ಮನೋರಂಜನೆ

ಸುದೀಪ್ -ದರ್ಶನ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವಣ್ಣನ ನೇರಮಾತು.

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಡುತ್ತಿರುವ ಅಣ್ಣಾವ್ರ ಮಗ ಶಿವಣ್ಣ ಇಂದು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇಯಂದು ಅಭಿಮಾನಿಗಳು ತಡರಾತ್ರಿಯಿಂದಲೇ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ.. ಚಿರಯುವಕ ಶಿವಣ್ಣನಿಗೆ ಚಂದನವನದ ಪ್ರಮುಖ ಕಲಾವಿದರೂ ಒಳಗೊಂಡಂತೆ ಅಭಿಮಾನಿಗಳೆಲ್ಲರೂ ಶುಭಾಶಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

 

 

ಈ ಮಧ್ಯೆ ಖಾಸಗಿ ವಾಹಿನಿಯೊಂದಿಗೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಶಿವಣ್ಣ ಸಿನಿ ಜರ್ನಿ ಬಗ್ಗೆ ಮತ್ತು ಮುಂದಿನ ಚಿತ್ರಗಳ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. ಇದೆ ವೇಳೆ ಸಂದರ್ಶಿಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕುರಿತು ಕೇಳಿದಾಗ ನಗುತ್ತಲೇ ಮುಕ್ತವಾಗಿ ಅಭಿಪ್ರಾಯವನ್ನು ನಂತರ ಬಗ್ಗೆ ಶಿವಣ್ಣ ಹಂಚಿಕೊಂಡಿದ್ದಾರೆ.

“ಅಪ್ಪಾಜಿ ಹಾಗೂ ತೂಗುದೀಪ್ ಅವರ ಸ್ನೇಹ ತುಂಬಾ ಚೆನ್ನಾಗಿತ್ತು.ಅವಾಗಿನಿಂದಲೂ ದರ್ಶನ್ ನಮ್ಮ ಮನೆ ಹುಡುಗನಂತೆಯೇ ಇದ್ದಾರೆ. ಅವರು ಇಂದು ದೊಡ್ಡ ಸ್ಟಾರ್ ಆಗಿ ಬೆಳೆದಿರುವುದು ತುಂಬಾ ಸಂತೋಷದ ವಿಚಾರ. ಮುಂದೊಂದು ದಿನ ಒಳ್ಳೆಯ ಸ್ಕ್ರಿಪ್ಟ್ ಬಂದರೆ ಅವರೊಟ್ಟಿಗೆ ನಟಿಸುತ್ತೇನೆ ನಾವಿಬ್ಬರೂ ಪರಸ್ಪರ ತುಂಬಾ ಚೆನ್ನಾಗಿದ್ದೇವೆ, ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ ಅದೇ ರೀತಿ ನನಗೂ ದರ್ಶನ್ ಮೇಲೆ ಅಷ್ಟೇ ಪ್ರೀತಿ ಇದೆ.. ದರ್ಶನ್ ನನಗೆ ಅಪ್ಪು ರೀತಿ” ಎಂದು ಶಿವಣ್ಣ ದರ್ಶನ್ ಬಗ್ಗೆ ಮಾತನಾಡಿದರು.

ನಂತರ ಸುದೀಪ್ ಅವರ ಬಗ್ಗೆ ಮಾತನಾಡಿದ ಶಿವಣ್ಣ “ಸುದೀಪ್ ನಾವು ಒಂದೇ ಫ್ಯಾಮಿಲಿ ಇದ್ದಹಾಗೆ. ಫ್ಯಾಮಲಿ ಅಂದಮೇಲೆ ಬರುತ್ತೆ ಹೋಗುತ್ತೆ ಆದರೆ ನಮ್ಮ ಪ್ರೀತಿ ಮಾತ್ರ ಯಾವತ್ತೂ ಕಮ್ಮಿ ಆಗಲ್ಲ..ಸುದೀಪ್ ಕನ್ನಡ ಮಾತ್ರವಲ್ಲದೆ ಬೇರೆಲ್ಲಾ ಕಡೆಯೂ ಸಕ್ಸಸ್ ಆಗಿರುವುದನ್ನು ನೋಡಿದರೆ ನಮಗೆ ಹೆಮ್ಮೆಯಾಗುತ್ತೆ. ಕನ್ನಡದ ನಟರು ಆ ರೀತಿ ಎತ್ತರಕ್ಕೆ ಬೆಳಿಯಬೇಕು ಅವರೊಂದಿಗೆ ದಿ ವಿಲನ್ ಚಿತ್ರದಲ್ಲಿ ನಟಿಸಿದ್ದು ಒಳ್ಳೆಯ ಅನುಭವವಾಗಿದೆ ಹಾಗೆ ಮುಂದಿನ ದಿನಗಳಲ್ಲೂ ಒಟ್ಟಿಗೆ ನಟಿಸೋ ಸಂದರ್ಭ ಬಂದರೆ ಮತ್ತೆ ಖಂಡಿತವಾಗಿಯೂ ನಟಿಸುತ್ತೇನೆ.”ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top