ಕೇತುಗ್ರಸ್ಥ ಖಗ್ರಾಸ ಚಂದ್ರ ಗ್ರಹಣ ಇದರ ಪರಿಣಾಮ ಈ 2 ರಾಶಿಗಳ ಮೇಲೆ ಆಗುವ ಶುಭಫಲವೇನು ಗೊತ್ತಾ .

ಮೇಷ ರಾಶಿ 

 

ಜುಲೈ 27 ನೇ ತಾರೀಖು 2018 ರಂದು ರಾತ್ರಿ ನಡೆಯುವ ಈ ಶತಮಾನದ ಸುದೀರ್ಘ ದೀರ್ಘಾವಧಿಯ ಚಂದ್ರಗ್ರಹಣವು ಯಾವ ಯಾವ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯೋಣ .ಖಗ್ರಾಸ ಚಂದ್ರಗ್ರಹಣವು ಮೇಷ ರಾಶಿಯವರಿಗೆ ದಶಮ ಭಾವದಲ್ಲಿ, ಅಂದರೆ ಕರ್ಮ ಭಾವದಲ್ಲಿ ಅಂದರೆ, ಉದ್ಯೋಗ ಭಾವದಲ್ಲಿ ಸಂಭವಿಸಲಿದೆ. ಆದ್ದರಿಂದ ಈ ಖಗ್ರಾಸ ಚಂದ್ರಗ್ರಹಣವು ನಿಮ್ಮ ರಾಶಿಗೆ ಶುಭ ಫಲಗಳನ್ನು ನೀಡಲಿದೆ .

ಈ ಖಗ್ರಾಸ ಚಂದ್ರಗ್ರಹಣವು ದಶಮ ಭಾವದಲ್ಲಿ ಸಂಭವಿಸುವ ಕಾರಣ ಉದ್ಯೋಗದಲ್ಲಿ ಬಡ್ತಿ , ಉನ್ನತಿ, ವ್ಯಾಪಾರದಲ್ಲಿ ಬಡ್ತಿ, ಲಾಭ ಮತ್ತು ಹಲವಾರು ತಿಂಗಳುಗಳಿಂದ ಅಪೂರ್ಣವಾಗಿ ಉಳಿದ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳ್ಳುವಂತೆ ಶುಭ ಫಲಗಳನ್ನು ನೀಡಲಿದೆ. ಕುಜ ಮತ್ತು ಕೇತು ಈ ಗ್ರಹಣದ ಮುಖಾಂತರ ನಿಮ್ಮನ್ನು ಇನ್ನೂ ಹೆಚ್ಚು ಧೈರ್ಯವಂತರಾಗಿ ಮಾಡುತ್ತಾರೆ . ವ್ಯಾಪಾರ ಮತ್ತು ಉದ್ಯೋಗದಲ್ಲಿ ಆಕಸ್ಮಿಕವಾಗಿ ಅನಿರೀಕ್ಷಿತ ಯಶಸ್ಸು ದೊರೆಯಲಿದೆ. ಕುಜನು ಕೂಡ ಈ ಬಾರಿ ಕೇತುಗ್ರಸ್ತ ಚಂದ್ರ ಗ್ರಹಣದಲ್ಲಿ ಪಾಲ್ಗೊಂಡಿದ್ದಾನೆ.

