ಸಮಾಚಾರ

ಸಂಜಯ್ ದತ್ ಜೇವನಾಧಾರಿತ ಚಿತ್ರ ತೆರೆ ಮೇಲೆ ಬರುತ್ತೆ ಅಂತ 12 ವರ್ಷಗಳ ಹಿಂದೆಯೇ ಈ ನಟನಿಗೆ ಗೊತ್ತಾಗಿತ್ತಂತೆ.

ರಾಜ್​​​​ಕುಮಾರ್ ಹಿರಾನಿ ನಿರ್ದೇಶನದ ‘ಸಂಜು’ ಸಿನಿಮಾ ಜೂನ್ 29 ರಂದು ತೆರೆಕಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದು ಅವರಿಂದ ಸೈ ಅನಿಸಿಕೊಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ವಿಷ್ಯ ಗೊತ್ತೆಯಿದೆ. ರಿಲೀಸ್ ಆದ ಕೇವಲ 2 ವಾರಗಳಲ್ಲಿ ಈ ಚಿತ್ರ ಗಳಿಸಿದ ಲಾಭ ಬರೋಬ್ಬರಿ 250 ಕೋಟಿ ,ಈ ಚಿತ್ರ ತೆಗೆದ ನಿರ್ಮಾಪಕರು ಕುಶ್ ಚಿತ್ರ ನೋಡಿದ ಪ್ರೇಕ್ಷಕನ್ನು ಕುಶ್ .2018 ನೇ ಸಾಲಿನ ಸೂಪರ್ ಡೂಪರ್ ಹಿಟ್ ಚಿತ್ರಗಳ ಸಾಲಲ್ಲಿ ಸಂಜು ಚಿತ್ರ ಒಂದು ಹೊಸ ಸೇರ್ಪಡೆ.

ಈ ಚಿತ್ರ ಸಂಜಯ್ ದತ್ ರವರ ಜೀವನ ಆಧಾರಿತ ಚಿತ್ರ, ಸಂಜಯ್ ದತ್ ಅವರ ತಂದೆ ಸುನಿಲ್ ದತ್ ಅವರಿಗೆ ಸಂಜಯ್ ಜೀವನಾಧಾರಿದ ಚಿತ್ರ ಮುಂದೊಂದಿನ ಬರುತ್ತೆ ಅಂತಾ ಗೊತ್ತಿತ್ತಾ ಎಂಬ ಪ್ರಶ್ನೆಗಳು ಈಗ ಮೂಡತೊಡಗಿವೆ. ಸುನಿಲ್ ದತ್ ಸಾಯುವ ಮುನ್ನ ಒಂದು ಪತ್ರ ಬರೆದಿದ್ದಾರೆ. ಅದು ಕೂಡ ಸಂಜು ಸಿನಿಮಾದಲ್ಲಿ ತಮ್ಮದೇ ಪಾತ್ರ( ಸಂಜು ತಂದೆ ಪಾತ್ರ ) ಮಾಡಿರುವ ಪರೇಶ್ ರಾವಲ್ ಅವರಿಗೆ.

ಮೇ 25 ,2005 ರಂದು ಪರೇಶ್ ಮನೆಗೆ ಪತ್ರವೊಂದು ಬರುತ್ತೆ. ಆದರೆ ಆ ಹೊತ್ತು ಪರೇಶ್ ಮನೆಯಲ್ಲಿ ಇರಲಿಲ್ಲ. ಪರೇಶ್ ಮನೆಯಲ್ಲಿರುವ ಪತ್ನಿಗೆ ಫೋನ್ ಮಾಡಿ ಮನೆಗೆ ಬರೋದು ತಡವಾಗುತ್ತೆ, ಸುನಿಲ್ ದತ್ ಅವರು ತೀರಿಕೊಂಡಿದ್ದಾರೆ, ನಾನು ಅವರ ಮನೆಗೆ ಹೋರಡುತ್ತೇನೆ ಎಂದು ಹೇಳುತ್ತಾರೆ. ಅವರ ಮಾತು ಕೇಳು ಒಂದು ಕ್ಷಣ ಶಾಕ್ ಆದ ಪತ್ನಿ ಸುನಿಲ್ ದತ್ ಅವರ ಪತ್ರವೊಂದು ಬಂದಿರುವ ವಿಚಾರ ಹೇಳುತ್ತಾರೆ. ಆ ಪತ್ರದಲ್ಲಿ ಸುನಿಲ್ ದತ್ ಅವರು ಪರೇಶ್ ರಾವಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುತ್ತಾರೆ.

 

 

 

ಆದರೆ ಪರೇಶ್ ರಾವಲ್ ಅವರ ಹುಟ್ಟುಹಬ್ಬ ಇನ್ನು ಐದು ದಿನ ಬಿಟ್ಟು ಇರುತ್ತದೆ. ಈಗ್ಯಾಕೆ ಇವರು ಈ ಪತ್ರ ಕಳುಹಿಸಿದರು ಎಂಬ ಪ್ರಶ್ನೆ ಆಗಿನಿಂದ ಇವರ ಮನಸಿನಲ್ಲಿ ಕೊರೆಯುತ್ತಲೇ ಇತ್ತು. ಈ ಹಿಂದೆ ಇವರಿಬ್ಬರು ಕೂಡ ಒಬ್ಬರಿಗೊಬ್ಬರು ಯಾವುದೇ ಪತ್ರ ಬರೆದಿರಲಿಲ್ಲ.

ಇದಾದ ಬಳಿಕ ಪರೇಶ್ ರಾವಲ್ ಅವರಿಗೆ ಇನ್ನೊಂದು ಆಶ್ಚರ್ಯ ಕಾದಿತ್ತು. 2017 ರಲ್ಲಿ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ಸಂಜು ಚಿತ್ರದ ಬಗ್ಗೆ ಪರೇಶ್ ಗೆ ಹೇಳಿ ನೀವು ಸಂಜಯ್ ದತ್ ತಂದೆಯ ಪಾತ್ರ ಮಾಡಬೇಕು ಎಂದು ಹೇಳಿದಾಗ ಪರೇಶ್ ರಾವಲ್ ಮಾತೆ ಹೊರಳಲಿಲ್ಲ ಎಂದು ತಿಳಿದು ಬಂದಿದೆ. 12 ವರ್ಷಗಳ ಹಿಂದೆ ,ನನ್ನ ಹುಟ್ಟುಹಬ್ಬದ ನೆಪದಲ್ಲಿ ಬರೆದ ಪತ್ರ ಅಂತಾ ಅನ್ನಿಸಿಬಿಡುತ್ತೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top