ಸಮಾಚಾರ

ದೇಶದಲ್ಲಿ ಮುಸ್ಲಿಮರನ್ನೇ ಟಾರ್ಗೆಟ್ ಮಾಡುತ್ತಿರುವುದರಿಂದ ತುಂಬಾ ನೋವಾಗಿದೆ- ನಟಿ ತಾಪ್ಸಿ.

ಅನೇಕ ಬಾಲಿವುಡ್ ಹಾಗು ದಕ್ಷಿಣ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ತಾಪ್ಸಿ ಅವರು ದೇಶದಲ್ಲಿ ಮುಸ್ಲಿಮರ ವಿರುದ್ಧದ  ಭಾವನೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ , ನಿರ್ಧಿಷ್ಟ ಧರ್ಮವೊಂದನ್ನು ಗುರಿ ಮಾಡುವುದನ್ನು ಖಂಡಿಸಿದ್ದಾರೆ ಎನ್ನಲಾಗಿದೆ.

 

 

ತಾಪ್ಸಿ ಅವರು ಈಗ ‘ಮುಲ್ಕ್’ ಎಂಬ ಸಿನಿಮಾದಲ್ಲಿ ಅಭಿನಯ ಮಾಡಿದ್ದು ಸದ್ಯ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು “ಒಂದು ಸಮುದಾಯವನ್ನು ಗುರಿ ಮಾಡುತ್ತಿರುವುದರಿಂದ ನೋವಾಗಿದೆ. ನನ್ನ ವೈಯಕ್ತಿಕ ಜೀವನದಿಂದಲೇ ನಾವು ಉದಾಹರಣೆ ನೀಡಬಲ್ಲೆ. ನನ್ನ ಮ್ಯಾನೇಜರ್ ಮುಸ್ಲಿಂ, ನನ್ನ ಚಾಲಕ, ನನ್ನ ಮನೆಯಲ್ಲಿ ಕೆಲಸವನ್ನು ಮಾಡುವವರು ಕೂಡ ಮುಸ್ಲಿಮರೇ. ನನ್ನ ಜೀವನ ಇವರಿಂದ ನಡೆಯುತ್ತಿದೆ. ಇವರ ಉಪಸ್ಥಿತಿಯು ಒಂದು ವೇಳೆ ನನಗೆ ಕಿರಿಕಿರಿ ಎನಿಸಿದ್ದಲ್ಲಿ ನನಗೆ ಹಗಲು, ರಾತ್ರಿಗಳೆರಡೂ ಕಿರಿಕಿರಿ ಎನಿಸಬಹುದು. ಏಕೆಂದರೆ ನನ್ನ ಜೀವನವೇ ಇವರಿಂದ ನಡೆಯುತ್ತಿದೆ. ನಿರ್ದಿಷ್ಟ ಧರ್ಮವೊಂದನ್ನು ಗುರಿ ಮಾಡಲಾಗುತ್ತಿದೆ ಎನ್ನುವುದನ್ನು ಸಹಿಸಲಾಗದು. ಇವರೆಲ್ಲಾ ನನ್ನಿಂದ ದೂರವಾಗದಂತಹ ಜನರು” ಎಂದು ಅವರು ಹೇಳಿಕೆ ನೀಡಿದ್ದಾರೆ.

ಮುಲ್ಕ್ ಸಿನಿಮಾ ಜುಲೈನಲ್ಲಿ ಬಿಡುಗಡೆಯಾಗಲಿರುವ ತಾಪ್ಸಿಯ ಎರಡನೇ ಚಿತ್ರ. ಮಾಜಿ ಭಾರತೀಯ ಹಾಕಿ ಕ್ಯಾಪ್ಟನ್ ಸುದೀಪ್ ಸಿಂಗ್ ಅವರ ಆತ್ಮಚರಿತ್ರೆ ಸೂರ್ಮ ದಲ್ಲಿ ಕೂಡ ತಾಪ್ಸಿ ನಟಿಸಿದ್ದು. ಈ ಚಿತ್ರ ಜುಲೈ 13ಕ್ಕೆ ಬಿಡುಗಡೆ ಆಗಲಿದೆ. ತುಮ್ ಬಿನ್, ದಸ್ ಮತ್ತು ರಾ ಒನ್ ಖ್ಯಾತಿಯ ನಿರ್ದೇಶಕ ಅನುಭವ ಸಿನ್ಹಾ ಮುಲ್ಕ್ ಚಿತ್ರವನ್ನು ನಿರ್ದೇಶಿಸಿದ್ದು, ಇದೊಂದು ಸಾಮಾಜಿಕ ಥ್ರಿಲ್ಲರ್ ಚಿತ್ರವಾಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top