ಸಮಾಚಾರ

ಕೊನೆಗೂ ಹೊರಬಂದ ಥಾಯ್ಲೆಂಡ್ ಗುಹೆಯಲ್ಲಿದ್ದ ಮಕ್ಕಳು: ಗುಹೆಯ ವಿಶೇಷತೆ ಏನು, ಕಾರ್ಯಾಚರಣೆ ಹೇಗೆ

ಥಾಯ್ಲೆಂಡ್ ಗುಹೆಯಿಂದ 12 ಫುಟ್​ಬಾಲ್ ಆಟಗಾರರನ್ನು ಮತ್ತು ಅವರ ಕೋಚ್ ಅವರನ್ನು ಯಶಸ್ವಿಯಾಗಿ ಹೊರತರಲು ಅಲ್ಲಿನ ಕಾರ್ಯಾಚರಣೆ ಕೈಗೊಂಡಿದ್ದ ತಂಡ ಸಫಲವಾಗಿದೆ.

 

ಅಲ್ಲಿ ಆಗಿದ್ದೇನು?

ಜೂನ್​ 23 ರಂದು ಫುಟ್ ​ಬಾಲ್​ ಆಟಗಾರರಾದ 12 ಬಾಲಕರು ಮತ್ತು ಅವರ ಕೋಚ್​ ಈ ಗುಹೆಯೊಳಗೆ ಹೋಗಿದ್ದರು.
ಆನಂತರ ದಿಢೀರನೆ ಸುರಿದ ಭಾರಿ ಮಳೆಯಿಂದಾಗಿ ಗುಹೆಯ ನಿರ್ಗಮನದ ಹಾದಿ ಮುಚ್ಚಿಟ್ಟು, ಅಷ್ಟೂ ಜನ ಗುಹೆಯಿಂದ ಹೊರಬರಲಾಗದೆ, ಅಲ್ಲಿಯೇ ಸಿಲುಕಿದರು.

ಗುಹೆ ವಿಶೇಷತೆ ಏನು:
ಚಿಯಾಂಗ್ ಲುವಾಂಗ್ ನಾಂಗ್ ನೋನ್ ಎಂಬ ಗುಹೆ ಥಾಯ್ಲೆಂಡ್​ನ ಅತ್ಯಂತ ಅಪಾಯಕಾರಿ ಹಾಗು ಕಡಿದಾದ ಗುಹೆಗಳಲ್ಲಿ ಒಂದು. ಮಳೆಗಾಲದಲ್ಲಿ ಇಲ್ಲಿ ಪ್ರವೇಶ ನಿಷಿದ್ಧ. ಮಯನ್ಮಾರ್ ದೇಶದ ಗಡಿ ಭಾಗದಲ್ಲಿರುವ ಈ ಗುಹೆಯಲ್ಲಿ ಬುದ್ಧನ ದೇವಾಲಯ ಇದೆ. ಹೀಗಾಗಿ ಇಲ್ಲಿಗೆ ವೈಲ್ಡ್ ಬೊವಾರ್ ಫುಟ್‍ಬಾಲ್ ತಂಡದ 12 ಬಾಲಕರು ಮತ್ತು ಕೋಚ್ ಜೂನ್ 23ರಂದು ಹೋಗಿದ್ದರು.

 

 

 

 

 

ಕಾಪಾಡಲು ಹೋದ ಮುಳುಗು ತಜ್ಞ ಸಾವನ್ನಪ್ಪಿದ್ದರು:

ಗುಹೆಯಲ್ಲಿರುವವರನ್ನು ರಕ್ಷಣೆಗಾಗಿ ಹೋಗಿದ್ದ ಸೀಲ್ ಮಾಜಿ ಡೈವರ್ (ಮುಳುಗು ತಜ್ಞ) ಒಬ್ಬರು ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ಮಧ್ಯದಲ್ಲೇ ಒಕ್ಸಿಝೇನ್ ಖಾಲಿ ಆದ ಪರಿಣಾಮ ಅವರು ಸಾವನ್ನಪ್ಪಿದರು.

 

ಕಾರ್ಯಾಚರಣೆ ಹೇಗೆ:

ಗುಹೆಯಿಂದ ಹೊರಬರಲು ಕೇವಲ ಒಂದೇ ಮಾರ್ಗ ಇತ್ತು ಆದ್ರೆ ಅದು ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ಪೂರ್ಣವಾಗಿ ಮುಚ್ಚಲ್ಪಟ್ಟಿತ್ತು. ಇತ್ತ ರಾತ್ರಿಯಾದರೂ ಮಕ್ಕಳು ಮನೆಗೆ ಬರದನ್ನು ಕಂಡ ಹೆತ್ತವರು ಚಿಂತಾಕ್ರತರಾಗಿದ್ದರು. ಮುಂದಿನ 16 ದಿನಗಳು ಯಾವ ಹೋರಾಟಕ್ಕಿಂತ ಕಡಿಮೆ ಇಲ್ಲ. ಗುಹೆಯಲ್ಲಿ ಸಿಲುಕಿದ ಇದೇ ಮಕ್ಕಳಲ್ಲಿ ಒಬ್ಬನ ತಾಯಿ ಪೊಲೀಸರಿಗೆ ತನ್ನ ಮಗ ನಾಪತ್ತೆಯಾಗಿರುವುದಾಗಿ ದೂರನ್ನು ನೀಡಿದ್ದು, ಇದಾದ ಬಳಿಕ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಥಾಯ್ಲೆಂಡ್​ನ ನೌಕಾದಳವು ಮಕ್ಕಳ ರಕ್ಷಣಾ ಕಾರ್ಯ ಆರಂಭಿಸಿತ್ತು. ಅಮೆರಿಕಾ ಮತ್ತು ಚೀನಾದಂತಹ ಪಟ್ಟಭದ್ರ ಶತ್ರುಗಳು ಈ ಕಾರ್ಯಾಚರಣೆಗೆ ತಮ್ಮೆಲ್ಲಾ ಮನಸ್ತಾಪಗಳನ್ನು ಕೆಲ ಸಮಯಕ್ಕೆ ಬದಿಗಿಟ್ಟು.  ಥಾಯ್ಲೆಂಡ್​ನ ನೌಕಾದಳವು ಮಕ್ಕಳ ರಕ್ಷಣಾ ಕಾರ್ಯ ಆರಂಭಿಸಿತ್ತು. ಆದರೆ ಅದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ.

 

ಪ್ರವಾಹದಿಂದ ಗುಹೆಯಿಂದ ಮಕ್ಕಳನ್ನು ಹೊರತರಲು 50 ವಿದೇಶದ ಮುಳುಗು ತಜ್ಙರು ಮತ್ತು ಥಾಯ್ಲೆಂಡ್​ ನೌಕಾ ದಳದ 40 ಯೋಧರ ಸಾಹಸಮಯ ಕಾರ್ಯಾಚರಣೆ ಕೊನೆಗೂ ಯಶಸ್ವಿ ಆಯಿತು. ಎಲ್ಲರನ್ನು ಸೇಫ್ ಆಗಿ ಹೊರತಂದು ಈಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top