ಹೆಚ್ಚಿನ

ಮನೆಯಲ್ಲಿ ಯಾವ ರೀತಿಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಿದರೆ ದೋಷ ,ದರಿದ್ರ ಬರುವುದಿಲ್ಲ?ತಿಳ್ಕೊಳ್ಳಿ

ಕೆಲವು ಮನೆಗಳಲ್ಲಿ ದೊಡ್ಡ ದೊಡ್ಡ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಇನ್ನು ಕೆಲವು ಮನೆಗಳಲ್ಲಿ ಸಣ್ಣಪುಟ್ಟ ವಿಗ್ರಹಗಳನ್ನು ಇಟ್ಟು ಪೂಜಿಸುತ್ತಾರೆ .ಅದರಲ್ಲೂ ಕೆಲವು ಮನೆಗಳಲ್ಲಿ ದೊಡ್ಡ ವಿಗ್ರಹಗಳನ್ನು ಇಟ್ಟು ಪೂಜೆ ಮಾಡಿದರೆ ಸಾಕಷ್ಟು ಒಳ್ಳೆಯದಾಗುತ್ತದೆ ಎಂದು ಕೆಲವು ಜನರು ನಂಬುತ್ತಾರೆ. ಆದರೆ ಇನ್ನೂ ಕೆಲವರು ಅದರಿಂದ ಸಾಕಷ್ಟು ಕಷ್ಟಗಳೇ ಬರುತ್ತವೆ ಎಂದು ಹೇಳುತ್ತಾರೆ. ಇದು ಯಾಕೆ ? ಮತ್ತು ಯಾವ ರೀತಿಯ ? ವಿಗ್ರಹಗಳನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಿದರೆ ಒಳ್ಳೆಯದು ?

ಮೊದಲು ನಾವು ವಿಗ್ರಹವನ್ನು ಇಟ್ಟು ಪೂಜೆ ಮಾಡುವುದು ಯಾವ ಕಾರಣಕ್ಕಾಗಿ ? ನಮ್ಮಲ್ಲಿ ಇರುವ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗಲಿ. ದರ್ಶನ ಭಾಗ್ಯದಿಂದ ಮಾಡಿರುವ ದೋಷಗಳು ಪರಿಹಾರವಾಗಲಿ ಎನ್ನುವ ಉದ್ದೇಶ ಅಷ್ಟೇ. ದೇವರ ಮನೆಯಲ್ಲಿ ವಿಗ್ರಹಗಳನ್ನು ಇರಬೇಕು ನಿಜ. ಆದರೆ ಎಷ್ಟು ಪ್ರಮಾಣದಲ್ಲಿ ಇರಬೇಕು . ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೆ ಬರೀ ದೇವರ ನಾಮಗಳು, ದೇವರ ಪೂಜೆಗಳು ಎಂದು ದೇವರ ಮನೆಯಲ್ಲಿ ಸೇರಿಕೊಂಡಿರುತ್ತಾರೆ .ಇದೇ ಕೆಲಸ ಮಾಡಿಕೊಂಡಿರುತ್ತಾರೆ.

 

 

