ಸಿನಿಮಾ

ಯಾರೇ ನೀನು ಚೆಲುವೆ ಚಿತ್ರದ ನಟಿ ಸಂಗೀತಾ ಈಗ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಗೊತ್ತಾ.

ಯಾರೇ ನೀನು ಚೆಲುವೆ ಚಿತ್ರವು 1998ರಲ್ಲಿ ಸ್ಯಾಂಡಲ್ ವುಡ್ ಬಿಡುಗಡೆಯಾದ ಚಿತ್ರ. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗು ನಟಿ ಸಂಗೀತ ನಟಿಸಿದ್ದರು. ಈ ಚಿತ್ರವನ್ನು ಡಿ.ರಾಜೇಂದ್ರಬಾಬುರವರು ನಿರ್ದೇಶಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು.

ಆಗಷ್ಟೇ ‘ಯಾರೇ ನೀನು ಚೆಲುವೆ’ ಚಿತ್ರವು ರಿಲೀಸ್ ಆಗಿತ್ತು . ಆರಂಭದಲ್ಲಿ ಸಿನೆಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೇನೂ ಸಿಕ್ಕಿರಲಿಲ್ಲ. ಯಾವಾಗ ಚಿತ್ರದ ಹಾಡುಗಳು ಟಿವಿ, ರೇಡಿಯೋದಲ್ಲಿ ಪ್ರಸಾರ ಆದವೋ, ಮ್ಯಾಜಿಕ್ ನಡೆದುಹೋಯ್ತು. ಪರಿಣಾಮ, ‘ಯಾರೇ ನೀನು ಚೆಲುವೆ’ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಲ್ಲಿ ನಟಿಸಿದ ಸಂಗೀತ ಕೂಡ ಫೇಮಸ್ ಆದರು. ಹಾಗದರೆ ಈ ನಟಿ ಈಗ ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ.

 

 

ದಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಅಭಿನಯ ಮಾಡಿ ಮಿಂಚಿದ್ದ ಈ ನಟಿ 2000 ರಲ್ಲಿ ಸರವನ್ ಎಂಬುವವರನ್ನು ಮದುವೆ ಆದರು, ಬಳಿಕ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದು ತಿಳಿಸಿದರು. ಇವರು ಸಿನಿಮಾದಲ್ಲಿ ಸೌಮ್ಯ ಸ್ವಭಾವದ ಪಾತ್ರಗಳಲ್ಲೇ ಅಭಿನಯ ಮಾಡಿ ಹೆಸರುವಾಸಿಯಾದವರು. ನಿಜಜೀವನದಲ್ಲೂ ಕೂಡ ಇವರದು ಸೌಮ್ಯ ಸ್ವಭಾವ. ಸಂಗೀತ ಹೆಚ್ಚಾಗಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಹಾಗಾದರೆ ಮದುವೆಯ ಬಳಿಕ ಇವರು ಏನು ಮಾಡುತ್ತಿದ್ದಾರೆ ನೋಡೋಣ ಬನ್ನಿ.

ಮದುವೆಯಾದ ಬಳಿಕ ನಟನೆಯಿಂದ ದೂರ ಉಳಿದಿದ್ದರು ಕೂಡ ಚಿತ್ರರಂಗದಿಂದ ದೂರ ಉಳಿದಿಲ್ಲ. ಹೌದು ಇವರ ಗಂಡ ಕ್ಯಾಮರಾಮನ್ ಆಗಿದ್ದಾರೆ. ಆದ್ದರಿಂದ ಸಂಗೀತ ಪತಿ ಅವರಿಗೆ ಅಸಿಸ್ಟಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top