ಸಮಾಚಾರ

ನೀವು ನಂಬಲು ಅಸಾಧ್ಯವಾದ ಈ 10 ದೇವಸ್ಥಾನಗಳು ಭಾರತದಲ್ಲಿವೆ

ಬುಲೆಟ್ ಮಂದಿರ:

ಬುಲೆಟ್ ಮಂದಿರ, ರಾಜಸ್ತಾನ ರಾಜ್ಯದ ಜೋದ್‍ಪುರ ಸಮೀಪ ಬುಲೆಟ್‍ ಮಂದಿರ ಇದೆ. ಇಲ್ಲಿ ಬೈಕೇ ದೇವರು. ಅದೇ ಮೂಲ ದೇವರು. ಇದೇ ಉತ್ಸವ ಮೂರ್ತಿ ಎಂದು ಭಾವಿಸಬೇಡಿ. ಇಲ್ಲಿ ಉತ್ಸವ ಇಲ್ಲ. ಅದೆಲ್ಲಕ್ಕಿಂತಲೂ ಅಚ್ಚರಿ ಎಂದರೆ ಮದ್ಯವೇ ತೀರ್ಥ. ಇಲ್ಲಿ ಪೂಜಾರಿ ಕೂಡ ಇದ್ದಾರೆ. ಬೈಕಿಗೆ ಆರತಿ, ಪೂಜೆಯನ್ನು ಮಾಡುತ್ತಾರೆ. ಗಂಧದ ಕಡ್ಡಿ ಹಚ್ಚುತ್ತಾರೆ. ಅದೇನೋ ಮಂತ್ರವನ್ನೂ ಹೇಳುತ್ತಾರೆ. ಬುಲೆಟ್‍ಗೆ ಅಡ್ಡಬೀಳಲು ಅಪಾರ ಸಂಖ್ಯೆಯ ಭಕ್ತರೂ ಬರುತ್ತಾರೆ.

ಶ್ರೀಮಂತನ ಮಗನೊಬ್ಬ 1998ರಲ್ಲಿ ಬೈಕ್‍ನಲ್ಲಿ ಸಾಗುತ್ತಿರುವಾಗ ಮರಕ್ಕೆ ಡಿಕ್ಕಿ ಹೊಡೆದು ಅಸುನೀಗಿದ. ಸಕ್ಕತ್ತಾಗಿ ಡ್ರಿಂಕ್ಸ್ ಮಾಡಿದ್ದ ಆತ ಮರಕ್ಕೆ ಡಿಕ್ಕಿ ಹೊಡೆದು ಸಾವನಪ್ಪಿದ. ಅವನ ಜ್ಞಾಪಕಾರ್ಥವಾಗಿ ಈ ಬುಲೆಟ್ ಮಂದಿರ್ ನಿರ್ಮಾಣ ಆಗಿದೆ. ಫುಲ್ 350 ಸಿಸಿ ಬುಲೆಟ್ ಗಾಡಿ ಪೂಜಿಸಿಕೊಂಡು ನಿಂತಿದೆ. ಪ್ರಾರಂಭದಲ್ಲಿ ಇದು ಶ್ರದ್ಧಾ ಭಕ್ತಿಯ ಕೇಂದ್ರವಾಗಿತ್ತು. ಜ್ಞಾನಿಗಳಿಗೆ ಮೌಢ್ಯದ ಕೇಂದ್ರ ಎನಿಸಿತ್ತು ಅಷ್ಟೇ. ಆದರೆ ಬರ ಬರುತ್ತಾ ಭಕ್ತಿಯ ನೆಪದಲ್ಲಿ ಬೀರ್ ಮಾರಾಟದ ದಂಧೆ ನಡೆಯುತ್ತಿದೆ. ಅದಾದ ಮೇಲೆ ಇದಲ್ವಾ ಎನ್ನುವಂತೆ ಬೀರ್, ವೈನ್, ರಮ್, ಜಿನ್ ಎಲ್ಲಾ ತೀರ್ಥಗಳ ಭರ್ಜರಿ ವ್ಯವಹಾರ ಇಲ್ಲಿ ನಡೆಯುತ್ತಿದೆ.

 

ಮೋದಿಯ ದೇವಸ್ಥಾನ, ಗುಜರಾಜ್ 

ಗುಜರಾಜ್ ರಾಜ್ಯದ ಅಹಮದಾಬಾದ್‍ನಿಂದ ಸುಮಾರು 130 ಮೈಲು ದೂರದಲ್ಲಿ ಮೋದಿ ದೇವಾಲಯ ಇದೆ. 350 ಜನರ ಗುಂಪೊಂದು ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ದೇಣಿಗೆ ಸಂಗ್ರಹಿಸಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಮೋದಿಯ ವಿಗ್ರಹಕ್ಕೆ 2 ಲಕ್ಷ ಖರ್ಚು ಆಗಿದೆ ಎಂದು ತಿಳಿದು ಬಂದಿದೆ.

 

 

 

ಸೋನಿಯಾ ಗಾಂಧಿ ಮಂದಿರ, ತೆಲಂಗಾಣ 

ತೆಲಂಗಾಣ ರಾಜ್ಯವನ್ನು ರಚನೆ ಮಾಡಿದ್ದಕ್ಕೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕಾಂಗ್ರೆಸ್ ಮುಖಂಡರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ದೇವಾಲಯವನ್ನು ನಿರ್ಮಿಸಿದರು. ದೇವಾಲಯದೊಳಗೆ ಸೋನಿಯಾ ಗಾಂಧಿಯ ಬಿಳಿ ಮಾರ್ಬಲ್ ಪ್ರತಿಮೆ ಇದೆ ಎಂದು ತಿಳಿದು ಬಂದಿದೆ.

