fbpx
ಇತರೆ

ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ 6 ಸಹೋದರರು ಇವರೇ ನೋಡಿ

ಜಗ್ಗೇಶ್ ಮತ್ತು ಕೋಮಲ್ :

ಜಗ್ಗೇಶ್ ಅವರನ್ನು ನವರಸ ನಾಯಕ ಎಂದು ಕರೆಯುತ್ತಾರೆ. ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಹಾಸ್ಯ ನಟ ಮತ್ತು ನಾಯಕನಾಗಿ ,ನಿರ್ದೇಶಕನಾಗಿ , ನಿರ್ಮಾಪಕನಾಗಿ ಇನ್ನು ಕೂಡ ಕನ್ನಡ ಚಿತ್ರರಂಗದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ . ಮತ್ತು ಇವರ ಮೆಚ್ಚಿನ ಕಾಮಿಡಿ ಕಿಲಾಡಿಗಳು ಕಾರ್ಯಕರ್ಮಗಳಲ್ಲಿ ತೀರ್ಪುಗಾರನಾಗಿದ್ದಾರೆ .ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತೀರಾ ಕಾಮಿಡಿ ಚಾಂಪಿಯನ್ ಶಿಪ್ ಎಂಬ ಹೊಸ ಕಾರ್ಯಕ್ರಮ ಆರಂಭವಾಗಲಿದ್ದು ಅದರಲ್ಲಿ ನವರಸ ನಾಯಕ ಜಗ್ಗೇಶ್ ಅವರು ತೀರ್ಪುಗಾರಾಗಿದ್ದರೆ .ಜಗ್ಗೇಶ್ ಅವರ ಹೊಸ ಫಿಲಂ ‘ 8MM’ ಎಂಬ ಆಗಸ್ಟ್ ತಿಂಗಳು ಬಿಡುಗಡೆಗೆ ಎಲ್ಲವು ಸಿದ್ದವಾಗಿದ್ದು ಮತ್ತು ಇನ್ನೊಂದು ಹೊಸ ಫಿಲಂ ‘ಪ್ರೀಮಿಯರ್ ಪದ್ಮಿನಿ’ ಎಂಬ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ .ಕೋಮಲ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಮರ್ಯಾದೆ ರಾಮಣ್ಣ ,ಪ್ಯಾರ್ಗೆ ಆಗ್ಬಿಟ್ಟೈತೆ ,CID ಈಶ ಮತ್ತು ಹಲವಾರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮತ್ತು ನಾಯಕನಾಗಿ ಕೂಡ ನಟಿಸಿದ್ದರು . ಕೋಮಲ್ ಅವರು ‘ಕೆಂಪೇಗೌಡ 2’ ಎಂಬ ಚಿತ್ರವು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ .ನಂತರ ಇನ್ನೊಂದು ಹೊಸ ಫಿಲಂ ‘ಮೀರ್ ಸಾಧಕ್’ ಚಿತ್ರೀಕರಣದಲ್ಲಿ ಕೋಮಲ್ ಅವರು ಬ್ಯುಸಿ ಆಗಿದ್ದಾರೆ .

 

 

ವಿಜಯ್ ರಾಘವೇಂದ್ರ ಮತ್ತು ಶ್ರೀ ಮುರಳಿ :

ವಿಜಯ್ ರಾಘವೇಂದ್ರ ಅವರು ತಮ್ಮ ಚಿಕ್ಕವಯಸ್ಸಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟಿದ್ದರು ಮತ್ತು ಚಿನ್ನಾರಿ ಮುತ್ತ ಎಂದು ಹೆಸರಿಂದ ವಿಜಯ್ ಅವರನ್ನು ಜನರು ಗುರುತ್ತಿಸುತ್ತಾರೆ .ನಾಯಕನಾಗಿ ಮತ್ತು ನಿರ್ದೇಶಕನಾಗಿ ಕೆಲಸವನ್ನು ಮಾಡುತ್ತಿದ್ದಾರೆ .ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಕ್ರಾಯಕ್ರಮದಲ್ಲಿ ತೀರ್ಪುಗಾರನಾಗಿದ್ದರೆ .ವಿಜಯ್ ರಾಘವೇಂದ್ರ ಅವರ ‘ರಾಜ ಲವ್ಸ್ ರಾಧೆ’ ಎಂಬ ಫಿಲಂ ಶೂಟಿಂಗ್ನಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ . ಶ್ರೀ ಮುರಳಿ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ .ಶ್ರೀ ಮುರಳಿ ಅವರ ‘ಭರಾಟೆ’ ಎಂಬ ಚಿತ್ರೀಕರಣದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ.

