ಮನೋರಂಜನೆ

ಹುಟ್ಟುಹಬ್ಬದ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ- ಇಂದು ಶಿವಣ್ಣನ ಅಭಿಮಾನೋತ್ಸವ

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಡುತ್ತಿರುವ ಅಣ್ಣಾವ್ರ ಮಗ ಶಿವಣ್ಣ ಇಂದು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇಯಂದು ಅಭಿಮಾನಿಗಳು ತಡರಾತ್ರಿಯಿಂದಲೇ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ. 56ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು 56 ಕೆಜಿ ತೂಕದ ಕೇಕ್ ತಯಾರಿಸಿರುವುದು ವಿಶೇಷ.

 

 

ಅಭಿಮಾನಿಗಳೇ ಸೇರಿಕೊಂಡು ‘ಅಭಿಮಾನೋತ್ಸವ’ ಎಂಬ ಹೆಸರನ್ನೂ ಫೈನಲ್ ಮಾಡಿಕೊಂಡು ಅದರ ಚೆಂದದ, ಸಂಪೂರ್ಣವಾದ, ಅಚ್ಚುಕಟ್ಟಾದ ರೂಪುರೇಷೆಗಳನ್ನೂ ಸಿದ್ಧಪಡಿಸಿ ಕೆಲವೊಂದು ಸಮಾಜಮುಖಿ ಕೆಲಸಗಳನ್ನು ಅಭಿಮಾನಿಗಳು ಕೈಗೊಂಡಿದ್ದಾರೆ. ಕಳೆದ ವರ್ಷ ಅಮ್ಮನ ಅಗಲಿಕೆಯ ನೋವಲಿದ್ದ ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದರು. ಕೇಕ್ ಕಟ್ ಮಾಡಿ ಸಂಭ್ರಮಿಸದೆ, ಮನೆಯ ಬಳಿ ಬಂದ ಅಭಿಮಾನಿಗಳ ಅಕ್ಕರೆಯ ಹಾರೈಕೆಯನ್ನು ಸ್ವೀಕರಿಸಿದ್ದರು. ಆದರೆ ಈ ಭಾರಿ ಅಭಿಮಾನಿಗಳು ಅದ್ದೂರಿಯಾಗಿ ಬರ್ತಡೇ ಆಚರಿಸಿದ್ದಾರೆ.

ಸಾಮಾನ್ಯವಾಗಿ ಇಂಥಾ ಹುಟ್ಟುಹಬ್ಬವನ್ನು ಅಭಿಮಾನಿಗಳೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಾರೆ. ಇದು ಮಾಮೂಲು. ಆದರೆ ಇದುವರೆಗೂ ಭಿನ್ನವಾಗಿಯೇ ನಡೆದುಕೊಳ್ಳುತ್ತಾ ಬಂದಿರುವ ಶಿವಣ್ಣನ ಅಭಿಮಾನಿಗಳು ಇದೇ ಮೊದಲ ಬಾರಿಗೆ ಒಂದೇ ಹೆಸರಿಟ್ಟುಕೊಂಡು ಉಚಿತ ನೇತ್ರ ತಪಾಸಣಾ ಶಿಬಿರ, ರಕ್ತದಾನ ಶಿಭಿರ ಮತ್ತು ಅರೋಗ್ಯ ತಪಾಸನೆಯಂತಹ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶಿವಣ್ಣನ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ., ವಿಶೇಷವೆಂದರೆ ಶಿವಣ್ಣನ ಹುಟ್ಟುಹಬ್ಬಕ್ಕೆ ಜನಾರ್ಧನ್ ಸಾಳ್ವಂಕೆ ಎಂಬುವವರು ಬರೆದಿರೋ ಪುಸ್ತಕ ಗಿಫ್ಟ್ ರೂಪದಲ್ಲಿ ಬಿಡುಗಡೆಯಾಗಲಿದೆ.

‘ದಿ ವಿಲನ್’ ‘ಕವಚ’, ‘ರುಸ್ತುಂ’, ‘ದ್ರೋಣ’ ಮುಂತಾದ ಚಿತ್ರಗಳಲ್ಲಿ ಶಿವಣ್ಣ ತೊಡಗಿಕೊಂಡಿದ್ದು ಎಲ್ಲಾ ಚಿತ್ರತಂಡಗಳು ಶಿವಣ್ಣನಿಗೆ ವಿಶೇಷವಾಗಿ ಉಡುಗೊರೆ ನೀಡುತ್ತಿದ್ದಾರೆ. ಇದರ ಜೊತೆಗೆ ಯೋಗರಾಜ್ ಭಟ್ ಸಿನಿಮಾ ಸೇರಿದಂತೆ ಇನ್ನಷ್ಟು ಹೊಸ ಸಿನಿಮಾಗಳು ಘೋಷಣೆ ಆಗುವ ಸಾಧ್ಯತೆ ಇದೆ.. ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಗಣ್ಯರೂ ಕೂಡ ಶಿವಣ್ಣನ ಬರ್ತಡೆಗೆ ಶುಭಹಾರೈಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top