ಮನೋರಂಜನೆ

ಅಖಂಡ ಹದಿನೈದು ವರ್ಷಗಳ ನಂತರ ಪ್ರಧಾನಪಾತ್ರ ಮಾಡಲು ಮುಂದಾದ ರಾಘಣ್ಣ.

ತೊಂಬತ್ತರ ದಶಕದ ಟಾಪ್ ನಟರ ಸಾಲಿನಲ್ಲಿ ಅಗ್ರಸಾಲಿನಲ್ಲಿ ಮಿರ ಮಿರ ಮಿಂಚುತ್ತಿದ್ದ ಅಣ್ಣಾವ್ರ ಮಗ ರಾಘವೇಂದ್ರ ರಾಜಕುಮಾರ್ ಪ್ರತಿಭಾನ್ವಿತ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ.. ಥರಥರದ ಪಾತ್ರಗಳ ಮೂಲಕ ಕನ್ನಡಿಗರ ಮನಸಲ್ಲಿ ಜಾಗ ಸಂಪಾದಿಸಿಕೊಂಡಿದ್ದ ರಾಘಣ್ಣನಿಗೆ ಆರೋಗ್ಯ ಕೈಕೊಟ್ಟ ಕಾರಣ ಚಿಕಿತ್ಸೆ ಪಡೆಯುವ ಸಲುವಾಗಿ ನಟನೆಯಿಂದ ಸುಮಾರು ಒಂದೂವರೆ ದಶಕಗಳ ದೂರ ಉಳಿದಿದ್ದರು..ಹದಿನೈದು ವರ್ಷಗಳಿಂದ ಅವರ ಚಿತ್ರಗಳಿಲ್ಲದೆ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಆಗ್ಗಾಗ್ಗೆ ರಾಘಣ್ಣ ಮತ್ತೊಮ್ಮೆ ನಟಿಸುತ್ತಾರೇನೋ ಎಂಬ ಆಸೆ ಚಿಗುರುತ್ತಲೇ ಇತ್ತು ಅದು ಇದೀಗ ಸಾಕಾರವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

 

 

ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ನಿಖಿಲ್ ಮಂಜು ನಿರ್ದೇಶನ ಮಾಡುತ್ತಿರುವ ‘ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಇದಾಗಿದೆ. ಆಗಸ್ಟ್ 15 ರಂದು ನಟ ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟು ಹಬ್ಬವಿದ್ದು.ಅಂದೇ ಸದರಿ ಚಿತ್ರದ ಮೂಹೂರ್ತ ನೆರವೇರಲಿದೆ ಎಂದು ನಿರ್ದೇಶಕ ನಿಖಿಲ್ ಮಂಜು ತಿಳಿಸಿದ್ದಾರೆ.

ಅಮ್ಮನಮನೆ ಚಿತ್ರದ ಜೊತೆಗೆ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಚಿಲಂನಲ್ಲಿ ಕೂಡ ಪ್ರಮುಖ ಪಾತ್ರವನ್ನು ರಾಘವೇಂದ್ರ ರಾಜಕುಮಾರ್ ಮಾಡುತ್ತಾರೆ ಎನ್ನುವ ಮಾತುಗಳು ತಿಂಗಳುಗಳಿಂದ ಕೇಳಿಬರುತ್ತಿದ್ದು ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತವಾದ ಮಾಹಿತಿಗಳು ಹೊರಬಿದ್ದಿಲ್ಲ.ಈ ಚಿತ್ರದ ಜೊತೆಗೆ ಪ್ರತಾಪ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾರರ್ ಸಿನಿಮಾವೊಂದನ್ನು ಕೂಡ ರಾಘಣ್ಣ ಒಪ್ಪಿಕೊಂಡಿದ್ದಾರೆ ಎಂದು ಒಂದು ವರ್ಗದ ಮೂಲಗಳಿಂದ ತಿಳಿದುಬಂದಿದೆ.

ಒಟ್ಟಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ಸಂಪೂರ್ಣವಾಗಿ ತೆರೆಮರೆಗೆ ಸರಿದಿದ್ದ ರಾಘವೇಂದ್ರ ರಾಜಕುಮಾರ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಸಕ್ರಿಯರಾಗಿ ಅಭಿಮಾನಿಗಳನ್ನು ರಂಜಿಸಲಿ ಎಂಬುದೇ ಅವರ ಅಭಿಮಾನಿಗಳೆಲ್ಲರ ಆಶಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top