ದೇವರು

ಈ ಒಂದು ಸ್ತೋತ್ರವನ್ನು ಪಾರಾಯಣ ಮಾಡಿದರೆ ಸಾಕು ಇಡೀ ಕುಟುಂಬಕ್ಕೆ ದೀರ್ಘಾಯುಸ್ಸು ಪ್ರಾಪ್ತಿಯಾಗುವುದರ ಜೊತೆ ನಿಮ್ಮ ಎಲ್ಲ ಕಷ್ಟಗಳು ಮಾಯವಾಗುತ್ತದೆ.

ಈ ಸೃಷ್ಟಿಗೆ ಮೂಲವು ದೇವರು ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. ಆ ದೇವರನ್ನು ಸಹ ಸೃಷ್ಟಿಸಿರುವುದು ಶ್ರೀ ಲಲಿತಾದೇವಿ ಎಂದು ಬ್ರಹ್ಮಾಂಡ ಪುರಾಣ ಹೇಳುತ್ತಿದೆ.ಆದ್ದರಿಂದಲೇ ಈ ಸೃಷ್ಟಿಗೆ ಮಾತೃ ಸ್ವರೂಪವಾಗಿ ಸಹ ಲಲಿತಾ ದೇವಿಯನ್ನು ಭಾವಿಸುತ್ತೇವೆ.

ಆ ದೇವಿಯ ಮಹಾತ್ಮೆಯನ್ನು ತಿಳಿದುಕೊಳ್ಳಲು,ಈ ದೇವಿಯನ್ನು ಪ್ರಸನ್ನ ಮಾಡಿಕೊಳ್ಳಲು ಲಲಿತ ಸಹಸ್ರನಾಮ ಒಂದು ದೊಡ್ಡ ಸಾಧನೆಯ ಹಾಗೆ ಉಪಯೋಗವಾಗುತ್ತದೆ.
ಲಲಿತಾ ದೇವಿಯನ್ನು ಲಲಿತಾ ತ್ರಿಪುರ ಸುಂದರಿ ಎಂದು ಸಹ ಹೇಳುತ್ತಾರೆ. ತ್ರಿಪುರ ಸುಂದರಿ ಎಂದರೆ ಮೂರು ಲೋಕಗಳಲ್ಲಿ ಅತ್ಯಂತ ಸುಂದರವಾದ ಸ್ತ್ರೀ ಎಂದರ್ಥ ತ್ರಿಪುರ ಅಂದರೆ ಮೂರು ಕಾಲಗಳಿಗೆ , ಮೂರು ಸ್ಥಿತಿಗಳಿಗೆ ಮತ್ತು ಮೂರು ಶಕ್ತಿಗಳಿಗೆ ಪ್ರತೀಕವಾದದ್ದು ಎಂದು ಬ್ರಹ್ಮಾಂಡ ಪುರಾಣ ಹೇಳುತ್ತಿದೆ .

ಲಲಿತಾ ಸಹಸ್ರನಾಮವನ್ನು ಪಠಿಸಬೇಕು ಎಂದರೆ ಧ್ಯಾನ, ಅಂಗನ್ಯಾಸ , ಕರನ್ಯಾಸ ,ಪಂಚ ಪೂಜಾ ಉತ್ತರ ಭಾಗವನ್ನು ಸಹ ಪಠಿಸಬೇಕು .ಇನ್ನು ಪಾರಾಯಣ ಮಾಡಲು ಸಮಯವಿಲ್ಲದವರು, ಕನಿಷ್ಠಪಕ್ಷ ಲಲಿತಾಸಹಸ್ರನಾಮವನ್ನಾದರೂ ಪಾರಾಯಣ ಮಾಡಿದರೆ ಒಳ್ಳೆಯದು .
ಲಲಿತಾ ದೇವಿಯನ್ನು ಪ್ರಸನ್ನ ಮಾಡಿಕೊಳ್ಳಲು ಸಾಕ್ಷಾತ್ ದೇವಾನುದೇವತೆಗಳೇ ಈ ಸಹಸ್ರನಾಮವನ್ನು ಪಠಿಸುತ್ತಿದ್ದರಂತೆ. ನಾಮಗಳನ್ನು ಹಯಗ್ರೀವರು ಅಗಸ್ತ್ಯ ಮುನಿಗೆ ಬೋಧಿಸಿದ್ದಾರೆ . ಇದನ್ನು ವ್ಯಾಸರು ಬ್ರಹ್ಮಾಂಡ ಪುರಾಣದ ಉತ್ತರಖಂಡದಲ್ಲಿ ರಚಿಸಿದ್ದಾರೆ .

 

 

ಲಲಿತಾಸಹಸ್ರನಾಮದಲ್ಲಿ ದೇವಿಯ ಬೀಜಾಕ್ಷರಗಳು ಸೃಷ್ಟಿ ರಹಸ್ಯಗಳು, ಅಷ್ಟ ಕಾರ್ಯಗಳು, ದಶ ಮಹಾವಿದ್ಯೆಗಳಿಗೆ ಸಂಬಂಧಿಸಿದ ಜ್ಞಾನ ಇದರಲ್ಲಿ ಅಡಕವಾಗಿದೆ
ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಮತ್ತೊಂದಿಲ್ಲ. ಲಲಿತಾ ಸಹಸ್ರನಾಮವನ್ನು ಪಠಿಸುವುದರಿಂದ ಅಪಮೃತ್ಯು, ಕಾಲ ಮೃತ್ಯು ನಿವಾರಣೆಯಾಗಿ ದೀರ್ಘಾಯುಷ್ಯವನ್ನು ಹೊಂದಬಹುದು.
ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯವೂ ಪಠಿಸಬೇಕು. ಒಂದು ವೇಳೆ ನಿತ್ಯ ಪಠಿಸಲು ಸಾಧ್ಯವಾಗದೆ ಇದ್ದಲ್ಲಿ , ಜನ್ಮ ನಕ್ಷತ್ರಗಳಲ್ಲಿ, ನವಮಿಯ ತಿಥಿಗಳಲ್ಲಿ, ಶುಕ್ಲ ಪಕ್ಷದ ಚತುರ್ದಶಿಯ ದಿನ, ಶುಕ್ರವಾರದ ದಿನ, ಹುಣ್ಣಿಮೆಯ ದಿನಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಬಹುದು.

ಲಲಿತಾ ಸಹಸ್ರನಾಮವನ್ನು ಸತತವಾಗಿ ಯಾರು ಆರು ತಿಂಗಳುಗಳ ಕಾಲ ಭಕ್ತಿ-ಶ್ರದ್ಧೆಯಿಂದ ಪಠಿಸುತ್ತಾರೋ ,ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿಯು ಸ್ಥಿರವಾಗಿ ನೆಲೆಸಿರುತ್ತಾಳೆ .
ಲಲಿತಾ ಸಹಸ್ರನಾಮವನ್ನು ಸತತವಾಗಿ ಪ್ರತಿನಿತ್ಯ ದಿನಕ್ಕೆ ಮೂರು ಬಾರಿಯಂತೆ ಒಂದು ತಿಂಗಳ ಕಾಲ ಯಾರು ಪಠಿಸುವರೋ, ಅಂತವರ ನಾಲಿಗೆಯ ತುದಿಯಲ್ಲಿ ಸರಸ್ವತಿಯು ಯಾವಾಗಲೂ ಕುಣಿಯುತ್ತಿರುತ್ತಾಳೆ ಎಂದು ಹೇಳಲಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top