ಆರೋಗ್ಯ

ಈ ಗಿಡದ ಮಹತ್ವ ಹಾಗೂ ಔಷಧೀಯ ಗುಣದ ಬಗ್ಗೆ ಗೊತ್ತಾದ್ರೆ ನೀವು ಈ ಗಿಡವನ್ನು ತಂದು ನೆಟ್ಟು ಬೆಳೆಸುವುದು ಖಂಡಿತಾ.

ತುಂಬೆ ಗಿಡದ ಮಹತ್ವದ ಬಗ್ಗೆ ಗೊತ್ತಾದರೆ ನೀವು ಸಹ ಒಂದು ಗಿಡವನ್ನು ತಂದು ನೆಟ್ಟು ಬೆಳೆಸುತ್ತೀರಿ

ತುಂಬೆ ಗಿಡವನ್ನು ನೀವೆಲ್ಲರೂ ಸಹ ಗದ್ದೆಗಳಲ್ಲಿ ಹೊಲಗಳಲ್ಲಿ ಸಾಮಾನ್ಯವಾಗಿ ನೋಡಿರುತ್ತೀರ.ಇದು ಸಾಮಾನ್ಯವಾಗಿ ಗದ್ದೆಯನ್ನು ಕೊಯ್ದ ನಂತರ ಈ ತುಂಬೆ ಗಿಡವು ಗದ್ದೆಗಳಲ್ಲಿ ಬೆಳೆಯುತ್ತದೆ.
ತುಂಬೆಯು ಒಂದು ಪುಟ್ಟ ಗಿಡ.ಇದು ಹೆಚ್ಚಾಗಿ ಬಿಳಿಯ ಬಣ್ಣದ ಹೂಗಳನ್ನು ಬಿಡುತ್ತದೆ ಜೊತೆಗೆ ಅಪರೂಪಕ್ಕೆ ವಿವಿಧ ಬಣ್ಣದ ತುಂಬೆ ಹೂಗಳು ಅಲ್ಲಲ್ಲಿ ಕಂಡುಬರುತ್ತದೆ. ಇದರ ರೆಂಬೆ ಮತ್ತು ಕಾಂಡವು ತುಂಬಾ ಮೃದುವಾಗಿದ್ದು ತುಂಬಾ ಸುಲಭವಾಗಿ ಬಾಗುವಂತಹ ರಚನೆಯಲ್ಲಿ ಇರುತ್ತದೆ.ಇದರ ಎಲೆಗಳು ತೆಳುವಾಗಿದ್ದು ಉದ್ಧವಾಗಿರುತ್ತವೆ.

 

 

ಇದು ಬಿಳಿ ಬಣ್ಣದ ಹೂ ಅನ್ನು ಬಿಡುತ್ತದೆ ಹಾಗೆ ಇದರ ಹೂವಿನ ಕೆಳ ಭಾಗದಲ್ಲಿ ಸಿಹಿಯಾದ ರಸದ ರೂಪದಲ್ಲಿ ಇರುತ್ತದೆ.ಹಾಗೆ ಇದರಿಂದ ಅನೇಕ ಉಪಯೋಗಗಳಿವೆ.ಈ ತುಂಬೆ ಗಿಡದ ಬೇರು ಹೆಚ್ಚಿಗೆ ಆಳಕ್ಕೆ ಇರೋದಿಲ್ಲ ಮೇಲೆಯೇ ಇರುತ್ತದೆ ಇದರ ಉಪಯೋಗ ಕೇವಲ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ.

ಸಂಸ್ಕೃತದಲ್ಲಿ ಇದನ್ನು ದ್ರೋಣ ಪುಷ್ಪ, ಚಿತ್ರ ಪತ್ರಿಕಾ,ಚಿತ್ರ ಕ್ಷುಪ ಎಂದು ಕರೆಯುತ್ತಾರೆ . ಹಿಂದಿ ಭಾಷೆಯಲ್ಲಿ ಘೋಮ ಮಧುಮತಿ ಎಂದು ಕರೆಯುತ್ತಾರೆ.
ಇದರ ಉಪಯೋಗದ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ ಬನ್ನಿ.

ಇದು ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಔಷಧೀಯ ಸಸ್ಯವಾಗಿ ಪರಿಗಣಿಸಲ್ಪಟ್ಟಿದೆ, ಈ ಸಸ್ಯವು ಸಾಮಾನ್ಯವಾಗಿ ಭಾರತದಾದ್ಯಂತ ಮತ್ತು ಜಾವಾ,ಮಾರಿಷಸ್, ಫಿಲಿಪೈನ್ಸ್ ಮತ್ತು ಶ್ರೀಲಂಕಾ ದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಇದರ ಎಲೆಯ ರಸವನ್ನು ಕೀಟನಾಶಕ ಮತ್ತು ಜ್ವರ ನಿವಾರಕವಾಗಿ ಹೆಚ್ಚು ಬಳಸಲಾಗುತ್ತದೆ, ಉತ್ಕರ್ಷಣ ನಿರೋಧಕ ಮತ್ತು ಸೂಕ್ಶ್ಮ ಜೀವಿ ಪ್ರತಿರೋಧಕವಾಗಿ ಆಯುರ್ವೇದ ದಲ್ಲಿ ಬಳಸುವ ವಾಡಿಕೆಯಲ್ಲಿದೆ.
ಇದರ ಎಲೆಗಳನ್ನು ಬಹಳ ಕಾಲದವರೆಗೆ ಹಾವು ಕಡಿತಕ್ಕೆ ಔಷಧವಾಗಿ ಬಳಸುವುದು ವಾಡಿಕೆಯಲ್ಲಿತ್ತು. ಸಂಧಿವಾತ,ಚರ್ಮರೋಗ,ಕೆಮ್ಮು, ಗಂಟಲು ಬೇನೆ,ನೆಗಡಿ ಮುಂತಾದವುಳಿಗೆ ಮನೆಮದ್ದಾಗಿ ಬಳಸುವ ವಾಡಿಕೆಯಿದೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top