ಸಿನಿಮಾ

ಮರಾಠಿ ಬಿಗ್’ಬಾಸ್’ನ ಗ್ರಾಂಡ್ ಫಿನಾಲೆಗೆ ಎಂಟ್ರಿಕೊಟ್ಟಳು ಅಚ್ಚ ಕನ್ನಡತಿ.

ಕನ್ನಡಿಗರು ಇಂದು ಕರ್ನಾಟಕ ಮಾತ್ರವಲ್ಲದೆ, ದೇಶ ವಿವಿಧೆಡೆ ಹಾಗು ವಿದೇಶದಲ್ಲೂ ಹೆಸರು ಮಾಡಿ ರಾಜ್ಯಕ್ಕೆ ಕೀರ್ತಿ ತರುತ್ತಿದ್ದಾರೆ. ಈಗ ಬೆಳಗಾವಿ ಜಿಲ್ಲೆಯ ಕನ್ನಡತಿ ಸಾಯಿ ಲೋಕೂರ ಮರಾಠಿ ಆವೃತ್ತಿಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಮೊದಲ ಕಂಟೆಸ್ಟೆಂಟ್ ಆಗಿ ಫಿನಾಲೆಗೆ ಸೆಲೆಕ್ಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

 

 

ಮಹಾರಾಷ್ಟ್ರ ರಾಜ್ಯದ ರಾಜ್ಯಧಾನಿ ಮುಂಬೈನಲ್ಲಿ ಕಳೆದ ಮೂರೂ ತಿಂಗಳಿಂದ ಬಿಗ್ ಬಾಸ್ ರಿಯಾಲಿಟಿ ಷೋ ನಡೆಯುತ್ತಿದ್ದು, ಒಟ್ಟು 19 ಜನ ಸ್ಪರ್ಧಿ ಆರಂಭದಲ್ಲಿ ಭಾಗವಹಿಸಿದ್ದರು. ಈ ಪೈಕಿ 12 ಜನ ಹೊರಹೋಗಿದ್ದಾರೆ. ಸದ್ಯ 7 ಜನ ಮಾತ್ರ ಕಣದಲ್ಲಿದ್ದಾರೆ, ಇನ್ನು ಪ್ರಥಮವಾಗಿ ಸಾಯಿ ಲೋಕೂರ ಅವರು ಫಿನಾಲೆಗೆ ಪ್ರವೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ 22ರಂದು ಮುಂಬೈನ ಲೋನಾವಾಲಾದಲ್ಲೇ ಫಿನಾಲೆ ನಡೆಯಲಿದೆ. ನಿರ್ದೇಶಕಿ, ನಿರ್ಮಾಪಕಿಯಾಗಿ ಕಾರ್ಯ ನಿರ್ವಹಿಸದ್ದ ವೀಣಾ ಲೋಕೂರ ಹಾಗೂ ಉದ್ಯಮಿ ಅಜಿತ್ ದಂಪತಿ ಮಗಳು ಸಾಯಿ ಲೋಕೂರ, ಕಪಿಲ್ ಶರ್ಮಾ ಅಭಿನಯದ ‘ಕಿಸ್ ಕಿಸ್ಕೋ ಪ್ಯಾರ್ ಕರೂಂ’ ಹಿಂದಿ ಸಿನಿಮಾದಲ್ಲಿ ಕೂಡ ಅಭಿನಯ ಮಾಡಿದ್ದಾರೆ. ಅಲ್ಲದೆ, ಹಲವು ಮರಾಠಿ ರಂಗಭೂಮಿ ಹಾಗೂ ಸಿನೆಮಾಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ.

ಈ ಹಿಂದೆ ಸಾಯಿ ಲೋಕೂರ ಅವರು ಕನ್ನಡದಲ್ಲಿ ಕೂಡ ಅಭಿನಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಾಯಿ ಲೋಕೂರ ಅವರು ಬಿಕಾಂ ಪದವಿ ಮುಗಿಸಿದ್ದು. ಸದ್ಯ ಇಂಟಿರಿಯರ್ ಡಿಸೈನ್ ಡಿಪ್ಲೊಮಾ ಮಾಡುತ್ತಿದ್ದಾರೆ. ಓದಿನ ಜೊತೆಗೆ ಸಿನಿಮಾದಲ್ಲೂ ಕೂಡ ಒಲವು ಹೊಂದಿರುವ ಇವರು ತಾಯಿಯ ಮಾರ್ಗದರ್ಶನದಲ್ಲಿ ನಟನೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top