ಸಮಾಚಾರ

ಯಶ್‌ ಕೊಲೆಗೆ ನಡೆದಿತ್ತು ಸ್ಕೆಚ್‌: ಸ್ಪೋಟಕ ಮಾಹಿತಿ ಹೊರಹಾಕಿದ ಸೈಕಲ್‌ ರವಿ.

ಕುಖ್ಯಾತ ಭೂಗತ ಕ್ರಿಮಿನಲ್ ಸೈಕಲ್ ರವಿ ಜೂನ್ 27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧನಕ್ಕೊಳಗಾಗಿ ಸದ್ಯ ಪೋಲೀಸರ ವಿಚಾರಣೆಯಲ್ಲಿದ್ದಾನೆ.. ಈ ವೇಳೆ ಸಾಕಷ್ಟು ಮಾಹಿತಿಗಳನ್ನು ಹೊರಹಾಕುತ್ತಿರುವ ಸೈಕಲ್ ರವಿ ಇದೀಗ ಇಡೀ ಸ್ಯಾಂಡಲ್ ವುಡ್ ಬೆಚ್ಚಿ ಬೀಳುವಂತ ವಿಚಾರವೊಂದನ್ನ ಬಿಚ್ಚಿಟ್ಟಿದ್ದಾನೆ.. 2 ವರ್ಷಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಪೋಲೀಸರ ವಿಚಾರಣೆಯಲ್ಲಿ ರವಿ ಹೊರಹಾಕಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ.

 

 

“ಎರಡೂವರೆ ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಗಣ್ಯ ವ್ಯಕ್ತಿಗಳ ಮಕ್ಕಳ ಪಾರ್ಟಿಯಲ್ಲಿ ಯಶ್ ಅವರನ್ನು ಕೊಲೆ ಮಾಡುವ ಪ್ರಸ್ತಾಪ ಆಗಿತ್ತು. ಯಾರಿಗೂ ತಿಳಿಯದ ರೀತಿಯಲ್ಲಿ ಯಶ್ ಹತ್ಯೆ ಮಾಡಬೇಕು ಎಂದು ಆ ಸಂದರ್ಭದಲ್ಲಿ ಮಾತಾಡಿದ್ದರು. ಆದರೆ ಆನಂತರದಲ್ಲಿ ಯಾರೂ ಸಂಚು ರೂಪಿಸುವ ಮಟ್ಟಕ್ಕೆ ಹೋಗಿಲ್ಲ.. ಆ ವೇಳೆ ನಡೆಯುತ್ತಿದ್ದ ಸ್ಟಾರ್ ವಾರ್ ನಿಂದಲೇ ಯಶ್ ಹತ್ಯೆಗೆ ಸಂಚು ರೂಪಿಸಲಾಗಿತ್ತು” ಎಂಬ ಮಾಹಿತಿಗಳನ್ನು ಸೈಕಲ್ ರವಿ ಹೊರಹಾಕಿದ್ದಾನೆ ಎನ್ನಲಾಗಿದೆ.

ಒಂದು ಕಾಲದ ದುಷ್ಮನ್ ಗಳಾಗಿದ್ದ ಸೈಕಲ್ ರವಿ ಮತ್ತು ಮತ್ತೊಬ್ಬ ರೌಡಿ ತ್ಯಾಗರಾಜನಗರದ ಕೋದಂಡ ಯಶ್ ಹತ್ಯೆಯ ವಿಚಾರವಾಗಿ ರಾಜಿಯಾಗಿದ್ದರು. ಯಶ್‌ ಹತ್ಯೆ ವಿಚಾರದಲ್ಲಿ ಸೈಕಲ್‌ ರವಿಗಿಂತ ಹೆಚ್ಚಾಗಿ ಕೋದಂಡ ಆಸಕ್ತಿ ಹೊಂದಿದ್ದ ಎಂದು ಹೇಳಲಾಗುತ್ತಿದೆ. ಆದರೆ ಅನೇಕ ಕೇಸುಗಳಲ್ಲಿ ಅಪರಾಧಿಯಾಗಿರುವ ಕೋದಂಡ ಈ ವರೆಗೂ ಪೊಲೀಸರ ಬಲೆಗೆ ಬಿದ್ದಿಲ್ಲ. ಸದ್ಯ ಬಂಧಿತನಾಗಿರುವ ರವಿಯ ಮೂಲಕ ಕೋದಂಡನ ಚಲನ ವಲನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಎರಡೂವರೆ ವರ್ಷಗಳ ಹಿಂದೆ ಯಶ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂಬ ವಿಚಾರ ಎಲ್ಲೆಡೆ ಹಬ್ಬಿಕೊಂಡಿತ್ತು. ಆಗ ನಟ ಯಶ್ ತಮ್ಮ ಸ್ನೇಹಿತರೊಡನೆ ಕಮೀಷನರ್ ಬಳಿ ತೆರಳಿ ಮೌಖಿಕವಾಗಿ ಕಂಪ್ಲೇಟ್ ಅನ್ನು ನೀಡಿದ್ದರು ಎನ್ನಲಾಗಿತ್ತು. ಯಶ್ ದೂರನ್ನೇ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಬೆಂಗಳೂರಿನ ಹಲವು ರೌಡಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು. ಇದೀಗ ಸೈಕಲ್ ರವಿಯನ್ನು ಇದೇ ವಿಚಾರವಾಗಿ ವಿಚಾರಣೆ ನಡೆಸಿದಾಗ ಈ ಸ್ಪೋಟಕ ಮಾಹಿತಿ ಹೊರಬಿದ್ದಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top