ಸಮಾಚಾರ

ಪ್ರೀತಿಯಲ್ಲಿ ಮೋಸಹೋದವರಿಗೊಂದು ಸುವರ್ಣ ಅವಕಾಶ.

ಕನ್ನಡ ಸಿನಿಮಾ ರಂಗದಲ್ಲಿ ದೂದ್ ಪೇಡಾ ಎಂದೇ ಖ್ಯಾತಿಗಳಿಸಿರುವ ದಿಗಂತ್ ಅವರು ಅನೇಕ ಸಿನಿಮಾ ಮೂಲಕ ಕನ್ನಡ ಸಿನಿರಸಿಕರನ್ನು ರಂಜಿಸಿದ್ದಾರೆ. ಸದ್ಯ ಅವರ ‘ಕಥೆಯೊಂದು ಶುರುವಾಗಿದೆ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ. ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈ ಚಿತ್ರತಂಡ ಸುವರ್ಣಾವಕಾಶ ನೀಡಿದೆ.

 

ಬರುವ ಆಗಸ್ಟ್ ಎರಡರಂದು ಬೆಂಗಳೂರಿನ ಓರಾಯನ್ ಮಾಲ್​ನಲ್ಲಿ ಕಥೆಯೊಂದು ಶುರುವಾಗಿದೆ ಚಿತ್ರದ ಪ್ರೀಮಿಯರ್​ ಶೋ ಏರ್ಪಾಡು ಮಾಡಿದ್ದಾರೆ. ಈ ಪ್ರೀಮಿಯರ ಶೋ ನೋಡಲು ಇಚ್ಛಿಸುವ ಅಭಿಮಾನಿಗಳಿಗೆ ಒಂದು ಅವಕಾಶ ಸಿಕ್ಕಿದೆ ಎಂದು ತಿಳಿದು ಬಂದಿದೆ. ಅದು ಏನೆಂದರೆ ನೀವು ನಿಮ್ಮ ಪ್ರೇಮ ಕಥೆಯನ್ನು ಚಿತ್ರತಂಡಕ್ಕೆ ಹೇಳಬೇಕು.

 

ನೀವು ನಿಮ್ಮ ಪ್ರೇಮ ಕಥೆ ಹೇಗೆ ಶುರುವಾಗಿದೆ ಎನ್ನುವುದನ್ನು ಸಣ್ಣ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ​​ #KatheyonduShuruvagide ಹ್ಯಾಷ್​ ಟ್ಯಾಗ್​ ಬರೆದು ಪೋಸ್ಟ್ ಮಾಡಬೇಕು. ಇದರಲ್ಲಿ ಚಿತ್ರತಂಡ ಆಯ್ಕೆ ಮಾಡಿದವರಿಗೆ ಪ್ರೀಮಿಯರ ಷೋ ನೋಡುವ ಅವಕಾಶ ಸಿಗಲಿದೆ.

ಓರಿಯನ್ ಮಾಲ್‌ನಲ್ಲಿರುವ ಪಿವಿಆರ್‌ ನಲ್ಲಿ ನಾಲ್ಕು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ಇರಲಿದೆ. ಅದರಲ್ಲಿ ಒಂದನ್ನು ಪ್ರೇಮಿಗಳಿಗೆ, ಪ್ರೀತಿಸಿ ಮದುವೆ ಆದವರಿಗೆ ಮೀಸಲಿಡಲಾಗುತ್ತದೆ. ಇನ್ನೊಂದನ್ನು ಅರೇಂಜ್ಡ್ ಮ್ಯಾರೇಜ್ ಆದವರಿಗೆ, ಮೂರನೇಯದನ್ನು ಪ್ರೀತಿಯಾದವರಿಗೆ ಹಾಗೂ ಸಿಂಗಲ್ ಆಗಿರುವವವರಿಗೆ ಹುಡುಗ ಹುಡುಗಿಯರಿಗೆ ಹಾಗೂ ಬ್ರೇಕಪ್ ಆದವರಿಗೆ ಮೀಸಲಿಡಲಾಗಿದೆ. ನಾಲ್ಕನೇ ಸ್ಕೀನ್‌ನಲ್ಲಿ ಮದುವೆಯಾಗಿ ಬಹಳ ವರ್ಷಗಳ ಕಾಲ ಸುಸೂತ್ರವಾಗಿ ಸಂಸಾರ ನಿಭಾಯಿಸಿ, 25 ವರ್ಷಕ್ಕಿಂತಲೂ ಹೆಚ್ಚು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡವರಿರುತ್ತಾರೆ. ನಿಮ್ಮ ನಿಮ್ಮ ಪ್ರೇಮ ಶುರುವಾಗಿದ್ದು ಹೇಗೆಂದು ಹೇಳಿಕೊಳ್ಳಿ, ಟಿಕೆಟ್ ಗೆಲ್ಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top