ಭವಿಷ್ಯ

13 ಜುಲೈ ರಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಲು ಮುಂದೆ ಓದಿ

ಶುಕ್ರವಾರ, ೧೩ ಜುಲೈ ೨೦೧೮
ಸೂರ್ಯೋದಯ : ೦೬:೦೮
ಸೂರ್ಯಾಸ್ತ : ೧೯:೧೯
ಶಕ ಸಂವತ : ೧೯೪೦ ವಿಲಂಬಿ
ಅಮಂತ ತಿಂಗಳು : ಜ್ಯೇಷ್ಠ

ಪಕ್ಷ : ಕೃಷ್ಣ ಪಕ್ಷ
ತಿಥಿ : ಅಮಾವಾಸ್ಯೆ – ೦೮:೧೭ ವರೆಗೆ
ನಕ್ಷತ್ರ : ಪುನರ್ವಸು – ೧೮:೫೯ ವರೆಗೆ
ಯೋಗ : ವ್ಯಾಘಾತ – ೦೮:೩೫ ವರೆಗೆ
ಸೂರ್ಯ ರಾಶಿ : ಮಿಥುನ

ಅಭಿಜಿತ್ ಮುಹುರ್ತ : ೧೨:೧೭ – ೧೩:೧೦
ಅಮೃತಕಾಲ : ೧೬:೫೨ – ೧೮:೧೭
ರಾಹು ಕಾಲ:೧೧:೦೫ – ೧೨:೪೪
ಗುಳಿಕ ಕಾಲ: ೦೭:೪೭ – ೦೯:೨೬
ಯಮಗಂಡ:೧೬:೦೧ – ೧೭:೪೦

 

ಮನೆಯಲ್ಲಿ ಅತಿಯಾದ ಬಿಗುವನ್ನುಂಟು ಮಾಡಿ. ಮಕ್ಕಳು ನಿಮ್ಮ ಭಾವನೆಗಳಿಗೆ ಸ್ಪಂದಿಸದೆ ಇರುವುದು ನಿಮಗೆ ಬೇಸರವನ್ನುಂಟು ಮಾಡುತ್ತದೆ. ಕುಲದೇವತಾ ಸ್ಮರಣೆ ಮಾಡಿ.

 

ಖರ್ಚಿನ ದೃಷ್ಟಿಯಿಂದ ಹೊಸದಾದ ಒತ್ತಡ ಎದುರಾದರೂ ಬೇರೆ ರೂಪಗಳಿಂದ ಹಣವು ಹರಿದು ಬರುವುದರಿಂದ ಅನುಕೂಲವಾಗುವುದು. ನಿಮ್ಮ ಕಾರ್ಯಗಳು ಸುಗಮವಾಗುವುದು. ನಿಮ್ಮ ಸಂತಸಕ್ಕೆ ಮಡದಿ ಮಕ್ಕಳು ಸಹಾಯ ಮಾಡುವರು.

 

ನಿಮಗೆ ತಿಳಿಯದಂತೆ ಕೆಲವು ಹಿತಶತ್ರುಗಳ ಕಾಟ ಆರಂಭವಾಗುವುದು. ಬೂದಿ ಮುಚ್ಚಿದ ಕೆಂಡದಂತೆ ಇರುವ ಕೆಲವರು ಏಕಾಏಕಿ ನಿಮ್ಮ ಮೇಲೆ ಏರಿ ಬರುವ ಸಂದರ್ಭವಿರುತ್ತದೆ. ಲಕ್ಷ್ಮೀನಾರಸಿಂಹದೇವರನ್ನು ಪ್ರಾರ್ಥಿಸಿ.

 

ಚಾಣಾಕ್ಷ ಮತಿಗಳಾದ ನೀವು ಯೋಚಿಸದೆ ಯಾವ ಕೆಲಸವನ್ನು ಮಾಡಲಾರಿರಿ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಮಾಡುವ ಕೆಲಸವು ಕೆಟ್ಟು ಹೋಗುವ ಸಾಧ್ಯತೆಗಳಿದ್ದು ಹೆಚ್ಚಿನ ಬೀಗುವಿಕೆಗಿಂತ ಬಾಗಿ ನಡೆಯುವುದೇ ಒಳ್ಳೆಯದು.

 

 

ಅರಿತು ನಡೆದರೆ ಆರು ವರ್ಷ ಮರೆತು ನಡೆದರೆ ಮೂರು ವರ್ಷ ಎಂಬಂತೆ ಕಚೇರಿಯ ಹಿರಿಯರ ಸಾಂಗತ್ಯದಲ್ಲಿ ನಿಮ್ಮ ಕೆಲಸಗಳು ಸುಗಮವಾಗಿರುವುದು. ಕಚೇರಿಯ ಅಧಿಕಾರಿಗಳೊಡನೆ ವಿನಾಕಾರಣ ಮನಃಸ್ತಾಪ ಮಾಡಿಕೊಳ್ಳದಿರಿ.