ಯಾರು ಇದುವರೆಗೆ ನಿಮ್ಮನ್ನು ಭಾವನಾತ್ಮಕರನ್ನಾಗಿ ಮಾಡಿ ವಂಚಿಸಿದ್ದಾರೋ, ಇನ್ನು ಮುಂದೆ ಯಾರಿಂದಲೂ ಕೂಡ ಹಾಗೆ ಮಾಡಲು ಸಾಧ್ಯವಿಲ್ಲ. ನಿಮ್ಮ ಆತ್ಮವಿಶ್ವಾಸ ಈಗ ಹೆಚ್ಚಾಗುತ್ತಿದೆ. ಭಯರಹಿತ ಜೀವನವನ್ನು ನಡೆಸುತ್ತೀರಿ .ಆದ್ದರಿಂದ ಚಂದ್ರ ಗ್ರಹಣ ಮೇಷ ರಾಶಿಯವರಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ .ನಿಮ್ಮ ರಾಶಿಗೆ ಒಂಬತ್ತರಲ್ಲಿ ಶನೈಶ್ಚರನು ಇರುವ ಕಾರಣ ಧರ್ಮವನ್ನು ಕುರಿತು ವಿಭಿನ್ನವಾಗಿ ಚಿಂತಿಸುವ ಹಾಗೆ ಅಥವಾ ಧರ್ಮದ ಬಗ್ಗೆ ವಿಭಿನ್ನವಾಗಿ ಆಲೋಚನೆ ಮಾಡುವ ಹಾಗೆ ಮಾಡುತ್ತಾನೆ. ನಾಲ್ಕನೇ ಮನೆಯಲ್ಲಿರುವ ರಾಹು ಸ್ವಲ್ಪ ತಾಯಿಯೊಂದಿಗೆ ವೈರತ್ವವನ್ನು ನೀಡುತ್ತಾನೆ ಮತ್ತು ಹತ್ತರಲ್ಲಿ ಇರುವ ಕಾರಣ ಕೇತು ಉದ್ಯೋಗದಲ್ಲಿ ನಿಮ್ಮ ವೈರಿಗಳನ್ನು ಸರ್ವನಾಶ ಮಾಡುತ್ತಾನೆ, ಸಪ್ತಮದಲ್ಲಿ ಗುರು ಇದ್ದಾನೆ.ಆದರೂ ಕೂಡ ಈ ಗುರುಬಲ ಮಾತ್ರ ನಿಮಗೆ ಕೇವಲ ಅಕ್ಟೋಬರ್ ಹನ್ನೊಂದರವರೆಗೆ ಮಾತ್ರ ಲಭಿಸಲಿದೆ .

ನಂತರ ಗುರು ಬಲದಿಂದ ವಂಚಿತರಾದರೂ ಕೂಡ ಉಳಿದ ಗ್ರಹಗಳು ನಿಮಗೆ ಲಾಭದಾಯಕವಾಗಿದೆ. ಆದ್ದರಿಂದ ಗುರುವಿನಿಂದಲೂ ಕೂಡ ನಿಮಗೆ ರಾಜ್ಯ ಮರ್ಯಾದೆ ಸಿಗಲಿದೆ .ಆಕಸ್ಮಿಕ ಧನಲಾಭವಾಗಲಿದೆ . ನಿಮ್ಮ ರಾಶಿಯ ಅಧಿಪತಿ ಕುಜನು ತನ್ನ ವೈರಿಯ ಮನೆಯಲ್ಲಿ ಕೇತುವಿನೊಂದಿಗೆ ಸೇರಿಕೊಂಡಿದ್ದಾನೆ. ಆದ್ದರಿಂದ ನಿಮ್ಮ ವೈರಿಗಳು ಸರ್ವ ನಾಶವಾಗಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ಆಗಾಗ್ಗೆ ವಿಚಿತ್ರ ಘಟನೆಗಳು ಸಂಭವಿಸಲಿವೆ. ಇದರಿಂದ ನಿಮಗೆ ಶುಭ ಫಲಗಳು ಲಭಿಸಲಿವೆ . ತಾಯಿಯ ಆರೋಗ್ಯದಲ್ಲಿ ಚೇತರಿಕೆಯಾಗಲಿದೆ. ನಿಮ್ಮ ವೈರಿಗಳಲ್ಲಿ ಮಾತ್ರ ಒಂದು ರೀತಿಯ ಅವ್ಯಕ್ತ ಭಯ ಸಂಪೂರ್ಣವಾಗಿ ಆವರಿಸಿ ಬಿಟ್ಟಿದೆ. ಆದ್ದರಿಂದ ನಿಮಗೆ ಅಕ್ಟೋಬರ್ ಹನ್ನೊಂದನೇ ತಾರೀಕಿನ ನಂತರ ಸಮಸ್ಯೆಗಳು ಹೆಚ್ಚಾಗಲಿವೆ .ಆದರೂ ಕೂಡ ನವೆಂಬರ್ ನ ನಂತರ ಮತ್ತೆ ಸಡಿಲವಾಗುತ್ತದೆ.

