ಸಿನಿಮಾ

ಎಲ್ಲರ ಫೇವರಿಟ್ ಬಿಗ್ ಬಾಸ್ ನ ಸ್ಟಾರ್ಟ್ ಡೇಟ್ ಫಿಕ್ಸ್ ಆಗಿಬಿಡ್ತು ನೋಡಿ ಸ್ವಾಮಿ !!

ಎಲ್ಲರ  ಫೇವರಿಟ್ ಯಾವಾಗಲು ಹೈ ಟಿ ರ್ ಪಿ ಹೊಂದಿರುವಂತ ಕನ್ನಡ ಪ್ರೇಕ್ಷಕರ ಮನ ಮೆಚ್ಚಿದ ಕಂಚಿನ ಕಂಠದ ಅಭಿನಯ ಚಕ್ರವತಿ ನಡೆಸಿಕೊಡುವ ಬಿಗ್​ಬಾಸ್​ ಸೀಸನ್​-6 ನ ಡೇಟ್ ಕೊನೆಗೂ ನಿಗದಿ ಆಗಿಬಿಡ್ತು.

ದೊಡ್ಡ ದೊಡ್ಡ ರಿಯಾಲಿಟಿ ಷೋಗಳ ಹೆಸರಲ್ಲಿ ಮೊದಲಿಗೆ ನಮಗೆ ಕೇಳಿ ಬರುವ ಮೊದಲ ಹೆಸರು ಈ ಬಿಗ್ ಬಾಸ್ ,ಇಲ್ಲಿನ ತನ್ನಕ 5 ಸೀಸನ್ ಗಳು ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ ,ಈಗ ಎಲ್ಲರೂ ತುಂಬಾ ದಿನದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್ 6 ರ ಸಮಯ ಮತ್ತೆ ಪ್ರೇಕ್ಷಕರನ್ನು ಮನರಂಜಿಸಲು ಇದೇ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗ್ತಿದೆ.

ಆದರೆ ಅನೇಕ ತಿಂಗಳುಗಳಿಂದ ಈ ಬಾರಿ ಬಿಗ್​ಬಾಸ್​ನ ಹೋಸ್ಟ್​ ಯಾರೆಂಬ ಗೊಂದಲ ಹಾಗೂ ಅನೇಕ ಊಹಾಪೋಹ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಲೇ ಇತ್ತು,ಅನೇಕರು ಬಿಗ್ ಬಾಸ್ ಸುದೀಪ್ ರವರು ಬಿಟ್ಟರೆ ಬೇರೆ ಯಾರು ಅವರ ಹಾಗೇ ಈ ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವಿಲ್ಲ ಎಂದು ಅನೇಕ ಚರ್ಚೆಗಳನ್ನು ಮಾಡಿದರು ,ಈ ಎಲ್ಲ ಚರ್ಚೆಗಳಿಗೂ ಈಗ ಕೊನೆಗೂ ತೆರೆ ಬಿದ್ದಿದೆ.
ಎಂದಿನಂತೆ ಜನರ ಮೆಚ್ಚುಗೆ ಯಂತೆ ಕಿಚ್ಚ ಸುದೀಪ್ ರವರೆ ಈ ಮುಂದೆ ಬರುವ ಸೀಸನ್ ಅನ್ನು ನಡೆಸಿಕೊಡಲಿದ್ದಾರೆ.

 

 

ಹಾಗೂ ಈಗಾಗಲೇ ಬಿಗ್ ಬಾಸ್ ತಂಡ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ,ಎಂದಿನಂತೆ ಬಿಗ್ ಬಾಸ್ ನ ಸ್ವರ್ದಿಗಳ ಆಯ್ಕೆ ಶುರುವಾಗಿದ್ದು ,ಅಂದ-ಚಂದದ ಅರಮನೆಯಂತ ಬಿಗ್ ಬಾಸ್ ಮನೆ ನಿರ್ಮಾಣ ಬಿಡದಿಯ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಲಿದೆ ಹಾಗೂ ಬೇಕಾದ ಸಕಲ ಸಿದ್ಧತೆಗಳನ್ನು ಕಾರ್ಯಕ್ರಮ ತಂಡ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಿಗ್ ಬಾಸ್ ಮನೆಗೆ ಯಾರು ಹೋಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ ,ಈಗಾಗಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹೋಗುತ್ತಾರೆ ಇವರು ಹೋಗುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದೆ .

ಅಲ್ಲದೆ ಈ ಸೀಸನ್ ನ ಪಟ್ಟಿ ಹಾಗೂ ಯಾವ ಯಾವ ಹೊಸ ಹೊಸ ರೂಲ್ಸ್ ,ಹೊಸ ರೀತಿಯಲ್ಲಿ ಮೂಡಿಬರಲಿದೆ ಎಂದು ಕಾದುನೋಡಬೇಕು.ಇನ್ನು ಚಂದನವನದ ಕಂಚಿನ ಕಂಠದ ಸುದೀಪ್​ ನಡೆಸಿಕೊಡುತ್ತಿರುವ ಬಿಗ್​ಬಾಸ್​ ಸೀಸನ್​ 6 ಕಾರ್ಯಕ್ರಮ ಕಲರ್ಸ್​ ಸೂಪರ್​ನಲ್ಲಿ ಸೆ. 6 ರಿಂದಲೇ ಪ್ರಾರಂಭ ಮಾಡಬೇಕು ಎಂದು ವಾಹಿನಿ ಮುಖ್ಯಸ್ಥರು ಮತ್ತು ಕಾರ್ಯಕ್ರಮದ ರುವಾರಿಗಳು ಮಾತುಕತೆ ನಡೆಸಿದ್ದು, ಶೀಘ್ರದಲ್ಲಿಯೇ ಬಿಗ್​ಬಾಸ್​ ನಿಮ್ಮ ಮನೆಮನೆಗೆ ಇಂತಹದ್ದೇ ದಿನ ಬರಲಿದೆ ಎಂಬುದನ್ನು ಆದಷ್ಟು ಬೇಗ ಸ್ಪಷ್ಟಪಡಿಸಲಿದ್ದಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top