ಸಿನಿಮಾ

ಮತ್ತೊಬ್ಬ ಬಾಲಿವುಡ್ ನಟಿಯ ಜೊತೆ ಲವ್ವಲ್ಲಿ ಬಿದ್ದ ಹಾರ್ದಿಕ್ ಪಾಂಡ್ಯಾ.

ಹಾರ್ದಿಕ್ ಪಾಂಡ್ಯಾ ಭಾರತ ಕ್ರಿಕೆಟ್ ತಂಡದಲ್ಲಿ ಸದ್ಯ ಮಿಂಚುತ್ತಿರುವ ಎಲ್ಲ ರೌಂಡರ್ ಕ್ರಿಕೆಟ ಆಟಗಾರ. ಮೈದಾನದಲ್ಲಿ ಶೈನ್ ಆದಂತೆಲ್ಲ ಪಾಂಡ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೂಮರ್‌ಗಳು ಹೆಚ್ಚಾಗುತ್ತಲೇ ಇವೆ. ಅಂತೆಯೇ ರೂಮರ್‌ಗಳನ್ನು ಸುಳ್ಳು ಮಾಡಿ ಕ್ರಿಕೆಟಿಗ ಸ್ಪಷ್ಟನೆ ಕೂಡ ನೀಡುತ್ತಾ ಬಂದಿದ್ದು, ಕಳೆದ ವರ್ಷದಿಂದ ಗಾಸಿಪ್‌ಗೆ ಬ್ರೇಕ್ ಹಾಕುತ್ತಲೇ ಬಂದಿದ್ದಾರೆ.

ಸದ್ಯ ಬಾಲಿವುಡ್ ನಟಿ ಇಶಾ ಗುಪ್ತಾ ಜೊತೆ ಲವ್ವಿ ಡವ್ವಿ ಆಡುತ್ತಿದ್ದಾರೆ ಎಂಬ ಭಲವಾದ ಮಾತು ಕೇಳಿ ಬರುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರು ಒಟ್ಟಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದು ಹಲವು ರೂಮರ್ ಶುರು ಆಗಲು ಕಾರಣವಾಗಿವೆ.

 

 

ಇದಕ್ಕೂ ಮೊದಲು ಹಾರ್ದಿಕ್ ಪಾಂಡ್ಯ ಎಲ್ಲಿ ಅವ್ರಾಮ್ ಮತ್ತು ಊರ್ವಶಿ ರೌತಲಾ ಜತೆಗೆ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆದರೆ ಅವರ ಜತೆಗಿನ ಸಂಬಂಧದ ಬಗ್ಗೆ ಪಾಂಡ್ಯ ಎಲ್ಲೂ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಈಗ ಇಶಾ ಗುಪ್ತಾ ಜತೆ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಜೋಡಿ ಹಕ್ಕಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಪೋಸ್ಟ್ ಗಳಿಗೆ ಕಮೆಂಟ್ ಮತ್ತು ಕಾಳೆಲೆಯುವದನ್ನು ನೋಡಿದರೆ ಇಬ್ಬರೂ ಕಮಿಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಕಳೆದ ವರ್ಷ ಯುವತಿಯ ಜೊತೆಗಿರುವ ಹಾರ್ದಿಕ್ ಪಾಂಡ್ಯಾ ಚಿತ್ರ ವೈರಲ್ ಆಗಿತ್ತು. ಆ ಚಿತ್ರ ಬಗ್ಗೆ ಎಲ್ಲೆಡೆ ಗುಸು ಗುಸು ಮಾತುಗಳು ಕೇಳಿಬರುತ್ತಿದ್ದವು. ಚಿತ್ರದಲ್ಲಿರುವ ಯುವತಿ ಯಾರು ಎಂಬ ಪ್ರಶ್ನೆ ಎಲ್ಲ ಅಭಿಮಾನಿಗಳಲ್ಲೂ ಮೂಡಿತ್ತು. ಅದು ನನ್ನ ಬಾಲ್ಯದ ಗೆಳತಿ ಎಂದು ಹಾರ್ದಿಕ್ ಪಾಂಡ್ಯಾ ಸುದ್ದಿಗೆ ಬ್ರೇಕ್ ಹಾಕಿದ್ದರು. ಆದರೆ ಈ ಬಾರಿ ಪಾಂಡ್ಯಾ ಅಭಿಮಾನಿಗಳಿಂದ ಕೈತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top