ಮನೋರಂಜನೆ

ಕೋಟ್ಯಧಿಪತಿ ಶೋನಲ್ಲಿ ಪತ್ನಿ ರಾಧಿಕಾಗೆ ಕರೆ ಮಾಡಿ ಕಾಲೆಳೆದ ಯಶ್.

ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿವರುತ್ತಿರುವ ಕೋಟಿಗೆಲ್ಲುವ ಆಟದ ಓಟ ಅಡೆತಡೆಗಲ್ಲಿದೆ ಮುಂದುವರೆದಿದೆ ..ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಈ ವಾರದ ಅಥಿತಿಯಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಹೋಗಿರುವ ವಿಚಾರ ಅದಾಗಲೇ ಜಾಹೀರಾಗಿದೆ.. ಹಾಟ್ ಮೇಲೆ ಕೂತಿರುವ ಯಶ್ ಅವರ ಸಂಚಿಕೆಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾದು ಕುಳಿತಿದ್ದಾರೆ… ಹೀಗಿರುವಾಗ ಇದೀಗ ರಿಲೀಸ್ ಆಗಿರುವ ಪ್ರೋಮೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ಪ್ರಶ್ನೆಯೊಂದಕ್ಕೆ ಉತ್ತರ ಗೊತ್ತಿರದಿದ್ದಾಗ ಬಳಸಲಾಗುವ ಫೋನ್​ ಹೆಲ್ಫ್ ಲೈನ್​​ನಲ್ಲಿ ಯಶ್ ತಮ್ಮ ಪತ್ನಿ ರಾಧಿಕಾಗೆ ಫೋನ್ ಮಾಡಿ ರೇಗಿಸಿದ್ದಾರೆ.. ಪತ್ನಿ ಜೊತೆಗೆ ಮಾತಿಗಿಳಿದ ಯಶ್ ‘ಈ ಪ್ರಶ್ನೆಗೆ ನಿನಗೂ ಉತ್ತರ ಗೊತ್ತಿಲ್ಲ ಅಂತಾ ನನಗೆ ಚನ್ನಾಗಿ ಗೊತ್ತು​, ತುಂಬಾ ಹೊತ್ತಾಯ್ತು ಫೋನ್ ಮಾಡದೇ ಅದಕ್ಕೆ ಮಾತಾಡನಾ ಅಂತ ಮಾಡ್ದೆ,  ಸರಿ ಊಟ ಮಾಡು, ಷೋ ಮುಗಿಸಿ ಬೇಗ ಬರ್ತೀನಿ ‘ ಎಂದು ರಾಧಿಕಾರ ಕಾಲೆಳಿದಿದ್ದಾರೆ. ತಮಗೆ ಸಿಕ್ಕ ಮೂವತ್ತು ಸೆಕೆಂಡುಗಳ ಕಾಲಾವಕಾಶದಲ್ಲಿಯೇ ಎಲ್ಲರಿಗೂ ಚಮಕ್ ಕೊಟ್ಟ ಯಶ್ ಅವರ ತಮಾಷೆ ಕಂಡು ನಿರೂಪಕ ರಮೇಶ್ ಸೇರಿದಂತೆ ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕಿದ್ದಾರೆ.

ಅಂದಹಾಗೆ ಯಶ್ ಅತಿಥಿಯಾಗಿರುವ ಸಂಚಿಕೆ ಇದೇ ಶುಕ್ರವಾರ ಸಂಜೆ ಪ್ರಸಾರವಾಗಲಿದ್ದು ಅದಾಗಲೇ ಒಂದೆರಡು ಪ್ರೋಮೋಗಳು ರಿವೀಲ್ ಆಗಿವೇ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top