ಮನೋರಂಜನೆ

ಎವರ್‌ಗ್ರೀನ್ ನಾಗರಹಾವಿನ ಬಗ್ಗೆ ಚಿತ್ರರಂಗದ ಗಣ್ಯರು ಅಭಿಮಾನ ವ್ಯಕ್ತಪಡಿಸಿದ್ದು ಹೀಗೆ

ಸಾಹಸಸಿಂಹ ವಿಷ್ಣವರ್ಧನ್ ನಮ್ಮಿಂದ ದೈಹಿಕವಾಗಿ ಮರೆಯಾಗಿ ವರ್ಷಗಳೇ ಕೆಳದರೂ ಅವರ ನೆನಪು ಮಾತ್ರ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಜರಾಮರ… ಅವ್ರ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಮನೆಮಾಡಿದ್ದಾರೆ.. ಆದರೀಗ ವಿಷ್ಣುದಾದರನ್ನು ಮತ್ತೆ ತೆರೆಮೇಲೆ ನೋಡೋ ಅವಕಾಶ ಸಿಕ್ಕಿದೆ. ಅದು ನಾಗರಹಾವು ಚಿತ್ರದ ಮೂಲಕ. 1972ರಲ್ಲಿ ತೆರೆಕಂಡಿದ್ದ ನಾಗರಹಾವು ಚಿತ್ರ ಆಧುನಿಕ ತಂತ್ರಜ್ಞಾನಗಳೊಂದಿಗೆ ಮತ್ತೊಮ್ಮೆ ಪ್ರೇಕ್ಷಕರ ಎದುರು ಪ್ರತ್ಯಕ್ಷವಾಗುತ್ತಿದೆ.

 

 

ನಾಗರಹಾವು… ಈ ಎವರ್ ಗ್ರೀನ್ ಕನ್ನಡ ಸಿನಿಮಾಗೆ ಸ್ಪೆಷಲ್ ಪವರ್ ಇದೆ., ಹೌದು ಸಾಹಸಸಿಂಹ ವಿಷ್ಣುವರ್ಧನ್ ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಮೊದಲ ಸಿನಿಮಾ ‘ನಾಗರಹಾವು’. ಹಾಗೆ ಬುಸ್ಸೆಂದು ಪರದೆ ಸೀಳಿಬಂದ ನಾಗರಹಾವು ಸೃಷ್ಟಿಸಿದ ಇತಿಹಾಸ ಬಹುದೊಡ್ಡದು. ವಿಷ್ಣುವರ್ಧನ್​ ಮತ್ತು ಅಂಬರೀಶ್​ ಅನ್ನೋ ಸೂಪರ್ ಸ್ಟಾರ್​ಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಈ ಚಿತ್ರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿದೆ.

ಸದ್ಯ ಚಿತ್ರರಂಗದ ಪ್ರಮುಖರು ನಾಗರಹಾವು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ವಿಡಿಯೋವೊಂದು ಬಿಡುಗಡೆಯಾಗಿದ್ದು ಈ ವಿಡಿಯೋದಲ್ಲಿ ಅಂಬರೀಷ್, ಶಿವಣ್ಣ, ಉಪೇಂದ್ರ, ಸುದೀಪ್, ಯೋಗರಾಜ್ ಭಟ್, ಅನಿರುದ್ಧ, ಯಶ್ ಮತ್ತು ಹಿರಿಯ ನಟಿರಾದ ಲೀಲಾವತಿ, ಜಯಂತಿ, ಭಾರತಿ ಸೇರಿದಂತೆ ಅನೇಕರು ಚಿತ್ರದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ವಿಡಿಯೋವನ್ನು ಇಲ್ಲಿನೋಡಿ.

ಜುಲೈ 20ರಂದು ಬಿಡುಗಡೆ:
ಈಗಾಗಲೇ ಚಿತ್ರದ ಟೀಸರ್ ಒಂದು ಮಿಲಿಯನ್’ಗಿಂತಲೂ ಹೆಚ್ಚು ಮಂದಿಯಿಂದ ವೀಕ್ಷಣೆಯಾಗಿದ್ದು ಆಧುನಿಕ ತಂತ್ರಜ್ಞಾನದ ಟಚ್ ಸಿಕ್ಕಿರುವ ನಾಗರಹಾವನ್ನು ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.. ಇದೀಗ ಚಿತ್ರದ ರಿಲೀಸ್ ಡೇಟ್ ಕೂಡ ಫೈನಲ್ ಆಗಿದ್ದು ಇದೇ ಜುಲೈ 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಇಂದು ಸಿನಿಮಾದ ಮೇಕಿಂಗ್(ಮರುಸೃಷ್ಟಿಸಿದ) ವಿಡಿಯೋವನ್ನು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ರಿವೀಲ್ ಮಾಡಲಿದ್ದಾರೆ.

ನಾಗರಹಾವು ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ತಂದೆ ವೀರಸ್ವಾಮಿಯವರು ನಿರ್ಮಾಣ ಮಾಡಿದ್ದರು. ಇದೀಗ ಅವರ ಎರಡನೇ ಪುತ್ರ ಬಾಲಾಜಿ ಈ ಚಿತ್ರವನ್ನು ರೀ ರಿಲೀಸ್ ಮಾಡಲು ಚಿಂತನೆ ನಡೆಸುತ್ತಿದ್ದು ಈ ಬಗ್ಗೆ ಶ್ರೀ ಈಶ್ವರಿ ಪ್ರೊಡಕ್ಷನ್​ ಜಾಹೀರಾತು ಹೊರಡಿಸಿದೆ. ಚಿತ್ರಕ್ಕೆ ನೂತನ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ಟಚ್ ನೀಡಲಿದ್ದು, ಮೊದಲಿಗಿಂತ ಹೈ ಕ್ವಾಲಿಟಿಯಲ್ಲಿ ಸಿನಿಮಾವನ್ನು ಹೊರತಂದಿದ್ದಾರಂತೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top