ಆರೋಗ್ಯ

ಹುಳುಕಡ್ಡಿ ಸಮಸ್ಯೆಗೆ ಸುಲಭವಾದ ಮನೆಮದ್ದು !

ಹುಳಕಡ್ಡಿ ತ್ರೈಕೊಫೆೈಲಟೊನ್ ಮೈಕ್ರೊಸ್ಪೊರಮ್ ಮತ್ತು ಎಪಿಡರ್ಮೊಪೈಟಾನ್ ಎಂಬ ರೋಗಾಣುಗಳಿಂದ ಹರಡುವ ರೋಗ

* ಬೆಳ್ಳುಳಿಗೆ ಅಜೊಯೆನೆ ಎಂಬ ಫಂಗಲ್ , ಬ್ಯಾಕ್ಟೀರಿಯ , ವೈರಸ್‌ ನಿರೋಧಕ ಅಂಶಗಳಿದ್ದು ಬೆಳ್ಳುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಸೋಂಕು ಉಂಟಾದ ಜಾಗಕ್ಕೆ ಪಟ್ಟು ಕಟ್ಟ ಬೇಕು ರಾತ್ರಿ ಪೂರಾ ಹಾಗೆಯೇ ಬಿಟ್ಟು ತೊಳೆಯಬೇಕು, ಹೇಗೆ         ಮುಂದುವರಿಸಿದರೆ ಹುಳುಕಡ್ಡಿ ಸಂಪೂರ್ಣ ವಾಸಿಯಾಗುತ್ತದೆ.

* ಲೋಳೆ ರಸವನ್ನು ಅರಿಶಿನದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

 

 

* ಮೂಲಂಗಿ, ಮೊಸರು ಹಾಗು ನಿಂಬೆ ರಸವನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

* ನೆತ್ತಿಯಲ್ಲಿ ಉಂಟಾಗುವ ಹುಳುಕಡ್ಡಿ ಯನ್ನು ಪರಿಹಾರ ಮಾಡಲು ತೆಂಗಿನ ಎಣ್ಣೆಯನ್ನು ಬಳಸಲಾಗುತ್ತದೆ.

* ಬೆಳಗುಣಿಕೆ ಸೊಪ್ಪು /ಕಾಚಿಸೊಪ್ಪು ಎಲೆಗಳ ರಸವನ್ನು ಹುಳಕಡ್ಡಿ ನವೆಯನ್ನು ನಿವಾರಣೆ ಮಾಡಲು ಬಳಸಲಾಗುತ್ತದೆ.

* ಸೇಬಿನ ರಸವನ್ನು ವಿನೆಗರ್ ನೊಂದಿಗೆ ಮಿಶ್ರಣ ಮಾಡಿ 3 -4 ಬಾರಿ ದಿನವೂ ಹಚ್ಚಿದರೆ ಹುಳುಕಡ್ಡಿ ಸಂಪೂರ್ಣ ವಾಸಿಯಾಗುತ್ತದೆ.

* ಮೆಹಂದಿ ಎಲೆಗಳನ್ನು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

* ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ ಅರೆದು ಹುಳು ಕಡ್ಡಿ ಮೇಲೆ ಹಚ್ಚಿ ಒಂದು ದಿನ ಬಿಟ್ಟು ತೊಳೆಯಬೇಕು ಇದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.

* ಮೂರು ಹನಿ ಜೊಜೊಬಾ ತೈಲ ವನ್ನು ಮೂರು ಹನಿ ಲ್ಯಾವೆಂಡರ್ ತೈಲ ದೊಂದಿಗೆ ಮಿಶ್ರಣ ಮಾಡಿ ಹಚ್ಚುವುದರಿಂದ ಹುಳುಕಡ್ಡಿ ಸಂಪೂರ್ಣ ವಾಸಿಯಾಗುತ್ತದೆ.
ಕಜ್ಜಿ ಮತ್ತು ಸೋರಿಯಾಸಿಸ್ನಲ್ಲಿ ಉಪಯೋಗಿಸುತ್ತಾರೆ.

* ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಲೇಪನ ಮಾಡಿ ಹಚ್ಚಬಹುದು.

* ಸಾಸಿವೆಯನ್ನು ನೀರಿನಲ್ಲಿ ನೆನೆಹಾಕಿ ನಂತರ ರುಬ್ಬಿ ಹುಳುಕಡ್ಡಿಯ ಮೇಲೆ ಪಟ್ಟು ಕಟ್ಟ ಬೇಕು.

* ಮನಿಬಲ್ಲಿ ಎಂಬ ಮರದ ಹಾಲಿನಿಂದ ಹುಳುಕಡ್ಡಿಯನ್ನು ಸಂಪೂರ್ಣವಾಗಿ ಗುಣಪಡಿಸಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top