ಆದರೆ ಖಂಡಿತವಾಗಿಯೂ ಹಾಗೆ ಮಾಡಬಾರದು. ವ್ಯವಸ್ಥಿತವಾಗಿ ಪ್ರಾತಃ ಕಾಲದಲ್ಲಿ ಮತ್ತು ಮಾಧ್ಯನಿಕ, ಸಾಯಂಕಾಲ ಅಷ್ಟೇ ದೊಡ್ಡ ದೊಡ್ಡ ಗುಡಿ ಗೋಪುರಗಳಲ್ಲಿ ನಡೆಯುವುದು ತ್ರಿಕಾಲ ಆರಾಧನೆ. ದೊಡ್ಡ ತಿರುಪತಿಯ ದೇವಸ್ಥಾನದಲ್ಲಿಯೂ ಕೂಡ ಪ್ರಾತಃಕಾಲದಲ್ಲಿ ಒಂದು ಆರಾಧನೆ, ಮಾಧ್ಯಾನಿಕ ಆರಾಧನೆ ಮತ್ತು ಸಾಯಂಕಾಲ ಆರಾಧನೆ. ಈಗ ನಾವೇನು ಮಾಡಬೇಕು ? ಎಂದರೆ ಗೃಹಸ್ಥ ಆಶ್ರಮ ಎನ್ನುವುದನ್ನು ನಾವು ನಡೆಸುತ್ತೇವೆ. ಗೃಹಸ್ಥ ಆಶ್ರಮ ಆಗಿರುವುದರಿಂದ ನಾವು ಒಂದು ಹೊತ್ತು ಅಥವಾ ಎರಡು ಹೊತ್ತು ಪೂಜೆ ಮಾಡುವ ಪದ್ಧತಿಯನ್ನು ನಾವು ಪಾಲಿಸಬೇಕು. ಇದು ಗುರುಗಳು ಕೂಡ ಹೇಳಿರುವ ವಿಚಾರವೇ .
ಯಾವ ಪ್ರಮಾಣದಲ್ಲಿ ವಿಗ್ರಹ ಇರಬೇಕು ? ಬಹಳಷ್ಟು ಜನ ದೊಡ್ಡ ದೊಡ್ಡ ವಿಗ್ರಹಗಳನ್ನು ತಂದು ಮನೆಯ ಬಾಗಿಲಲ್ಲೇ ಇಡುತ್ತಾರೆ.

ಉದಾಹರಣೆಗೆ – ಗಣೇಶನ ದೊಡ್ಡ ದೊಡ್ಡ ವಿಗ್ರಹಗಳನ್ನು ತಂದು ಮನೆಯ ಬಾಗಿಲಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆ ಮಾಡಬಾರದು. ದೊಡ್ಡ ವಿಗ್ರಹಗಳನ್ನು ಇಡುವುದೇನೋ ಸರಿ. ಆದರೆ ಅದಕ್ಕೆ ವ್ಯವಸ್ಥಿತವಾಗಿ ಆರಾಧನೆ, ಪೂಜಾ ಕೈಂಕರ್ಯಗಳನ್ನು ಮಾಡುತ್ತಿದ್ದೀರೇ ? ಎನ್ನುವುದು ಮುಖ್ಯ. ದೊಡ್ಡ ವಿಗ್ರಹಗಳನ್ನು ಇಟ್ಟರೆ ,ಕಡೆ ಪಕ್ಷ ಪ್ರತಿನಿತ್ಯ ಅದಕ್ಕೆ ಷೋಡಶ ಉಪಚಾರಗಳನ್ನು ಮಾಡಬೇಕು
ಷೋಡಶ ಉಪಚಾರ ಎಂದರೆ ಅರ್ಘ್ಯ, ಆದ್ಯ, ಆಚಮನೀಯ, ಸ್ನಾನ ,ಧೂಪ, ದೀಪ, ವಸ್ತ್ರ, ಅರ್ಚನೆ, ನೈವೇದ್ಯ, ಪೂಜೆ, ನಮಸ್ಕಾರ ಇಷ್ಟನ್ನು ಕೂಡ ಮಾಡಲೇಬೇಕು. ಯಾರೂ ದೊಡ್ಡ ವಿಗ್ರಹಗಳನ್ನು ನಿಮ್ಮ ಮನೆಯಲ್ಲಿ ಇಟ್ಟು, ಷೋಡಶ ಉಪಚಾರಗಳನ್ನು ನೀವು ಯಾರು ಮಾಡುತ್ತಿಲ್ಲವೋ, ಅದರಿಂದ ಕೆಟ್ಟ ಶಕ್ತಿಗಳು ನಿಮ್ಮ ಮನೆಗೆ ಆಹ್ವಾನವಾಗುತ್ತವೆ.

