ಸಿನಿಮಾ

ಆಟೋ ಚಾಲಕನಾಗಿ ಬೆಂಗಳೂರು ಸುತ್ತಿದ ಧ್ರುವ ಸರ್ಜಾ

ಒಂದಾದ ಬಳಿಕ ಮತ್ತೊಂದು ಹಿಟ್ ಚಿತ್ರಗಳನ್ನು ನೀಡುತ್ತಾ ಮುಂಚೂಣಿಯಲ್ಲಿ ಸಾಗುತ್ತಿರುವ ನಟ ಧ್ರುವ ಸರ್ಜಾ ಈಗ ಆಟೋ ಚಾಲಕನಾಗಿ ಬೆಂಗಳೂರು ಸುತ್ತುತ್ತಿದ್ದಾರೆ. ಅರೆರೇ ಧ್ರುವ ಯಾಕೆ ಆಟೋ ಓಡಿಸುತ್ತಿದ್ದಾರೆ ಎಂದು ನೀವು ಯೋಚಿಸುತ್ತಿದ್ದೀರಾ ಹಾಗಾದರೆ ಮುಂದೆ ಓದಿ.

 

 

ಇಲ್ಲಿವರೆಗೂ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದ ಧ್ರುವ ಈಗ ಕಿರುತೆರೆಗೆ ಬರುವ ಪ್ಲಾನ್ ಮಾಡುತ್ತಿದ್ದಾರೆ .ಹೌದು, ಜನಪ್ರಿಯ ಸೆಲಬ್ರಿಟಿಗಳು ಜನ ಸಾಮಾನ್ಯರಂತೆ ಕೆಲಸ ಮಾಡಿ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ‘ಸದಾ ನಿಮ್ಮೊಂದಿಗೆ’ ಎಂಬ ಟಿವಿ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ಜನ ಸಾಮಾನ್ಯರಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ‘ಸದಾ ನಿಮ್ಮೊಂದಿಗೆ’ ಷೋ ಸೃಜನ್ ಲೋಕೇಶ್ ಹೋಸ್ಟ್ ಮಾಡುತ್ತಿದ್ದಾರೆ.

 

ಕನ್ನಡದ ಖ್ಯಾತ ಚಾನೆಲ್ ಉದಯ ವಾಹಿನಿಯಲ್ಲಿ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮ ಇದೇ ಜು.15ರ ಭಾನುವಾರದಿಂದ ಶುರು ಆಗಲಿದೆ. ಈ ಷೋ ಪ್ರಥಮ ಸಂಚಿಕೆಯಲ್ಲಿ ಸರ್ಜಾ ಧ್ರುವ ಸರ್ಜಾ, ನರೇಂದ್ರ ಕುಮಾರ್ ಎಂಬ ಆಟೋ ಡ್ರೈವರ್ ಒಬ್ಬರ ಆಟೋ ಓಡಿಸುವ ಮೂಲಕ ಅವರಿಗೆ ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ಆಟೋ ಹತ್ತಿದ ಧ್ರುವ ಅವರಿಗೆ ಮೊದಲ ಕಸ್ಟಮರ್ ಆಗಿ ಗರ್ಭಿಣಿ ಮಹಿಳೆ ಅವರ ಆಟೋ ಹತ್ತುತ್ತಾರೆ. ಆ ಮಹಿಳೆಯನ್ನು ಆಸ್ಪತ್ರೆಗೆ ಬಿಡುವ ಧ್ರುವ ಅವರ ಬಳಿ ದುಡ್ಡು ತೆಗೆದುಕೊಳ್ಳದೆ ತಾನೇ ಅವರ ಪ್ರಯಾಣದ ದುಡ್ಡು ಬರಿಸುತ್ತಾರೆ.

ಈ ಷೋ ಮುಂದಿನ ಸಂಚಿಕೆಯಲ್ಲಿ ನಟ ಶ್ರೀಮುರಳಿ, ರಶ್ಮಿಕಾ ಮಂದಣ್ಣ, ಪ್ರಿಯಾಮಣಿ, ಧನಂಜಯ್ ಸೇರಿದಂತೆ ಹಲವರು ಭಾಗವಹಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top