ಮನೋರಂಜನೆ

ವೈರಲ್ ಆಯ್ತು ‘ದಿ ವಿಲನ್’ ಪ್ರೊಮೋಶನಲ್ ಸಾಂಗ್.

ತಮ್ಮ ಪ್ರತಿ ಚಿತ್ರದ ಬಗ್ಗೆಯೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡೋದರಲ್ಲಿ ಪ್ರೇಮ್ ಎಕ್ಸ್ಪರ್ಟ್. ಏನನ್ನೇ ಮಾಡಿದರು ಕೊಂಚ ಸೆನ್ಸೇಷನ್ ಆಗಿ ಮಾಡುವ ಪ್ರೇಮ್ ದಿ ವಿಲನ್ ಚಿತ್ರದಲ್ಲೂ ಅದನ್ನು ಮುಂದುವರೆಸಿದ್ದಾರೆ.. ಸುದೀಪ್-ಶಿವಣ್ಣ ಕಾಂಬಿನೇಷನ್ನಿನ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಬೆಟ್ಟವಾಗುತ್ತಿದೆ. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಲನ್ ಚಿತ್ರಕ್ಕಾಗಿ ಅಭಿಮಾನಿಗಳು ಕಾದು ಕಾದು ಸುಸ್ತೇದ್ದಿದ್ದಾರೆ.. ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳ ಕಾತರ ಮತ್ತು ತನ್ನ ವಿರುದ್ಧ ಹರಿದಾಡುತ್ತಿರುವ ಮೂದಲಿಕೆಯ ಮಾತುಗಳಿಂದ ಕಡೆಗೂ ನಿರ್ದೇಶಕ ಪ್ರೇಮ್ ಎಚ್ಚೆತ್ತುಕೊಂಡಿದ್ದು ಚಿತ್ರಕ್ಕೆ ಸಂಭಂದಿಸಿ ಎಲ್ಲಾ ಕೆಲಸಗಳನ್ನು ಮುಗಿಸುವತ್ತ ಗಮನಹರಿಸಿದ್ದಾರೆ.

 

 

ಈಗಾಗಲೇ ಬಿಡುಗಡೆಯಾಗಿರುವ ‘ದಿ ವಿಲನ್’ ಚಿತ್ರ ಟೀಸರ್ ಯೂಟ್ಯೂಬ್ ನಲ್ಲಿ ಸುನಾಮಿ ಉಂಟುಮಾಡಿದ್ದು ಹಳೇ ದಾಖಲೆಗಳನ್ನೆಲ್ಲಾ ಚಿಂದಿ ಉಡಾಯಿಸುತ್ತಿದೆ. ಅತೀ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡ ಹೆಗ್ಗಳಿಕೆ ಪಾತ್ರವಾಗಿರುವ ‘ದಿ ವಿಲನ್’ ಟೀಸರ್ ಕಂಡು ಇಡೀ ಸ್ಯಾಂಡಲ್’ವುಡ್ಡೇ ಬೆಚ್ಚಿ ಬಿದ್ದಿದೆ.. ಹೀಗಿರುವಾಗ ಇನ್ನೇನು ದಿನ ಕಳೆಯುವುದರಲ್ಲಿ ಹಾಡುಗಳ ಅಬ್ಬರವೂ ಶುರುವಾಗಲಿದೆ.. ಅಂದಹಾಗೆ ಚಿತ್ರದ ಮೊದಲ ಹಾಡು ಅಧಿಕೃತವಾಗಿ ನಾಳಿದ್ದು ಅಂದ್ರೆ ಜುಲೈ೧೪ ರಂದು ಬಿಡುಗಡೆಗೊಳ್ಳಲಿದೆ.. ಈ ಹಂತದಲ್ಲಿ ಚಿತ್ರಕ್ಕೆ ಮತ್ತಷ್ಟು ಹೈಪ್ ನೀಡುವ ಸಲುವಾಗಿ ಅಭಿಮಾನಿಗಳು ತಯಾರಿಸಿಕೊಂಡಿರುವ ಒಂದೊಂದೇ ಪ್ರೊಮೋಶನಲ್ ಸಾಂಗ್ ಗಳು ರಿವೀಲ್ ಆಗುತ್ತಿವೆ..

ಸಾಮಾನ್ಯವಾಗಿ ಯಾವುದೇ ಚಿತ್ರಕ್ಕೆ ಒಂದು ಅಥವಾ ಎರಡು ಪ್ರೊಮೋಷನ್ ಸಾಂಗ್ ಮಾಡಿಸೋದು ವಾಡಿಕೆ ಆದರೆ ಇದೇ ಮೊದಲಬಾರಿಗೆ ದಿ ವಿಲನ್ ಚಿತ್ರಕ್ಕಾಗಿ ಐದಕ್ಕಿಂತ ಪ್ರೊಮೋಷನ್ ಸಾಂಗ್’ಗಳು ರೆಡಿಯಾಗಿದ್ದು ಐದೂ ಹಾಡುಗಳನ್ನು ಯುವ ಸಂಗೀತ ನಿರ್ದೇಶಕರು ಸಂಯೋಜಿದ್ದಾರೆ. ಈ 5 ಹಾಡುಗಳಿಗೂ ತಮ್ಮದೇ ಶೈಲಿಯಲ್ಲಿ ಲಿರಿಕ್ಸ್ ಬರೆಸಿಕೊಂಡಿರುವ ಸಂಗೀತ ನಿರ್ದೇಶಕರು ಅದಕ್ಕೆ ಹೇಳಿಮಾಡಿಸಿದ ರೀತಿಯಲ್ಲಿ ವಿಡಿಯೋ ಮಾಡಿಸಿ, ಸಿನಿಮಾದ ಪ್ರಮೋಷನ್‌ಗಾಗಿ ಗಿಫ್ಟ್ ನೀಡಲಿದ್ದಾರೆ..

ಆ ಹಾದಿಗಳಲ್ಲಿ ಇದೀಗ ಮೊದಲ ಹಾಡೊಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸ್ವತಃ ಕಿಚ್ಚ ಸುದೀಪ್ ಸೇರಿದಂತೆ ನಿರ್ದೇಶಕ ಪ್ರೇಮ್ ಮತ್ತು ಅಭಿಮಾನಿಗಳಲೆಲ್ಲಾ ಮೆಚ್ಚುಗೆ ಗಳಿಸಿಕೊಂಡಿದೆ.. ಸುದೀಪ್ ಅವರ ಕಟ್ಟಾ ಅಭಿಮಾನಿಯಾಗಿರುವ ಬಚ್ಚನ್ ಚೇತನ್ ಎಂಬಾತ ಈ ಹಾಡಿನ ರೂವಾರಿಯಾಗಿದ್ದು ಆತನ ಕೆಲಸಕ್ಕೆ ಸಾಕ್ಷಾತ್ ಕಿಚ್ಚನೇ ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಚಿತ್ರದ ಉಳಿದ ಪ್ರೊಮೊಶನಲ್ ಹಾಡುಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆಯಂತೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top