ಮನೋರಂಜನೆ

ಪುನೀತ್ ರಾಜಕುಮಾರ್ ಹೆಸರು ಬಳಸಿಕೊಂಡು ಮಕ್ಮಲ್ ಟೋಪಿ ಹಾಕಿದ ಆಸಾಮಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನು ಬಳಸಿಕೊಂಡು ವ್ಯಕ್ತಿಯೊರ್ವನು ಜನರಿಗೆ ಮೋಸ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.. ಮೈಸೂರು ಸೀಮೆಯ ರವಿ ಎಂಬ 28 ವರ್ಷದ ಈತ ತಾನು ಪುನೀತ್ ಅವರ ಆಪ್ತ ಅಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಪುನೀತ್ ರಾಜ್ ಕುಮಾರ್ ಹತ್ತಿರ ಕೆಲಸ ಕೊಡಿಸುವ ಆಮಿಷವೊಡ್ಡಿ ಹಣ, ಚಿನ್ನಾಭರಣ ಗುಂಜಿಕೊಂಡಿದ್ದಾನೆ.

 

 

ಅಷ್ಟಕ್ಕೂ ಈತ ಈ ರೀತಿ ಮಾಡಿರುವುದು ತನ್ನ ಸ್ವಂತ ತಂಗಿಯ ಮದುವೆ ಮಾಡುವ ಸಲುವಾಗಿ.. ಹೌದು ತಂಗಿ ಮದುವೆ ಖರ್ಚಿಗಾಗಿ ಹಣವನ್ನು ಹೊಂದಿಸಿದ್ದ ರವಿ ಅದಕ್ಕಾಗಿ ಈ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಆ ಮೂಲಕ ತನ್ನ ಆಪ್ತ ಸ್ನೇಹಿತರು ಮತ್ತು ಸಂಭಂದಿಗಳನ್ನೇ ಟಾರ್ಗೆಟ್ ಮಾಡಿ ಮಂಕುಬೂದಿ ಎರೆಚಿದ್ದಾನೆ.. ಅಲ್ಲದೆ ಮದುವೆ ಕೆಲಸಕ್ಕೆ ಬಂದಿದ್ದ ಪೋಟೋಗ್ರಾಫರ್, ಪ್ಲವರ್ ಡೆಕೋರೇಟರ್, ಫೋಟೋಗ್ರಾಫರ್’ರಿಗೂ ಇದೇ ಸುಳ್ಳು ಹೇಳಿ ಮೋಸದ ಅವರನ್ನೂ ಯಾಮಾರಿಸಿದ್ದಾನೆ.. ತಂಗಿ ಮದುವೆ ಮುಗಿದ ಮೇಲೆ ಕಿಲಾಡಿ ರವಿ ಮಹಾ ಮೋಸ ಬಯಲಾಗಿದೆ..

ರವಿಯ ಈ ನವರಂಗಿ ಆಟ ಬಯಲಾದ ಮೇಲೆ ಇದೀಗ ಈತನಿಗೆ ದುಡ್ಡು ಕೊಟ್ಟ ಸಂಭಂದಿಗಳು ಕಂಗೆಟ್ಟುಹೋಗಿದ್ದು ಆತೈಗೆ ತಕ್ಕ ಪಾಠಕಲಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಪ್ರಾರ್ಥಮಿಕ ಹಂತವಾಗಿ ಅವರೆಲ್ಲಾ ಸೇರಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.. ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top