ಮನೋರಂಜನೆ

ಸೀಮೆಸುಣ್ಣದಲ್ಲಿ ಮೂಡಿತು ಶಿವಣ್ಣನ ಪ್ರತಿಮೆ-ಬರ್ತಡೆಗೆ ಸ್ಪೆಷಲ್ ನೀಡಿದ ಅಭಿಮಾನಿ

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಡುತ್ತಿರುವ ಅಣ್ಣಾವ್ರ ಮಗ ಶಿವಣ್ಣ ಇಂದು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇಯಂದು ಅಭಿಮಾನಿಗಳು ತಡರಾತ್ರಿಯಿಂದಲೇ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ.

 

 

ಈ ಮಧ್ಯೆ ಸೂಕ್ಷ್ಮ ಆಕೃತಿಗಳ ಶಿಲ್ಪಿ ಶಿವಣ್ಣನವರ ಮುಖಚಹರೆಯನ್ನು ಸೀಮೆ ಸುಣ್ಣದಲ್ಲಿ ಮೂಡಿಸಿದ್ದಾರೆ. ಸೀಮೆಸುಣ್ಣದ ತುಂಡಿನ ಮೇಲೆ ಶಿವಣ್ಣನ ಪ್ರತಿಮೆಯನ್ನು ಕೆತ್ತಿ ಅದನ್ನು ತನ್ನ ಹುಟ್ಟುಹಬ್ಬದ ಉಡುಗೊರೆಯಾಗಿ ಅವರಿಗೆ ನೀಡಿದ್ದಾರೆ.. ಸಚಿನ್ ಅವರು ಪ್ರತಿಮೆಯನ್ನು ಕೆತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.. ಸಚಿನ್ ಅವರು ಈ ಹಿಂದೆ ರಕ್ಷಿತ್ ಶೆಟ್ಟಿ ಬರ್ತಡೇಯಂದು ಅವರ ಪ್ರತಿಮೆಯನ್ನೂ ಸೀಮೆಸುಣ್ಣದಲ್ಲಿ ಕೆತ್ತಿದ್ದರು.

ಸಚಿನ್ ಸಾಂಘೆ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಸೀಸದ ಕಡ್ಡಿ ಹಾಗೂ ಸೀಮೆಸುಣ್ಣದ ಮೇಲೆ ಚಿತ್ರಗಳನ್ನು, ಪ್ರತಿಮೆಗಳನ್ನು ಬಿಡುಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅವರು ಈಗಾಗ್ಲೇ ಸಚಿನ್ ತೆಂಡೂಲ್ಕರ್, ರಜಿನಿಕಾಂತ್ ನರೇಂದ್ರ ಮೋದಿಯಂತಹ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸೀಮೆಸುಣ್ಣದಲ್ಲಿ ಕೆತ್ತಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top