ಮನೋರಂಜನೆ

ಕ್ರಿಮಿನಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ರಜಿನಿ ಪತ್ನಿಯ ವಿಚಾರಣೆ- ಲತಾ ರಜಿನಿಕಾಂತ್’ಗೆ ಎದುರಾಯ್ತು ಸಂಕಷ್ಟ

2014ರಲ್ಲಿ ತೆರೆಕಂಡಿದ್ದ ಕೊಚಾಡಿಯನ್ ಸಿನಿಮಾಗೆ ಸಂಬಂಧಿಸಿದಂತೆ ಜಾಹಿರಾತು ಕಂಪನಿಯೊಂದಕ್ಕೆ ಹಣ ಪಾವತಿಸುವಂತೆ ನೀಡಿದ್ದ ಆದೇಶವನ್ನ ಪಾಲಿಸದ ಹಿನ್ನಲೆಯಲ್ಲಿ ತಮಿಳು ನಟ ರಜಿನಿಕಾಂತ್ ಅವರ ಹೆಂಡತಿ ಲತಾ ರಜಿನಿಕಾಂತ್‌ ಅವರನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಒಳಪಡಿಸಿದೆ.

 

 

ಲತಾ ರಜನಿಕಾಂತ್​ ನಿರ್ದೇಶಕಿಯಾಗಿದ್ದ ಮೀಡಿಯಾ ಒನ್ ಸಂಸ್ಥೆ ಮೂಲಕ ಕೊಚ್ಚಾಡಿಯನ್ ಚಿತ್ರಕ್ಕಾಗಿ ಜಾಹಿರಾತು ಕಂಪನಿಯೊಂದರಿಂದ 10 ಕೋಟಿ ಸಾಲ ಪಡೆದಿತ್ತು. ಆದರೆ ಹಣವನ್ನು ಮರುಪಾವತಿ ಮಾಡಿರಲಿಲ್ಲ.. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ ಜಾಹಿರಾತು ಕಂಪನಿ ತಮ್ಮ ಹಣ ಕೊಡಿಸುಬೇಕೆಂದು ಮೀಡಿಯಾ ಒನ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಕಳೆದ ಫೆಬ್ರವರಿ 20ರಂದು ಬಡ್ಡಿ ಸಮೇತ ಹಣ ಪಾವತಿಸುವಂತೆ ಆದೇಶಿಸಿತ್ತು. ಆದರೆ ಅದಾಗಲೇ ತಾನು 9.20 ಕೋಟಿ ಹಣ ವಾಪಸ್ಸು ಮಾಡಿದ್ದೇನೆ ಎಂದು ಲತಾ ರಜಿನಿಕಾಂತ್ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನ ಕೋರ್ಟ್ ತಿರಸ್ಕರಿಸಿ ಮೀಡಿಯಾ ಒನ್ ಸಂಸ್ಥೆ ಹಣ ಪಾವತಿಸಬೇಕು ಒಂದೊಮ್ಮೆ ಅದು ವಿಫಲವಾದಲ್ಲಿ ನೀವೇ ಖುದ್ದು ಹಣ ಪಾವತಿ ಮಾಡಬೇಕು ಎಂದು ಲತಾ ರಜಿನಿಕಾಂತ್​​ಗೆ ಕೋರ್ಟ್ ಆದೇಶಿಸಿತ್ತು.

ಹಣ ಪಾವತಿಸಲು ರಜಿನಿ ಪತ್ನಿಗೆ ಕೋರ್ಟು 4 ತಿಂಗಳ ಗಡುವು ನೀಡಿತ್ತು. ಗಡುವು ಮುಗಿದರೂ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಲತಾ ಅವರನ್ನ ವಾರದ ಹಿಂದೆಯಷ್ಟೇ ತರಾಟೆಗೆ ತೆಗೆದುಕೊಂಡು ವಿಚಾರಣೆಯನ್ನು ಎದುರಿಸುವಂತೆ ಹೇಳಿತ್ತು .”ಸುಪ್ರೀಂ ಕೋರ್ಟ್ ಆದೇಶಗಳನ್ನ ಪಾಲಿಸದವರನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.. ನೀವು 10 ಕೋಟಿ ನೀಡುವುದಾಗಿ ಹೇಳಿದ್ದಿರಿ ಆದರೆ ಹೇಳಿದಂತೆ ನೀವು ನಡೆದುಕೊಂಡಿಲ್ಲ. ಹೀಗಿರುವಾಗ ನಾವ್ಯಾಕೆ ನಿಮಗೆ ಅವಕಾಶ ಕೊಡಬೇಕು. ಈ ಪ್ರಕರಣದಲ್ಲಿ ನೀವು ಕೋರ್ಟ್ ವಿಚಾರಣೆಯನ್ನ ಎದುರಿಸಲೇಬೇಕು ಒಂದೊಮ್ಮೆ ನೀವು ಅಮಾಯಕರಾದರೆ, ನಿಮ್ಮನ್ನು ಖುಲಾಸೆಗೊಳಿಸಲಾಗುವುದು. ವಿಚಾರಣೆ ಎದುರಿಸಿ” ಎಂದು ಕೋರ್ಟ್ ಲತಾ ರಜಿನಿಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top