ಮನೋರಂಜನೆ

ಕೋಟ್ಯಾಧಿಪತಿಯಲ್ಲಿ ಯಶ್ ಗೆದ್ದ ಒಟ್ಟು ಹಣವೆಷ್ಟು ಗೊತ್ತಾ?

ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿವರುತ್ತಿರುವ ಕೋಟಿಗೆಲ್ಲುವ ಆಟದ ಓಟ ಅಡೆತಡೆಗಲ್ಲಿದೆ ಮುಂದುವರೆದಿದೆ ..ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಈ ವಾರದ ಅಥಿತಿಯಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಹೋಗಿರುವ ವಿಚಾರ ಅದಾಗಲೇ ಜಾಹೀರಾಗಿದೆ.. ಹಾಟ್ ಮೇಲೆ ಕೂತಿರುವ ಯಶ್ ಅವರ ಸಂಚಿಕೆಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾದು ಕುಳಿತಿದ್ದಾರೆ… ಹೀಗಿರುವಾಗ ರೂ. 25 ಲಕ್ಷ ಬಹುಮಾನ ಗೆದ್ದಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.

 

 

ಬಹುತೇಕರಿಗೆ ತಿಳಿದಿರುವ ಹಾಗೆ ಯಶ್ ಅವರು ‘ಯಶೋಮಾರ್ಗ’ ಎಂಬ ಹೆಸರಿನಲ್ಲಿ ಒಂದು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು ಆ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿರುತ್ತಾರೆ.. ಆ ಟ್ರಸ್ಟ್ ಮೂಲಕವೇ ಈಗಾಗಲೇ ಒಂದಷ್ಟು ಉತ್ತಮ ಕೆಲಸಗಳಿಗೆ ಕೈಹಾಕಿ ಮೆಚ್ಚುಗೆ ಗಳಿಸಿಕೊಂಡಿರುವ ಯಶ್ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ತಾನು ಗೆದ್ದ 25ಲಕ್ಷ ರೂ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುವ ಸಲುವಾಗಿ ತಮ್ಮ ಯಶೋಮಾರ್ಗ ಟ್ರಸ್ಟ್’ಗೆ ನೀಡಲಿದ್ದಾರಂತೆ..

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಬರುವ ಪ್ರತಿ ಸೆಲೆಬ್ರೆಟಿಗಳು ತಾವು ಗೆದ್ದ ಜನವನ್ನು ಉತ್ತಮ ಕೆಲ್ಸಕ್ಕೆ, ದೇಣಿಗೆಗೆ ಬಳಸಿರುವುದು ವಿಶೇಷ.. ಈಗ ಯಶ್ ಕೂಡ ಅದನ್ನೇ ಮಾಡಿದ್ದಾರೆ .. ಸದ್ಯ ಯಶ್ ಅತಿಥಿಯಾಗಿರುವ ಸಂಚಿಕೆ ಇದೇ ಶುಕ್ರವಾರ ಸಂಜೆ ಪ್ರಸಾರವಾಗಲಿದ್ದು ಅದಾಗಲೇ ಈ ಸಂಚಿಕೆಯ ಪ್ರೋಮೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top