ಮನೋರಂಜನೆ

ರುಸ್ತುಮ್ ಶಿವಣ್ಣನ ಜೊತೆ ಸ್ಯಾಂಡಲ್ವುಡ್ ಪ್ರವೇಶಿಸಿದ ಬಾಲಿವುಡ್ ಸ್ಟಾರ್.

ಬಹುಷಃ ಶಿವಣ್ಣನಷ್ಟು ಬ್ಯುಸಿ ಇರೋ ನಟ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಯಾವ ಚಿತ್ರರಂಗದಲ್ಲಿ ಕಾಣಸಿಗದಿಲ್ಲವೇನೋ ಗೊತ್ತಿಲ್ಲ? ವರ್ಷವೊಂದಕ್ಕೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸುವ, ಒಂದು ಚಿತ್ರ ಮುಕ್ತಾಯವಾಗೋ ಮುನ್ನವೇ ಮತ್ತೊಂದು ಚಿತ್ರಕ್ಕೆ ಅಣಿಗೊಳ್ಳುವ ಅವರ ಕೈಲಿರೋ ಹೊಸಾ ಚಿತ್ರಗಳ ಪಟ್ಟಿ ನೋಡಿದರೇನೇ ಎಂಥವರೂ ಕಂಗಾಲಾಗುವಂತಿದೆ.. ಇಂಥಾ ಶಿವಣ್ಣ ಸದ್ಯ ಸಾಹಸ ನಿರ್ದೇಶಕ ರವಿವರ್ಮ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ರುಸ್ತುಮ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಹಂತದ ಶೂಟಿಂಗ್ ಮುಗಿಸಿ ಎರಡನೇ ಹಂತವನ್ನು ಆರಂಭಿಸಿರುವ ಚಿತ್ರತಂಡ ಬಿರುಸಿನಿಂದ ನಡೆಸುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿರುವ ವೇಟ್ ಫೀಲ್ಡ್ ಬಳಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಅತ್ಯಂತ ಅದ್ದೂರಿಯಾಗಿ ಚಿತ್ರವನ್ನು ಮೂಡಿಬರಿಸಲಾಗುತ್ತಿದೆ.

 

 

ಇದೀಗ ಚಿತ್ರಕ್ಕೆ ಕುರಿತಾದ ಬ್ರೇಕಿಂಗ್ ಸುದ್ದಿಯೊಂದು ಹರಿದುಬಂದಿದ್ದು ಚಿತ್ರದಲ್ಲಿ ಶಿವಣ್ಣನ ಜೊತೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಬಹುಭಾಷಾ ಸ್ಟಾರ್ ನಟ ಎನಿಸಿಕೊಂಡಿರುವ ವಿವೇಕ್ ಒಬೆರಾಯ್ ಆಗಮಿಸುತ್ತಿದ್ದಾರೆ.. ಬಾಲಿವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿಸುವ ಮೂಲಕ ಮಿಂಚು ಹರಿಸಿರುವ ವಿವೇಕ್ ಇದೀಗ ಶಿವಣ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ.. ಇನ್ನೇನು ಕೆಲವೇ ದಿನಗಳಲ್ಲೇ ವಿವೇಕ್ ರುಸ್ತುಮ್ ಟೀಮನ್ನು ಸೇರಿಕೊಳ್ಳಲಿದ್ದಾರೆ.

ಅಂದಹಾಗೆ ರುಸ್ತುಮ್ ಚಿತ್ರದಲ್ಲಿ ಶಿವಣ್ಣ ಮತ್ತೊಮ್ಮೆ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಶಿವನನಿಗೆ ಶ್ರದ್ದಾ ಶ್ರೀನಾಥ್ ಮತ್ತು ಮಯೂರಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಜಯಣ್ಣ ಫಿಲಂಸ್ ಬ್ಯಾನರಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಮತ್ತು ಮಹೇಶ್ ಸಿಂಹ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top