ಸಮಾಚಾರ

ರಾಜ್ಯದಲ್ಲಿರುವದು ದರಿದ್ರರ ಸರ್ಕಾರ- ಕಾಂಗ್ರೆಸ್- ಜೆಡಿಎಸ್ ವಿರುದ್ಧ ಅನಂತಕುಮಾರ್ ಹೆಗಡೆ ವಾಗ್ದಾಳಿ.

ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಸುದ್ದಿಗೆ ಗ್ರಾಸವಾಗುವವರು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ. ಯಾವುದೇ ವಿಚಾರವಾಗಲೇ ನಿರ್ಭಿಡತೆಯಿಂದ ನೇರಾನೇರಾವಾಗಿ ಹೇಳಿಕೆ ಕೊಡುತ್ತಾ ಒಂದು ಪಂಥದವರ ತೀವ್ರ ವಿರೋಧವನ್ನೂ ಕಟ್ಟಿಕೊಂಡಿರುವ ಅನಂತಕುಮಾರ್ ಹೆಗ್ಡೆಯವರು ಆ ಮೂಲಕವೇ ಸುದ್ದಿಯಾಗಿದ್ದು ಹೆಚ್ಚು.. ಇಂಥ ಹೆಗಡೆಯವರು ಇದೀಗ ಮತ್ತೊಂದು ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.

 

 

ಬೆಳಗಾವಿ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಹೆಗಡೆ ಆಡಳಿತಾರೂಢ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ “ಬಿಜೆಪಿ ಪಕ್ಷ ಹುಲಿ ಇದ್ದಂತೆ ಅದಕ್ಕಾಗಿಯೇ ಅದನ್ನು ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಫಲಿತಾಂಶ ಬಂದ ನಂತರ ಅಪವಿತ್ರ ಮೈತ್ರಿ ಮಾಡಿಕೊಂಡಿವೇ. ಆದರೆ ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದ್ದು 2019ರಲ್ಲಿ ಮತ್ತೆ ಅಧಿಕಾರಕ್ಕೆ ಬರಲೇಬೇಕು ಅದಕ್ಕಾಗಿ ಕಾರ್ಯಕರ್ತರು ಈಗಲೇ ಸಜ್ಜಾಗಿ ಮನೆ ಮನೆಗೆ ಹೋಗಿ ಪ್ರಚಾರ ನಡಸಬೇಕು” ಎಂದು ಹೇಳಿದರು. ಮಾತು ಮುಂದುವರೆಸಿದ ಅವರು “ರಾಜ್ಯದಲ್ಲಿರುವುದು ದರಿದ್ರರ ಸರ್ಕಾರ, ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ.. ನೋಡುತ್ತಿರಿ ಶೀಘ್ರದಲ್ಲೇ ಇವರ ಸರ್ಕಾರ ಉರುಳುತ್ತದೆ” ಎಂದು ಹೇಳಿದರು.

ಇತ್ತೀಚಿಗಷ್ಟೇ ಕಾರವಾರದಲ್ಲಿ ಭಾಷಣ ಮಾಡಿದ್ದ ಹೆಗಡೆ ” 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಗಣ್ಣ, ನರಿಯಣ್ಣ, ತೋಳಣ್ಣ, ಕರಡಿ, ಕೋತಿಗಳೆಲ್ಲಾ ಒಟ್ಟಾಗಿ ಒಂದು ಕಡೆ ನಿಂತಿವೆ. ಆದರೆ ಮತ್ತೊಂದು ಕಡೆ ಹುಲಿಯೊಂದು ಒಂಟಿಯಾಗಿ ನಿಂತಿದೆ (ನರೇಂದ್ರ ಮೋದಿ). ಈ ಭಾರಿ ಕತ್ತೆ ಕಿರುಬಗಳು ಗೆಲ್ಲಬೇಕೋ, ಹುಲಿ ಗೆಲ್ಲಬೇಕೋ ನೀವೇ ಯೋಚನೆ ಮಾಡಿ’ ಎಂದು ವಿರೋಧ ಪಕ್ಷಗಳನ್ನು ವ್ಯಂಗ್ಯ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top