ಮನೋರಂಜನೆ

ನಿರ್ದೇಶಕ ಮುರುಗದಾಸ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ನಟಿ ಶ್ರೀರೆಡ್ಡಿ.

ತೆಲುಗು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ.ಹಾಕೊಂಡಿದ್ದ ಬಟ್ಟೆಯನ್ನು ನಡು ರೋಡಿನಲ್ಲಿ ಕಿತ್ತೆಸೆದು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಮಹೇಶ್ ಬಾಬು, ಪವನ್ ಕಲ್ಯಾಣ್‌ರಂಥಾ ಅತ್ಯಂತ ಪ್ರಭಾವಿ ಸ್ಟಾರ್ ನಟರನ್ನೂ ಬಿಡದೆ ತಡವಿಕೊಂಡಿರುವ ಈಕೆ ಒಂದು ಕಡೆಯಿಂದ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಾ ಪ್ರತಿಯೊಬ್ಬರ ಮಾನ ಮರ್ಯಾದೆಗಳನ್ನು ಮೂರ್ಕಾಸಿಗೆ ಹರಾಜಿಡುತ್ತಿದ್ದಾಳೆ.

 

 

ಕಳೆದೊಂದಷ್ಟು ದಿನದಿಂದ ತೆಲುಗಿನ ನ್ಯಾಚುರಲ್ ಸ್ಟಾರ್ ನಾಣಿ ಬೆನ್ನು ಬಿದ್ದು ಅವನನ್ನು ಕಾಮುಕ, ಅವನಿಗೆ ಹುಡುಗಿಯರ ಶೋಕಿ ಎಂದೆಲ್ಲಾ ಎಂದು ಕರೆದು ನಾನಾ ಆರೋಪಗಳನ್ನು ಮಾಡಿದ್ದ ಶ್ರೀರೆಡ್ಡಿ ಇದೀಗ ತನ್ನ ಆರೋಪಗಳನ್ನು ತೆಲುಗು ಚಿತ್ರರಂಗದಿಂದ ತಮಿಳು ಚಿತ್ರರಂಗಡೆಗೆ ಶಿಫ್ಟ್ ಮಾಡಿದ್ದಾಳೆ.. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಶ್ರೀರೆಡ್ಡಿ ಆರೋಪ ಮಾಡಿದ್ದಾಳೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಶ್ರೀರೆಡ್ಡಿ ಸೌತ್ ಸಿನಿ ದುನಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾಳೆ.” ಹಾಯ್ ತಮಿಳು ಡೈರೆಕ್ಟರ್ ಮುರುಗದಾಸ್ ಅವರೇ ಹೇಗಿದ್ದೀರಿ,, ವೇಲಗೊಂಡ ಶ್ರೀನಿವಾಸ್ ಅವರ ಮುಖಾಂತರ ನಾವಿಬ್ಬರು ಭೇಟಿ ಮಾಡಿದ್ದೇವು. ನೀವು ನನಗೆ ಚಿತ್ರದಲ್ಲಿ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ನಮ್ಮಿಬ್ಬರ ನಡುವೆ ಸಾಕಷ್ಟು ಭಾರಿ……. ನಡೆದಿದೆ ಆದರೆ ಇದುವರೆಗೂ ನೀವು ನನಗೆ ಯಾವುದೇ ಸಿನಿಮಾ ಅವಕಾಶ ನೀಡಿಲ್ಲ” ಎಂದು ಬರೆದುಕೊಂಡಿದ್ದಾರೆ.. ಈ ಮೂಲಕ ತಮಿಳು ನಿರ್ದೇಶಕ ತನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಾಸ್ಟ್ ಕೌಚಿಂಗ್ ಮಾಡಿದವರ ಬಣ್ಣ ಬಯಲು ಮಾಡುವ ಶಪಥ ತೊಟ್ಟಿರುವ ಈಕೆ ತಿಂಗಳಿನಿಂದೆ ಇಂಡಸ್ಟ್ರಿಯ ಖ್ಯಾತನಾಮರ ಕಾಮಪುರಾಣವನ್ನು ಹೊರಗೆಳೆದ ಬೆನ್ನಲ್ಲೇಯೇ ಇದೀಗ ಮತ್ತೊಂದು ಸುತ್ತಿನ ಸಮರಕ್ಕೆ ಚಾಲನೆ ನೀಡಿದ್ದಾಳೆ. ಪವನ್ ಕಲ್ಯಾಣ್, ಮಹೇಶ್ ಬಾಬು ಅವರಂಥ ದೊಡ್ಡ ನಟರನ್ನೇ ಲೆಕ್ಕಿಸಿದೆ ಅವರನ್ನು ಟಾರ್ಗೆಟ್ ಮಾಡಿ ಕೆಟ್ಟದಾಗಿ ಮೂದಲಿಸಿದ ಈಕೆಯ ವಕ್ರದೃಷ್ಟಿ ಇದೀಗ ತಮಿಳು ಚಿತ್ರರಂಗದ ಮೇಲೆ ಬಿದ್ದಿದ್ದು ಮತ್ತಷ್ಟು ಅನೇಕ ಹೆಸರುಗಳನ್ನೂ ಬಹಿರಂಗಪಡಿಸುವುದಾಗಿ ಸುಳಿವು ನೀಡಿದ್ದಾಳೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top