ಹೆಚ್ಚಿನ

ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ವಾರ್ನಿಂಗ್ ಕೊಟ್ಟ ಯಮಧರ್ಮರಾಯ.

ದಿನೇ ದಿನೇ ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಪೊಲೀಸರು ಎಷ್ಟೇ ವಾರ್ನಿಂಗ್ ಕೊಟ್ಟರು ವಾಹನ ಸವಾರರು ನಿಯಮ ಉಲ್ಲಂಘನೆ ಮಾಡುವುದನ್ನು ನಿಲ್ಲಿಸಿಲ್ಲ. ಇದರಿಂದ ಬೇಸತ್ತಿರುವ ಟ್ರಾಫಿಕ್ ಸಿಬ್ಬಂದಿಗಳು ನಾವು ವಾರ್ನಿಂಗ್ ಕೊಟ್ರೆ ಕೇಳಲ್ಲ ಎಂದು ಯಮ ಧರ್ಮನ ಕೈನಲ್ಲಿ ವಾರ್ನಿಂಗ್ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ .

ರಸ್ತೆ ನಿಯಮ ಉಲ್ಲಂಘನೆ ಮಾಡುವವರಿಗೆ ಹಾಗು ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡುವವರಿಗೆ ಯಮ ಧರ್ಮರಾಯ ವೇಷಧಾರಿಯಿಂದ ವಾರ್ನಿಂಗ್ ನೀಡಿದ್ದಾರೆ. ಬೆಂಗಳೂರು ಹಲಸೂರು ಗೇಟ್ ಸಂಚಾರಿ ಪೊಲೀಸರು ಈ ವಿಶೇಷ ಅಭಿಯಾನ ಮಾಡುತ್ತಿದ್ದು ಹೆಲ್ಮೆಟ್ ಹಾಕದೆ ಇರುವ ಬೈಕ್ ಸವಾರರಿಗೆ ಯಮ ವೇಷಧಾರಿಯಿಂದ ಗುಲಾಬಿ ಹೂ ಕೊಟ್ಟು , ಜಾಗೃತಿ ಮೂಡಿಸಿ ವಾರ್ನಿಂಗ್ ಕೂಡಾ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಪ್ರಾಣ ಉಳಿಸಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕುಳಿತಿರುತ್ತಾನೆ ಎಂಬ ಸಂದೇಶವನ್ನು ಸಾರಿದರು. ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಸದ್ಯ ಈ ಅಭಿಯಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು ಇಂತಹ ವಿನೂತನ ಪ್ರಯೋಗಗಳ ಮೂಲಕ ಎಲ್ಲರೂ ಟಾಫಿಕ್ ನಿಯಮಗಳನ್ನು ಪಾಲಿಸುವಂತಾಗಲಿ ಎಂದು ಆಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top