ಸಮಾಚಾರ

ವೈರಲ್ ಚಾಚಾನ ಟ್ಯಾಲೆಂಟ್’ಗೆ ಫಿದಾ ಆದ ವೀರೂ- ನೋಡುದ್ರೆ ನಗು ಬರದೇ ಇರೋದಿಲ್ಲ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮೈದಾನದಲ್ಲಿ ಇದ್ದಾಗ ತಮ್ಮ ಸ್ಪೋಟಕ ಬ್ಯಾಟಿಂಗ್ ನಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇವರು ನಿವೃತ್ತಿ ಆದ ಬಳಿಕ ಕಾಮೆಂಟರಿ ಮಾಡುತ್ತಿದ್ದು ಅಲ್ಲಿ ಹಾಸ್ಯ ಚಟಾಕಿ ಹಾರಿಸುತ್ತ ಸುದ್ದಿಯಲ್ಲಿರುತ್ತಾರೆ. ಇನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಯಾವುದಾದರು ಸಂದರ್ಭವನ್ನು ಸದುಪಯೋಗ ಮಾಡಿಕೊಂಡು ಹಾಸ್ಯಚಟಾಕಿ ಹಾರಿಸುತ್ತಲೇ ಇರುತ್ತಾರೆ.

ಇತ್ತೀಚಿಗೆ ಧೋನಿ ಹುಟ್ಟುಹಬ್ಬದ ನಿಮಿತ್ಯ ಸ್ವಾರಸ್ಯಕರವಾಗಿ ವಿಶ್ ಮಾಡಿ ಸುದ್ದಿಯಲ್ಲಿದ್ದರು ವೀರೂ. ಸದ್ಯ ವಿಶ್ವಕಪ್ ಫುಟ್ ಬಾಲ್ ಪಂದ್ಯ ನಡೆಯುತ್ತಿದ್ದು. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಸೆಹ್ವಾಗ್ ಹಿರಿಯ ವ್ಯಕ್ತಿಯೊಬ್ಬರು ಚಿಕ್ಕ ಕಿಟಕಿಯ ಮೂಲಕ ಮನೆಯೊಳಕ್ಕೆ ಫುಟ್ಬಾಲ್ ಒದೆಯುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಬೆರಗು ಮೂಡಿಸಿದೆ. ಫ್ರಾನ್ಸ್, ಇಂಗ್ಲೆಂಡ್, ಕ್ರೊವೇಷಿಯಾ ತಂಡಗಳನ್ನು ಮರೆತು ಬಿಟ್ಟುಹಾಕಿ ಈತನನ್ನು ನೋಡಿ ಎಂದು ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

 

ವೀರೇಂದ್ರ ಸೆಹ್ವಾಗ್ ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಸಮಯದಲ್ಲಿ ಲಕ್ಷಾಂತರ ಜನ ವಿವ್ಸ್ ಮಾಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು ಆ ಹಿರಿಯ ಫುಟ್ ಬಾಲ್ ಆಟಗಾರನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಸೆಹ್ವಾಗ್ ಅವರು ಸುನೀಲ್ ಗವಾಸ್ಕರ್ ಅವರಿಗೆ ವಿನೂತನವಾಗಿ ಹುಟ್ಟುಹಬ್ಬದ ನಿಮಿತ್ಯವಾಗಿ ಶುಭಾಶಯ ಕೋರಿದ್ದರು. ಇನ್ನು ವೀರೂ ಕೆಲವೊಮ್ಮೆ ಟ್ವಿಟ್ಟರ್ ನಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಮಾತಿನ ಚಕಮಕಿ ಕೂಡ ಮಾಡುತ್ತಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top