 

 

ಏಕಾಏಕಿ ಹೊಸ ಕಾರ್ಯಗಳನ್ನು ಆರಂಭಿಸುವುದು ಅಷ್ಟು ಸೂಕ್ತವಲ್ಲ. ಸ್ವಲ್ಪ ತಾಳ್ಮೆ ವಹಿಸಿರಿ. ಮುಂದೆ ಒಳಿತಾಗುವುದು. ಕುಲದೇವತಾ ಸ್ಮರಣೆ ಮಾಡಿ.

 

 

 ಜೀವನದಲ್ಲಿ ಅನೇಕ ಜಂಜಡಗಳನ್ನು ಎದುರಿಸಿ ಹೈರಾಣ ಆಗಿದ್ದೀರಿ. ಈಗಿನ ಪರಿಸ್ಥಿತಿಯಿಂದ ಹೊರಬಂದರೆ ಸಾಕು ಎನ್ನುವ ಮಟ್ಟಿಗೆ ರೋಸಿಹೋಗಿದ್ದೀರಿ. ಅದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಕತ್ತಲೆ ಕಳೆದು ಬೆಳಕು ಮೂಡುವುದು.

 

 

ಅದೆಷ್ಟೋ ದಿನಗಳಿಂದ ಸಾಧಿಸಲು ಸಾಧ್ಯವಾಗಿರದ ವಿಚಾರವೊಂದಕ್ಕೆ ಮಕ್ಕಳ ಬೆಂಬಲ ಲಭಿಸಿ ಕಾರ್ಯ ಸಿದ್ಧಿಗೆ ದಾರಿ ಆಗುವುದು. ಪ್ರತಿಯೊಂದು ಕ್ಷ ಣಗಳನ್ನು ಆನಂದದಿಂದ ಅನುಭವಿಸುವಿರಿ.

 

ನಿಮ್ಮ ಮನೆಯಲ್ಲಿನ ಶುಭ ಕಾರ್ಯವೊಂದಕ್ಕೆ ಅವಕಾಶ ಕೂಡಿಬರುವುದು. ಇದರಿಂದ ಇಷ್ಟಮಿತ್ರ ಬಂಧುಬಾಂಧವರು ಒಂದೆಡೆ ಸೇರುವರು. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡುವುದು.

 

 

ನಿಗೂಢವಾದ ಸಕಾರಾತ್ಮಕ ಶಕ್ತಿಯೊಂದು ನಿಮ್ಮ ಭವಿಷ್ಯವನ್ನು ರೂಪಿಸುವಂತಹ ವಿಚಾರವು ಗಮನಕ್ಕೆ ಬರಬಹುದು. ನಿಮ್ಮ ಆರಾಧ್ಯ ದೈವವನ್ನು ಮನಸಾ ಪ್ರಾರ್ಥಿಸಿ. ನಿಮಗೆ ಶುಭ ಸುದ್ದಿ ದೊರೆಯಲಿದೆ.

 

ಅನ್ಯರು ಮಾಡಿರದ ಕೆಲಸವನ್ನು ಮಾಡುವ ಅಥವಾ ಮಾಡಿಸಿ ತೋರಿಸುವ ಜವಾಬ್ದಾರಿ ನಿಮ್ಮ ಮೈಮೇಲೆ ಬರುವುದು. ಅದಕ್ಕಾಗಿ ಗಾಬರಿ ಪಡಬೇಡಿ. ದೈವಕೃಪೆ ನಿಮ್ಮ ಮೇಲೆ ಇದ್ದು ಅದರಲ್ಲಿ ಜಯಶೀಲರಾಗುವಿರಿ.

 

ಶತ್ರುವು ಹೈರಾಣಾಗಿ ಶರಣಾಗಿದ್ದಾನೆಂದು ಸರ್ರನೆ ನಿರ್ಧಾರಕ್ಕೆ ಬಂದು ಬಿಡಬೇಡಿ. ಬೂದಿಮುಚ್ಚಿದ ಕೆಂಡದಂತೆ ಆತನು ಉತ್ತಮ ಸಮಯಕ್ಕಾಗಿ ಕಾದು ಕುಳಿತಿರುವನು. ನಿಮ್ಮ ಬಿಗಿಯನ್ನು ಸಡಿಲಾಗದಂತೆ ನೋಡಿಕೊಳ್ಳಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top