ಸಮಾಚಾರ

ಒಂದು ಕಾಲದ ಸ್ಟಾರ್ ನಟಿಯಾಗಿದ್ದ ಆರತಿ ಈಗ ಎಲ್ಲಿದ್ದಾರೆ , ಏನು ಮಾಡುತ್ತಿದ್ದಾರೆ ಗೊತ್ತ?

ಕನ್ನಡ ಚಿತ್ರರಂಗದ ಕಂಡ ಖ್ಯಾತ ನಟಿಯರಲ್ಲಿ ಆರತಿ ಕೂಡ ಒಬ್ಬರು. 1954 ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು “ಗೆಜ್ಜೆ ಪೂಜೆ” ಸಿನಿಮಾದಲ್ಲಿ ನಾಯಕ ಗಂಗಾಧರರವರ ತಂಗಿ ಪಾತ್ರವನ್ನು ಮಾಡುವ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದರು. ಮುಂದಿನ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನೆಮಾಗಳಲ್ಲಿ ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ಚಿತ್ರಗಳಲ್ಲಿ ಅಮೋಘ ಅಭಿನಯದ ಮೂಲಕ 1970 ಮತ್ತು 1980ರ ದಶಕದಲ್ಲಿ ಪ್ರೇಕ್ಷಕರ ಮನ ಗೆದ್ದರು. ಇವರಿಗೆ 4 ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ದೊರೆತಿದ್ದು ಹಲವಾರು ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿದ್ದಾರೆ.

ಆರತಿ ಅವರು ಇಲ್ಲಿಯವರೆಗೂ ಸುಮಾರು 130 ಸಿನೆಮಾಗಳಲ್ಲಿ ಅಭಿನಯ ಮಾಡಿದ್ದು, ಈಗ ಅವರು ಏನು ಮಾಡುತ್ತಿದ್ದಾರೆ ಎನ್ನುವುದೇ ಎಲ್ಲರ ಪ್ರಶ್ನೆ ಆಗಿದೆ. ಬನ್ನಿ ಹಾಗಾದರೆ ಇವರು ಏನು ಮಾಡುತ್ತಿದ್ದಾರೆ ಎಂದು ನೋಡೋಣ.

 

 

ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜೊತೆಗೆ ಇವರ ಬ್ರೇಕ್ ಆದಮೇಲೆ ಚಂದ್ರಶೇಖರ್ ಅವರ ಜೊತೆಗೆ ಮದುವೆ ಆದರು. ಮದುವೆಯ ನಂತರ ಗಂಡನ ಜೊತೆ ಅಮೇರಿಕಾದಲ್ಲಿ ನೆಲೆಸಿದರು. ಇವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಅಮೇರಿಕಾದಿಂದ 2005 ರಲ್ಲಿ ಭಾರತಕ್ಕೆ ಬಂದಿದ್ದ ಆರತಿ ಅವರು ಒಂದು ಸಿನಿಮಾ ನಿರ್ದೇಶನ ಮಾಡಿ ಮತ್ತೆ ಅಮೆರಿಕಕ್ಕೆ ಹೋದರು ಎಂದು ತಿಳಿದು ಬಂದಿದೆ. ಬೆಂಗಳೂರಿನ ಜೆ ಪಿ ನಗರದಲ್ಲಿ 18 ಕೋಟಿ ಬೆಲೆ ಬಾಳುವ ಮನೆಯನ್ನು ಇವರು ಹೊಂದಿದ್ದರು. ಅದನ್ನು ಕೂಡ 2013 ರಲ್ಲಿ ಮಾರಿದ್ದಾರೆ ಎಂದು ತಿಳಿದು ಬಂದಿದೆ. ಆರತಿ ಅವರು ಬ್ಯುಸಿನೆಸ್ ಹಾಗು ಶೇರ್ ಮಾರುಕಟ್ಟೆಯಲ್ಲಿ ಕೂಡ ಹಣವನ್ನು ಹೂಡಿದ್ದಾರೆ ಎನ್ನಲಾಗಿದೆ. ಗಂಡ ಹಾಗು ಮಕ್ಕಳ ಜೊತೆ ಆನಂದಮಯವಾಗಿ ಜೀವನ ನಡೆಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top