ಪರಿಹಾರ -ಅಂಗಾರಕ ಅಷ್ಟೋತ್ತರವನ್ನು ಜಪಿಸಿ.

ವೃಷಭ ರಾಶಿ 

 

 

ಕೇತುಗ್ರಸ್ತ ಚಂದ್ರಗ್ರಹಣವು ವೃಷಭ ರಾಶಿಗೆ ಮಿಶ್ರ ಫಲವನ್ನು ನೀಡಲಿದೆ .ಕಾಲ ಪುರುಷನ ನೈಸರ್ಗಿಕ ರಾಶಿ ವೃಷಭ ರಾಶಿ. ಈ ಖಗ್ರಾಸ ಚಂದ್ರಗ್ರಹಣವು ಒಂಬತ್ತನೇ ಮನೆಯಲ್ಲಿ ಜರುಗಲಿದೆ. ಒಂಬತ್ತನೆಯ ಭಾವ, ಭಾಗ್ಯ ಭಾವ ಆದ್ದರಿಂದ ಈ ಗ್ರಹಣವು ನಿಮಗೆ ಸಮ್ಮಿಶ್ರ ಫಲವನ್ನು ನೀಡಲಿದೆ . ಈ ಗ್ರಹಣವು ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷವಾಗಿ ಹೆಚ್ಚು ಕಷ್ಟಕರವಾಗಿರುತ್ತದೆ. ರಸಿಕರ ರಾಶಿ ಈ ರಾಶಿಯವರು ಸ್ವಲ್ಪ ರೋಗಕ್ಕೆ ಗುರಿಯಾಗಲಿದ್ದಾರೆ. ಧರ್ಮ ಮತ್ತು ಅಧರ್ಮದ ಆಧ್ಯಾತ್ಮವನ್ನು ಕುರಿತು ವಿಭಿನ್ನವಾಗಿ ಚಿಂತಿಸಲು ಆರಂಭಿಸುತ್ತೀರಿ. ವಿಭಿನ್ನವಾಗಿ ಧರ್ಮದ ಬಗ್ಗೆ ಚಿಂತಿಸುತ್ತೀರಿ. ಕೆಲವು ಒತ್ತಡದ ಸನ್ನಿವೇಶಗಳ ಕಾರಣ ನಿಮ್ಮ ರಸಿಕತೆಯಲ್ಲಿ ಸ್ವಲ್ಪ ಕೊರತೆಯನ್ನು ಕಾಣಬಹುದಾಗಿದೆ .

ಈ ಪ್ರೀತಿ, ಪ್ರೇಮ ಮತ್ತು ಪ್ರಣಯ ಕನ್ನಡಿಯನ್ನು ಬಿಟ್ಟು ಅಲಂಕಾರದಿಂದ ತಾತ್ಕಾಲಿಕವಾಗಿ ದೂರವಿರಲು ಪ್ರಯತ್ನಿಸುತ್ತೀರಿ. ಒಂದು ರೀತಿಯ ನಿರಾಸೆ ಮತ್ತು ಜಿಗುಪ್ಸೆ ನಿಮ್ಮನ್ನು ಆವರಿಸಲಿದೆ. ಕಾರಣ ಕೇತುಗ್ರಸ್ತ ಚಂದ್ರಗ್ರಹಣವು ಕುಜ ನೊಡನೆ ಸೇರಿ ಚಂದ್ರನನ್ನು ಆವರಿಸಿ ಬಿಟ್ಟಿದ್ದಾನೆ. ಚಂದ್ರನೇ ಮನಸ್ಸಿನ ಕಾರಕನು. ಆದ್ದರಿಂದ ಮನಸ್ಸಿಗೆ ಸ್ವಲ್ಪ ಆಘಾತವಾಗಿರುತ್ತದೆ. ರಾಹು ನಿಮಗೆ ಲಾಭವನ್ನು ಖಂಡಿತವಾಗಿಯೂ ನೀಡುತ್ತಾನೆ. ಅಭಿವೃದ್ಧಿಯನ್ನು ಮಾಡುತ್ತಾನೆ . ಕೇತು ಮಾತ್ರ ಮನಸ್ಸನ್ನು ಘಾಸಿಗೊಳಿಸಿ ನಿಮಗೆ ಆಗಾಗ್ಗೆ ಪಾಪ ಬುದ್ಧಿಯನ್ನು ನೀಡುತ್ತಾನೆ .

