ಸಮಾಚಾರ

ತಾಜ್ ಮಹಲ್ ನಾಶ ಮಾಡಲು ಬಯಸಿದ್ದೀರಾ: ಕೇಂದ್ರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್​.

ಜಗ್ಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ಐತಿಹಾಸಿಕ ಸ್ಮಾರಕವಾದ ತಾಜ್​ ಮಹಲ್​ ಅನ್ನು ನಾಶ ಮಾಡುವುದೇ ನಿಮ್ಮ ಉದ್ದೇಶವಾ ಎಂದು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ಉತ್ತರಪ್ರದೇಶದ ಮಥುರಾದಿಂದ ದೆಹಲಿವರೆಗೆ ಹೆಚ್ಚುವರಿಯಾಗಿ ರೈಲ್ವೆ ಹಳಿ ಜೋಡಿಸಲು ಸುಮಾರು ನಾನೂರು ಮರಗಳನ್ನು ಕಡಿಯಲು ಅನುಮತಿ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಲಾಗಿತ್ತು. ಅದರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮರ ಕಡಿದರೆ ಉಂಟಾಗುವ ಪ್ರತಿಕೂಲ ವಾತಾವರಣದ ಪರಿಣಾಮ ತಾಜ್ ಮೇಲೆ ಬೀರುತ್ತದೆ ಎಂದು ಹೇಳಿ ಹೀಗೆ ಪ್ರತಿಕ್ರಿಯಿಸಿದೆ.  ನೀವು ಎಷ್ಟು ಬೇಕಾದರೂ ಅಫಿಡವಿಟ್ ಅಥವಾ ಅರ್ಜಿ ಸಲ್ಲಿಸಿ ಆದರೆ ಅದರಲ್ಲಿ ಭಾರತ ಸರ್ಕಾರ ತಾಜ್ ಮಹಲ್ ಅನ್ನು ನಾಶ ಮಾಡಲು ಬಯಸುತ್ತದೆ ಎಂಬುದನ್ನು ಉಲ್ಲೇಖಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದೆ.

 

ತಾಜ್​ ಮಹಲ್ ಸಂರಕ್ಷಣೆ ಮಾಡಲು ಕೇಂದ್ರ ಸರ್ಕಾರ ಮತ್ತದರ ಅಧೀನ ಸಂಸ್ಥೆಗಳು ನಿರಾಸಕ್ತಿ ತೋರುತ್ತಿವೆ ಎಂದು ಸುಪ್ರೀಂ ಕೋರ್ಟ್ ಕೆಂಡಕಾರಿದೆ. ಇದೇ ಸಂದರ್ಭದಲ್ಲಿ ತಾಜ್​ ಮಹಲ್​ ಸಂರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿತು.

ತಾಜ್ ಮಹಲ್ ರಕ್ಷಣೆ ವಿಚಾರದಲ್ಲಿ ಕಾರ್ಯಸೂಚಿ ರೂಪಿಸದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟು ತಾಜ್ ಮೇಲಿನ ಕೇಂದ್ರದ ಸಂರಕ್ಷಣೆ ಕಾರ್ಯವನ್ನು ‘ವ್ಯರ್ಥ ಹೋರಾಟ’ ಎಂದು ಟೀಕಿಸಿದೆ ಮಾಡಿದೆ.. ತಾಜ್ ಮಹಲ್ ಸುತ್ತ ಮುತ್ತಲಿನ ಪರಿಸರ ಮಾಲಿನ್ಯದಿಂದಾಗಿ ಸ್ಮಾರಕಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದ್ದು ಅದರ ಬಗ್ಗೆ ಸೂಕ್ತವಾದ ಕಾರ್ಯವನ್ನು ನಿರ್ಲಕ್ಷಿಸದೇ ಆದಷ್ಟು ಬೇಗ ಕೈಗೊಳ್ಳುವಂತೆ ಸೂಚಿಸಿದೆ.

ಇಷ್ಟೇ ಅಲ್ಲದೆ ತಾಜ್’ಮಹಲ್ ರಕ್ಷಣೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಇದೇ ಸಂದರ್ಭ ಛೀಮಾರಿ ಹಾಕಿತು. ತಾಜ್ ರಕ್ಷಣೆಗೆ ತೆಗೆದುಕೊಂಡ ಹಾಗು ತೆಗೆದುಕೊಳ್ಳಬೇಕಾದ ಕಾರ್ಯಸೂಚಿಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆಯೂ ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಜುಲೈ 31 ರಿಂದ ಈ ಪ್ರಕರಣದ ವಿಚಾರಣೆಯನ್ನು ದಿನವೂ ನಡೆಸುವುದಾಗಿ ಕೋರ್ಟ್ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top