ಸಿನಿಮಾ

ಅವತ್ತು ಅಣ್ಣಾವ್ರು ಕೇಳಿ ಮೆಚ್ಚಿಕೊಂಡಿದ್ದ ಕಥೆ ಈಗ ಸಿನಿಮಾ ಆಯ್ತು.

ನಿರ್ದೇಶಕ ಸಿ.ವಿ. ಶಿವಶಂಕರ್ ಅವರು ಕಳೆದ ವರ್ಷ ‘ಒಳ್ಳೇ ಸಿನಿಮಾ’ ಎಂಬ ಸಿನಿಮಾ ಮಾಡುವುದಾಗಿ ಹೇಳಿದ್ದರು ಆದರೆ ಆ ಬಳಿಕ ಚಿತ್ರದ ಬಗ್ಗೆ ಯಾವುದೇ ಸುಳಿವಿರಲಿಲ್ಲ ಈ ನಡುವೆ ಸದ್ದಿಲ್ಲದೇ ‘ಅಕಳಂಕ’ ಎಂಬ ಸಿನಿಮಾ ಮಾಡಿದ್ದಾರೆ. ಈ ‘ಅಕಳಂಕ’ ಸಿನಿಮಾ ಬಗ್ಗೆ ಕುತೂಹಲಕಾರಿ ವಿಷಯವನ್ನು ನಿರ್ದೇಶಕ ಸಿ.ವಿ. ಶಿವಶಂಕರ್ ತಿಳಿಸಿದ್ದಾರೆ. ಹಾಗಾದರೆ ಏನದು ಕುತೂಹಲಕಾರಿ ವಿಷಯ ಎಂದು ತಿಳಿಯಲು ಮುಂದೆ ಓದಿ.

 

 

 

ವರನಟ ಡಾ. ರಾಜಕುಮಾರ್ ಅವರು ಈ ‘ಅಕಳಂಕ’ ಸಿನಿಮಾ ಕಥೆಯನ್ನು ಮೆಚ್ಚಿದ್ದರು ಎಂದು ಶಿವಶಂಕರ್ ಹೇಳಿದ್ದಾರೆ. ರಾಜಕುಮಾರ್ ಅವರು ಶಬರಿ ಮಲೈ ಗೆ ಹೋಗುತ್ತಿದ್ದದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಒಮ್ಮೆ ರಾಜಕುಮಾರ್, ರಜನಿಕಾಂತ್, ಶಿವರಾಮ್ ಸೇರಿ ಶಬರಿ ಮಲೈ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಅವರನ್ನು ನೋಡಲು ಅನೇಕರು ಸೇರಿದ್ದರು. ಆಗ ಶಿವಶಂಕರ್ ಅವರು ಬೇರೆ ದಾರಿಯಲ್ಲಿ ರಾಜಕುಮಾರ್ ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋದರಂತೆ. ಬರುವಾಗ ಉಳಿದುಕೊಂಡಿದ್ದ ಜಾಗದಲ್ಲೇ ಉಳಿದುಕೊಂಡರೆ ಮತ್ತೆ ಜನ ಸೇರುತ್ತಾರೆಂದು ಇಬ್ಬರು ಸೇರಿ ಕಾಂತಮಲೈ ಬೆಟ್ಟಕ್ಕೆ ಹೋಗಿದ್ದರಂತೆ.

ಕಾಂತಮಲೈ ಬೆಟ್ಟದಲ್ಲಿ ರಾಜಕುಮಾರ ಅವರಿಗೆ ಶಿವಶಂಕರ್ ಅವರು ಒಂದು ಸಿನಿಮಾ ಕಥೆಯನ್ನು ಹೇಳಿದ್ದರಂತೆ. ಈ ಕಥೆ ಯುಧಿಷ್ಠಿರ ವೈಕುಂಠಕ್ಕೆ ಹೋಗುವ ಸಮಯದಲ್ಲಿನ ಕಥೆಯನ್ನು ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿದ ಕಥೆಯದು. ಈ ಕಥೆ ಕೇಳಿದ ರಾಜಣ್ಣ ಅವರು ಖುಷಿಯಾಗಿದ್ದರಂತೆ. ಈಗ ಅದೇ ಕಥೆಯಿಂದ ನಿರ್ದೇಶಕ ಸಿ.ವಿ. ಶಿವಶಂಕರ್ ಅವರು ಸಿನಿಮಾ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top