ಸಮಾಚಾರ

ವಿಶ್ವದ ಅತಿ ಉದ್ದದ ಜಿಪ್‌ಲೈನ್‌ ಮೇಲೆ ಗೆಳತಿಗೆ ಮ್ಯಾರೇಜ್ ಪ್ರಪೋಸ್ ಮಾಡಿ ಸರ್ಪ್ರೈಸ್ ಕೊಟ್ಟ ಬೆಂಗ್ಳೂರ್ ಯುವಕ

ಬೆಂಗಳೂರಿನ ಅಡ್ರಿಯನ್ ಮಾರ್ಕಸ್ ಮ್ಯಾಕೆ ಎಂಬ ಯುವಕ ಕೆಲವು ದಿನಗಳ ಹಿಂದೆ ತನ್ನ ಗೆಳತಿಯನ್ನು ವಿಶ್ವದ ಅತಿ ಉದ್ದವಾದ ಜಿಪ್‌ಲೈನ್‌ ಗೆ ಕರೆದೊಯ್ದಿದ್ದು ಅಲ್ಲಿಯೇ ಅವಳಿಗೆ ಮ್ಯಾರೇಜ್ ಪ್ರಪೋಸ್ ಮಾಡಿರುವ ಘಟನೆ ನಡೆದಿದೆ. ಸದ್ಯ ಆತ ಪ್ರೊಪೋಸ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಂಯುಕ್ತ ಅರಬ್ ಸಂಸ್ಥಾಪನೆಗಳಲ್ಲಿ ಅತಿ ದೊಡ್ಡ ಬೆಟ್ಟದಲ್ಲಿ ಈ ಜಿಪ್‌ಲೈನ್‌ ಇದ್ದು, ಅಲ್ಲಿ ಮೂವತ್ತು ವರ್ಷದ ಬೆಂಗಳೂರಿನ ಅಡ್ರಿಯನ್ ಮಾರ್ಕಸ್ ಮ್ಯಾಕೆ ಅವರು ತನ್ನ ಗೆಳತಿ ಸುಸಾನ್ ಕುರುವಿಲ್ಲಾ ಅವರಿಗೆ ಮಂಡಿಯೂರಿ ಪ್ರೊಪೋಸ್ ಮಾಡಿದ್ದಾರೆ ಗೆಳೆಯನ ಪ್ರೊಪೋಸ್ ನ್ನು ಆತ್ಮೀಯತೆಯಿಂದ ಸ್ವೀಕಾರ ಮಾಡಿರುವ ಗೆಳತಿ ಅತ್ಯಂತ ಖುಷಿ ಪಟ್ಟರು ಎಂದು ತಿಳಿದು ಬಂದಿದೆ.

 

 

ನನ್ನನ್ನು ಮದುವೆ ಆಗುವೆಯ ಎಂದು ಅಡ್ರಿಯನ್ ತನ್ನ ಗೆಳತಿಗೆ ಕೇಳಿದಾಗ ಯಸ್ ಎಂದು ಹೇಳುತ್ತಲೇ ಆನಂದ ಭಾಷ್ಪ ಸುರಿಸಿದಳು ಎಂದು ತಿಳಿದು ಬಂದಿದೆ. ನಂತರ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅಡ್ರಿಯನ್, “ನಮ್ಮ ನಿಶ್ಚಿತಾರ್ಥವನ್ನು ಅನನ್ಯವಾಗಿರಿಸಲು ನಾನು ವಿಶೇಷವಾಗಿ ಏನಾದರೂ ಮಾಡಲು ಬಯಸಿದ್ದೇ, ನನಗೆ ಆಗ ಹೊಳಿದಿದ್ದೆ ವಿಶ್ವದ ಅತಿ ಉದ್ದವಾದ ಜಿಪ್ಲೈನ್, ಅಲ್ಲಿ ನಾನು ಮ್ಯಾರೇಜ್ ಪ್ರಪೋಸ್ ಮಾಡಲು ಸೂಕ್ತವಾದ ಜಾಗ ಎಂದು ನಾನು ನಿರ್ಧಾರ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವದ ಅತಿ ಉದ್ದವಾದ ಜಿಪ್‌ಲೈನ್‌ ನಲ್ಲಿ ನನ್ನ ಗೆಳತಿಗೆ ಪ್ರಪೋಸ್ ಮಾಡಿದ್ದೂ ಮರೆಯಲಾರದ ಕ್ಷಣ ಎಂದು ಅವರು ಹೇಳಿದ್ದಾರೆ. ಇಲ್ಲಿನ ಜಿಪ್‌ಲೈನ್‌ನಿರ್ವಹಣಾ ಆಡಳಿತ ಮಂಡಳಿ ಇವರಿಗೆ ಉದ್ದವಾದ ಜಿಪ್‌ಲೈನ್‌ ನಲ್ಲಿ ಪ್ರಪೋಸ್ ಮಾಡಲು ಎಲ್ಲ ಏರ್ಪಾಡು ಮಾಡಿಕೊಟ್ಟಿತ್ತು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top