ಪೂರ್ವ ಸಂಚಿತ ಕರ್ಮಗಳು ನಿಮ್ಮನ್ನು ಆಗಾಗ್ಗೆ ಆವರಿಸುವ ಸಮಯವಾಗಿದೆ. ದೂರ ಪ್ರಯಾಣದಲ್ಲಿ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಉನ್ನತ ಮಟ್ಟದ ಶಿಕ್ಷಣವನ್ನು ಮಾಡುತ್ತಿದ್ದರೆ, ತಾತ್ಕಾಲಿಕವಾಗಿ ಫಲಿತಾಂಶಗಳು ನಿಮಗೆ ವಿಪರೀತವಾಗಿ ಬರುತ್ತವೆ ಅಥವಾ ಉನ್ನತ ಶಿಕ್ಷಣವನ್ನು ಮಾಡುತ್ತೀರಿ. ನೀವು ಉಚ್ಚರಿಸುವ ಮಂತ್ರಗಳು ಈಗ ಅಷ್ಟೊಂದು ಫಲವನ್ನು ನೀಡುವುದಿಲ್ಲ. ಪ್ರಾಣಕ್ಕೆ ಮಾತ್ರ ಯಾವುದೇ ರೀತಿಯ ಅಪಾಯ ಇಲ್ಲ.ಅಕ್ಟೋಬರ್ ಹನ್ನೊಂದನೇ ತಾರೀಕಿನ ನಂತರ ಮತ್ತೆ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದೆ. ಮೊದಲಿನಂತೆಯೇ ಸಹಜ ಜೀವನವನ್ನು ನಡೆಸಬಹುದು .ಅಕ್ಟೋಬರ್ ಹನ್ನೊಂದನೇ ತಾರೀಕಿನ ನಂತರ ಇನ್ನಷ್ಟು ಒಳ್ಳೆಯ ಶುಭ ಫಲಗಳನ್ನು ನೀವು ಕಾಣುತ್ತೀರಿ. ಕಳೆದುಕೊಂಡ ಗುರುಬಲವನ್ನು ಮತ್ತೆ ಪಡೆದುಕೊಳ್ಳುವ ಕಾರಣ ರಾಜ ಮರ್ಯಾದೆ ಸಿಗಲಿದೆ ಮತ್ತು ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಸುಧಾರಿಸಲಿದೆ .

ಪರಿಹಾರ -ಭಗವದ್ಗೀತೆಯ ಎರಡನೇ ಅಧ್ಯಾಯವಾದ ಸಾಂಖ್ಯ ಯೋಗವನ್ನು ನೂರಾ ಎಂಟು ಬಾರಿ ಸ್ಫಟಿಕ ಮಾಲೆಯಿಂದ ಪಠಿಸಿರಿ.
ಮಂತ್ರ– ಶರಣಾಗತ ದೀನಾರ್ಥ ಪವಿತ್ರಾಣಾ ಪರಾಯಾಣಿ ಸರ್ವಸಾರ್ತಿ ಹರೇ ದೇವಿ ನಾರಾಯಣಿ ನಮೋಸ್ತುತೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top