 

ಅಮಿತಾಭ್ ಬಚ್ಚನ್ ದೇವಾಲಯ, ಬಲಿಗುಂಜ್, ಕೊಲ್ಕತ್ತಾ

ಸಂಜಯ್ ಪಾಟೋಡಿಯಾ ಎಂಬ ಅಮಿತಾಬ್ ಬಚ್ಚನ್ ಅವರ ಅಭಿಮಾನಿ, ತನ್ನನು ತಾನು ಅಭಿಮಾನಿಯಲ್ಲ ಭಕ್ತನೆಂದು ಪರಿಗಣಿಸಿ ಅಮಿತಾಭ್ ಬಚ್ಚನ್ ದೇವಾಲಯ ನಿರ್ಮಾಣ ಮಾಡಿದ್ದಾನೆ.

 

ಸಚಿನ್ ದೇವಾಲಯ, ಬಿಹಾರ್

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದೇವಾಲಯವನ್ನು ಬಿಹಾರದ ನಲ್ಲಿ ಕಟ್ಟಿದ್ದಾರೆ. ಸಚಿನ್ ಪ್ರತಿಮೆಯನ್ನು ದೇವರಾಗಿ ಪೂಜಿಸಲಾಗುತ್ತದೆ ಎಂದು ತಿಳಿದು ಬಂದಿದೆ.

 

ಭಾರತ ಮಾತಾ ದೇವಾಲಯ, ವಾರಣಾಸಿ
ದೇಶದ ವಿಭಜನೆಗೆ ಮೊದಲು 1936 ರಲ್ಲಿ ನಿರ್ಮಿಸಲಾದ ದೇವಸ್ಥಾನವನ್ನು ಅಕ್ಷರಶಃ ಭಾರತಕ್ಕೆ ಸಮರ್ಪಿಸಲಾಗಿದೆ ಹಾಗು ಸಾಂಪ್ರದಾಯಿಕ ದೇವತೆ ಪ್ರತಿಮೆಗಳ ಬದಲಿಗೆ ಮಾರ್ಬಲ್ನಲ್ಲಿ ಕೆತ್ತಲಾದ ಅವಿಭಜಿತ ಭಾರತದ ದೊಡ್ಡ ನಕ್ಷೆ ಹೊಂದಿದೆ.

 

 

 

ಪೊರುವಾಝಿ ಪೆರುವಿರುತಿ ಮಲನಾಡ, ಕೊಲ್ಲಂ ಜಿಲ್ಲೆ, ಕೇರಳ

ಕೇರಳದ ಕೊಲ್ಲಂ ಜಿಲ್ಲೆಯ ಮಲನಾಡ ಎಂಬಲ್ಲಿ ಧುರ್ಯೋಧನ ದೇವಾಲಯ ಇದೆ. ಇದು ದೇಶದ ಏಕೈಕ ಧುರ್ಯೋಧನ ದೇವಾಲಯವಾಗಿದೆ.

 

ನಾಯಿಯ ದೇವಾಲಯ, ಚನ್ನಪಟ್ಟಣ, ಕರ್ನಾಟಕ

ಚನ್ನಪಟ್ನದ ರಾಮನಗರ ಜಿಲ್ಲೆಯಲ್ಲಿ ನಾಯಿಯ ದೇವಾಲಯವನ್ನು ಕಟ್ಟಿದ್ದಾರೆ, ನಾಯಿಯು ವಿಶ್ವಾಸಕ್ಕೆ ಹೆಸರುವಾಸಿ ಆದ್ದರಿಂದ ಅಲ್ಲಿನ ಜನರು ನಾಯಿಯ ದೇವಾಲಯವನ್ನು ಕಟ್ಟಿದ್ದಾರೆ.

 

 

 

 

 

 

 

 

ಗಾಟಾ ಲೂಪ್ಸ್ ಬಾಟಲ್ ಟೆಂಪಲ್, ಮನಾಲಿ-ಲೇಹ್ ಹೆದ್ದಾರಿ

ಇದು ಗಾಟಾ ಲೂಪ್ಸ್ ನಲ್ಲಿರುವ ಭೂತಕ್ಕೆ ಮೀಸಲಾದ ದೇವಾಲಯವಾಗಿದ್ದು, ಅಲ್ಲಿ ಮನಾಲಿ-ಲೇಹ್ ಹೆದ್ದಾರಿಯ ಸವಾರರು ಸುರಕ್ಷಿತ ಪ್ರಯಾಣಕ್ಕಾಗಿ ನೀರಿನ ಬಾಟಲಿಗಳನ್ನು ಸಮರ್ಪಿಸಿ ಮುಂದೆ ಪ್ರಯಾಣಿಸುತ್ತಾರೆ.

 

ಬಾಬಾ ಹರಭಜನ್ ಸಿಂಗ್ ಮಂದಿರ, ನಾಥುಲಾ ಪಾಸ್, ಸಿಕ್ಕಿಂ

ಇದು ಕ್ಯಾಪ್ಟನ್ “ಬಾಬಾ” ಹರ್ಭಜನ್ ಸಿಂಗ್ ಅವರ ಗೌರವಾರ್ಥವಾಗಿ ಭಾರತೀಯ ಸೈನಿಕರಿಂದ ನಿರ್ಮಿಸಲ್ಪಟ್ಟ ಒಂದು ದೇವಸ್ಥಾನ ಆಗಿದೆ, ಅವರು 22 ನೇ ವಯಸ್ಸಿನಲ್ಲಿಯೇ ಮರಣ ಹೊಂದಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top