ನಕಾರಾತ್ಮಕ ಶಕ್ತಿಗಳು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ವಿಘ್ನಗಳನ್ನು ತಂದೊಡ್ಡುತ್ತದೆ .ಕೆಲವರು ಹೇಳುತ್ತಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು. ಇದಕ್ಕೆ ಕಾರಣ ಏನು ? ನೀವೇ ಮಾಡುವ ತಪ್ಪುಗಳು ? ನೀವೇ ತಪ್ಪುಗಳನ್ನು ಸರಿ ಮಾಡಿಕೊಳ್ಳಬೇಕು ? ಅದಕ್ಕೆ ದೊಡ್ಡವರು ಏನು ಹೇಳುತ್ತಾರೆ ? ದೇವರ ಮನೆ ಅಂದರೆ ಗೃಹಸ್ಥಾಶ್ರಮದಲ್ಲಿ ,ಪೂಜಾಗೃಹದಲ್ಲಿ ಮುಷ್ಟಿಯಲ್ಲಿ ಹಿಡಿಯುವಂತಹ ವಿಗ್ರಹಗಳನ್ನು ಮಾತ್ರ ಇಟ್ಟು ಆರಾಧನೆಯನ್ನು ಮಾಡಬೇಕು ದೊಡ್ಡ ವಿಗ್ರಹಗಳನ್ನು ನೀವು ಇಟ್ಟರೆ ವ್ಯವಸ್ಥಿತವಾಗಿ ಅದಕ್ಕೆ ಉತ್ಸವಗಳನ್ನು ಮಾಡಬೇಕಾಗುತ್ತದೆ. ಈ ಉತ್ಸವಗಳನ್ನು ನೀವು ಮಾಡಲಿಲ್ಲ ಎಂದರೆ ದೋಷದ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದೆ.ಆದ್ದರಿಂದಲೇ ಹಿರಿಯರು ಹೇಳಿದ್ದಾರೆ ಮುಷ್ಟಿ ಹಿಡಿಸುವ ವಿಗ್ರಹ ಇಡಬೇಕೆಂದು. ಅದರಲ್ಲೂ ವಿಗ್ರಹಗಳನ್ನು ಇಡಲೇಬೇಕು ಎನ್ನುವ ಪದ್ಧತಿ ಏನೂ ಇಲ್ಲ.
ಮುಖ್ಯವಾಗಿ ನಮ್ಮ ಇಂದೂ ಸಂಪ್ರದಾಯದಲ್ಲಿ ಬಂದಿರುವುದು ಸಾಲಿಗ್ರಾಮ ಅಥವಾ ಸಾಲಿ ಗ್ರಾಮದ ಲಿಂಗಗಳನ್ನು ಇಡುವುದು. ಅದರಲ್ಲೂ ಸಣ್ಣ ಪ್ರಮಾಣದ ಲಿಂಗಗಳನ್ನು ಇಟ್ಟು ಆರಾಧನೆ ಮಾಡುವುದನ್ನು, ನಮ್ಮ ಹಿರಿಯರು ಋಷಿಗಳು, ಮಹರ್ಷಿಗಳು ,ಆಗಿನ ಕಾಲದಿಂದಲೇ ನಮಗೆ ತೋರಿಸಿಕೊಟ್ಟಿದ್ದಾರೆ. ಅದರಲ್ಲೂ ಹೆಚ್ಚಾಗಿ ಹೇಳಬೇಕೆಂದರೆ ವಿಗ್ರಹಗಳನ್ನು ಇಟ್ಟು ಪೂಜಿಸುವುದು ಕೇವಲ ನಮ್ಮ ಆತ್ಮ ತೃಪ್ತಿಗಾಗಿ ಅಷ್ಟೇ. ಹೆಚ್ಚಾಗಿ ನಾವು ಆಗಿನ ಕಾಲದಿಂದಲೂ ಸಾಲಿಗ್ರಾಮವನ್ನು ಇಟ್ಟು ಆರಾಧನೆ ಮಾಡಬೇಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top