ಸಿನಿಮಾ

ಈ ಬಾಲಿವುಡ್ ಸ್ಟಾರ್ ನಟಿಗೆ ಕ್ರಿಕೆಟ್ ಅಂದ್ರೆ ತುಂಬಾ ಕೋಪವಂತೆ- ಯಾಕೆ ಗೊತ್ತಾ

ಕ್ರಿಕೆಟ್ ಸಾಮಾನ್ಯವಾಗಿ ಎಲ್ಲರಿಗು ತಿಳಿದಿರುವಂತಹ ಕ್ರೀಡೆಯಾಗಿದೆ ಅನೇಕ ದೇಶದಲ್ಲಿ ಕ್ರಿಕೆಟ್ ಆಡುತ್ತಾರೆ. ಈಗ ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ಜನ ಕ್ರಿಕೆಟ್ ನೋಡಲು ಇಷ್ಟ ಪಡುತ್ತಾರೆ. ಆದರೆ ಇಲ್ಲೊಬ್ಬರು ಬಾಲಿವುಡ್ ನಟಿಗೆ ಕ್ರಿಕೆಟ್ ಕಂಡ್ರೆ ಗರಂ ಆಗ್ತಾರಂತೆ. ಯಾರು ಆ ನಟಿ ಎಂದು ಯೋಚನೆ ಮಾಡುತ್ತಿದ್ದೀರಾ ಹಾಗಾದರೆ ಮುಂದೆ ಓದಿ.

ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಕ್ರಿಕೆಟ್ ಕಂಡ್ರೆ ಗರಂ ಆಗುತ್ತಾರಂತೆ. ತಾಪ್ಸಿ ಕ್ರಿಕೆಟ್ ಮೇಲಿನ ಕೋಪಕ್ಕೆ ಭಲವಾದ ಕಾರಣವೂ ಇದೆ. ಭಾರತದಲ್ಲಿ ಕ್ರಿಕೆಟ್‌ನಿಂದ ಇತರ ಕ್ರೀಡೆ ಮತ್ತು ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ತಾಪ್ಸಿ ಕ್ರಿಕೆಟ್ ವಿರುದ್ಧ ಸಿಟ್ಟನು ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಾಪ್ಸಿ ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

 

ನಟಿ ತಾಪ್ಸಿ ಪನ್ನು ನಟಿಸಿರುವ ಸೂರ್ಮಾ ಚಿತ್ರ ಇದೇ ಜುಲೈ 13 ರಂದು ರಿಲೀಸ್ ಆಗಲಿದೆ. ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಜೀವನಾಧಾರಿತ ಈ ಚಿತ್ರದಲ್ಲಿ ತಾಪ್ಸಿ ನಾಯಕಿಯಾಗಿ ಕಾಣಿಸಿಕೊಂಡರೆ, ದಲ್ಜೀತ್ ದೋಸಾನ್ಜ್ ನಾಯಕನಾಗಿ ಅಭಿನಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕ್ರೀಡಾ ಹಿನ್ನಲೆಯ ಚಿತ್ರವಾಗಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ತಾಪ್ಸಿ ನಟನೆಯ ‘ಮುಲ್ಕ್’ ಚಿತ್ರವು ಕೂಡ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ ಎಂದು ತಿಳಿದು ಬಂದಿದೆ. ತಾಪ್ಸಿ ಅಭಿನಯದ ಎರಡು ಸಿನಿಮಾ ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿರುವುದಕ್ಕೆ ಫುಲ್ ಖುಷಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top