ಸಿನಿಮಾ

ಹೀರೋ ಆಗೋ ಚಾನ್ಸ್ ಬಂದಿದ್ದರೂ ಚಿಕ್ಕಣ್ಣ ಒಪ್ಪಿಕೊಳ್ಳದಿರೋದು ಇದೇ ಕಾರಣಕ್ಕಂತೆ.

ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಮುಖ್ಯವಾಗಿ ಹಾಸ್ಯಮಯ ಪಾತ್ರಗಳಲ್ಲಿ ಅಭಿನಯ ಮಾಡುತ್ತಾರೆ. ಯಶ್ ನಾಯಕತ್ವದ ಕಿರಾತಕ ಇವರ ಮೊದಲ ಚಿತ್ರ. ರಾಜಹುಲಿ ಮತ್ತು ಅಧ್ಯಕ್ಷ ಚಿತ್ರ ಗಳಲ್ಲಿನ ಇವರ ಹಾಸ್ಯಮಯ ನಟನೆಯಿಂದ ಕನ್ನಡದ ಒಬ್ಬ ಅತ್ತ್ಯುತ್ತಮ ಹಾಸ್ಯನಟ ಎನಿಸಿಕೊಂಡಿದ್ದಾರೆ. ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಕಾಮಿಡಿ ಪಾತ್ರಗಳಲ್ಲಿ ಮಿಂಚಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟ ಎನಿಸಿರುವ ಚಿಕ್ಕಣ್ಣ ಅವರು ಅಭಿನಯ ಮಾಡಿರುವ ‘ಸಂಹಾರ’, ‘ಱಂಬೋ 2′, `ಅಮ್ಮ ಐ ಲವ್ ಯೂ’, `ಕನ್ನಡಕ್ಕಾಗಿ ಒಂದನ್ನು ಒತ್ತಿ’ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಈ ವಾರ ಅವರ ಮತ್ತೊಂದು ಚಿತ್ರ ‘ಡಬ್ಬಲ್ ಇಂಜಿನ್’ ಕೂಡ ರಿಲೀಸ್ ಆಗಲಿದೆ. ಇದರ ನಡುವೆಯೇ ಚಿಕ್ಕಣ್ಣ ಏಳೆಂಟು ಸಿನಿಮಾಗಳಿಗೆ ಒಪ್ಪಿಕೊಂಡಿದ್ದಾರಂತೆ.

 

 

ಚಿಕ್ಕಣ್ಣ ಈಗ ಮೋಸ್ಟ ಬ್ಯುಸಿ ಪರ್ಸನ್ ಆಗಿದ್ದು ಪುನೀತ್ ರಾಜಕುಮಾರ್ ಅಭಿನಯದ `ನಟಸಾರ್ವಭೌಮ’, ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’, ಚಿರಂಜೀವಿ ಸರ್ಜಾ ಅಭಿನಯದ `ರಾಜ ಮಾರ್ತಾಂಡ’, ಶ್ರೇಯಸ್ ಅಭಿನಯದ `ಪಡ್ಡೆಹುಲಿ’, ಮಂಜು ಮಾಂಡವ್ಯ ಅಭಿನಯ ಮತ್ತು ನಿರ್ದೇಶನದ `ಭರತ ಬಾಹುಬಲಿ’, ಹೊಸಬರ ‘ಹೌಸ್ ಫಾರ್ ಸೇಲ್’ ಚಿತ್ರಗಳಿಗೆ ಒಪ್ಪಿಕೊಂಡಿದ್ದಾರೆ.

ಚಿಕ್ಕಣ್ಣ ಹೀರೋ ಆಗಬೇಕೆಂದು ಅಸೆ ಅವರ ಅಪಾರ ಅಭಿಮಾನಿಗಳಿಗೆ ಇದೆ. ರಾಜಾಹುಲಿ ಸಿನಿಮಾ ಮುಗಿಸಿದ ಬಳಿಕ ಚಿಕ್ಕಣ್ಣ ಅವರಿಗೆ ಹೀರೋ ಆಗುವ ಚಾನ್ಸ್ ಬಂದಿತ್ತಂತೆ. ಆದರೆ ಹೀರೋ ಆಗುವದು ದೊಡ್ಡ ಜವಾಬ್ದಾರಿಯ ವಿಚಾರ. ಗೆದ್ದರೆ ಪರವಾಗಿಲ್ಲ. ಗೆಲ್ಲದಿದ್ದರೆ ಜನ ಆಮೇಲೆ ಬೇರೆ ಚಿತ್ರಗಳಿಗೆ ಕರೆಯುವುದಕ್ಕೂ ಹಿಂಜರಿಯುತ್ತಾರೆ ಎಂದು ಚಿಕ್ಕಣ್ಣ ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top