ಮನೋರಂಜನೆ

ಯಶ್ ಕೊಲೆಗೆ ಸಂಚು ರೂಪಿಸಿದ್ರು ಎನ್ನುವ ಸುದ್ದಿಗೆ ಶಿವಣ್ಣ ಪ್ರತಿಕ್ರಿಯಿಸಿದ್ದು ಹೀಗೆ.

ಇಂದು ಬೆಳಿಗ್ಗೆಯಿಂದ ಕನ್ನಡದ ಕೆಲ ಮಾಧ್ಯಮಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಯಶ್ ಕೊಲೆಗೆ ಸಂಚು ರೂಪಿಸಲಾಗಿತ್ತು ಎನ್ನುವ ಸುದ್ದಿಗೆ ಬರ್ತಡೇ ಬಾಯ್ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. “ಅಪರಾಧಗಳು ನಡೆಯಲೇಬಾರದು ಎಂಬುದು ನಮ್ಮೆಲ್ಲರ ಅಭಿಪ್ರಾಯ. ಯಶ್ ಅಂತ ಅಲ್ಲ ಯಾರೇ ಆಗಿರಲಿ ಎಲ್ಲರೂ ಪ್ರಾಣಕ್ಕೂ ಬೆಲೆ ಇದೆ.. ಇಂತಹ ವಿಚಾರಗಳಲ್ಲಿ ಸ್ವಲ್ಪ ಅನುಮಾನ ಬಂದರೂ ಅದರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಇಂಥಾ ಸಂಗತಿಗಳು ಗೊತ್ತಾದಾಗ ನಮಗ್ಯಾಕೆ ಅಂತ ಸುಮ್ಮನಿರದೆ ಪೊಲೀಸರಿಗೆ ತಿಳಿಸಬೇಕು” ಎಂದು ಪ್ರತಿಕ್ರಿಯಿಸಿದರು.

 

 

ಇನ್ನೂ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ “ಇವೆಲ್ಲವೂ ಶುದ್ಧಸುಳ್ಳು ಸುದ್ದಿ, ಮಾಧ್ಯಗಳ ಸೃಷ್ಟಿ. ಒಂದು ವೇಳೆ ಆ ರೀತಿ ಯಾವುದಾದರೂ ಗಂಭೀರ ಸುದ್ದಿ ಇದ್ದಲ್ಲಿ ನಾವೇ ತಿಳಿಸುತ್ತೇವೆ.. ಯಾರೋ ಸುಮ್ಮನೆ ಸುಳ್ಳುಸುದ್ದಿ ಹರಡಿಸಿದ್ದಾರೆ ” ಎಂದು ಸ್ಪಷ್ಟ ಪಡಿಸಿದ್ದಾರೆ. ಆ ಮೂಲಕ ಜನರ ಆತಂಕಕ್ಕೆ ಕಾರಣವಾಗಿದ್ದ ಗೊಂದಲವೊಂದು ಅಧಿಕೃತವಾಗಿ ಕೊನೆಯಾಗಿದೆ.

ಏನಿದು ಸುದ್ದಿ:
ಎರಡೂವರೆ ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಗಣ್ಯ ವ್ಯಕ್ತಿಗಳ ಮಕ್ಕಳ ಪಾರ್ಟಿಯಲ್ಲಿ ಯಶ್ ಅವರನ್ನು ಕೊಲೆ ಮಾಡುವ ಪ್ರಸ್ತಾಪ ಆಗಿತ್ತು. ಯಾರಿಗೂ ತಿಳಿಯದ ರೀತಿಯಲ್ಲಿ ಯಶ್ ಹತ್ಯೆ ಮಾಡಬೇಕು ಎಂದು ಆ ಸಂದರ್ಭದಲ್ಲಿ ಮಾತಾಡಿದ್ದರು. ಆದರೆ ಆನಂತರದಲ್ಲಿ ಯಾರೂ ಸಂಚು ರೂಪಿಸುವ ಮಟ್ಟಕ್ಕೆ ಹೋಗಿಲ್ಲ.. ಆ ವೇಳೆ ನಡೆಯುತ್ತಿದ್ದ ಸ್ಟಾರ್ ವಾರ್ ನಿಂದಲೇ ಯಶ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಗಳನ್ನು ಪೊಲೀಸ್ರ ಬಳಿ ಇರುವ ಸೈಕಲ್ ರವಿ ಹೊರಹಾಕಿದ್ದಾನೆ” ಎಂದು ಕನ್ನಡದ ಕೆಲ ಘನತೆವೆತ್ತ(?) ಮಾಧ್ಯಮಗಳು ಪ್ರಸಾರ ಮಾಡಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top