 

 

ಗಣೇಶ್ ಮತ್ತು ಮಹೇಶ್ :

ಕಾಮಿಡಿ ಟೈಮ್ ಗಣೇಶ್ ಹಾಗೂ ಗೋಲ್ಡ್ ಸ್ಟಾರ್ ಗಣೇಶ್ ಎಂದು ಪ್ರಸಿದ್ಧರಾಗಿರುವ ಗಣೇಶ್ ಅವರು ಕನ್ನಡ ಚಿತ್ರ ನಟರು. ‘ಚಮಕ’ ಚಿತ್ರ ಮುಗಿದ ನಂತರ ‘ಆರೆಂಜ್’ ಫಿಲಂ ಚಿತ್ರ ದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ .ಅವರ ತಮ್ಮ ಮಹೇಶ್ ಅವರು ತನ್ನ ಅಣ್ಣನಿಗೆ ಬೆನ್ನೆಲಬಾಗಿ ನಿಂತು ಅಣ್ಣನಿಗೆ ಸಹಾಯ ಮಾಡುತ್ತ ಮತ್ತು ಮಹೇಶ್ ಅವರ ಫ್ಯಾಮಿಲಿಯಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ .

ಸಾಯಿಕುಮಾರ್ ಮತ್ತು ರವಿಶಂಕರ :

ಚಿತ್ರರಂಗದಲ್ಲಿ ಡೈಲಾಗ್ ಕಿಂಗ್ ಎಂತಲೇ ಫೇಮಸ್ ಆಗಿರೋ ಸಾಯಿ ಕುಮಾರ್ ಅವರು ಚಿತ್ರ ರಂಗದಲ್ಲಿ ಹಲವಾರು ರೀತಿಯ ಪಾತ್ರ ವನ್ನು ಮಾಡುತ್ತಿದ್ದು ಹಾಗೂ ರಾಜಕೀಯದಲ್ಲೂ ಅವರ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ . ಸಾಯಿಕುಮಾರ್ ಅವರ ‘ಎವರಿಕಿ ಇವರು’ ಎಂಬ ತೆಲಗು ಫಿಲ್ಮ ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ .ತಮ್ಮ ರವಿಶಂಕರ ಅವರು ‘ಕೆಂಪೇಗೌಡ’ ಫಿಲ್ಮನ್ನಲ್ಲಿ ವಿಲನ್ ಪಾತ್ರವನ್ನು ಆರ್ಮುಗ ಎಂಬ ಹೆಸರಿನಿಂದ ಪ್ರಸಿದ್ದರಾದ ರವಿ ಶಂಕರವರು ‘ಸೀತಾರಾಮ ಕಲ್ಯಾಣ’ ಹೊಸ ಫಿಲಂ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ . ಕೆಲವು ಚಿತ್ರಗಳಲ್ಲಿ ವಿಲನ್ ಮತ್ತು ಹಾಸ್ಯದ ಪಾತ್ರಗಳನ್ನು ಮಾಡುತ್ತಿದ್ದಾರೆ .

ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ :

ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮ ಐ ಲವ್ ಯೂ’ ಸಿನಿಮಾವು ರಾಜ್ಯಾದ್ಯಂತ ಯಶಸ್ವಿಯಾಗುತ್ತಿದೆ .ಚಿರಂಜೀವಿ ಸರ್ಜಾ ಅವರ ನೆಕ್ಸ್ಟ್ ಫಿಲಂ ‘ಚಿರು 2 ‘ ಚಿತ್ರೀಕರಣವನ್ನು ಮಾಡುವಲ್ಲಿ ಬ್ಯುಸಿ ಆಗಿದ್ದಾರೆ . ರಾಜ್ಯಾದ್ಯಂತ ಸಖತ್‌ ಸದ್ದು ಮಾಡಿರುವ’ಅದ್ದೂರಿ’ ಸಿನಿಮಾ ಮೂಲಕ ಧ್ರುವ ಸರ್ಜಾ ಸಕ್ಸಸ್‌ ಆಗಿದ್ದಾರೆ. ಧ್ರುವ ಸರ್ಜಾ ಅವರು’ ಪೊಗರು’ ಫಿಲಂ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

ದರ್ಶನ ತೂಗುದೀಪ ಮತ್ತು ದಿನಕರ್ :

ಚಾಲೆಂಜಿಂಗ್ ಸ್ಟಾರ್ ದರ್ಶನ ಮಾಡಿರುವ ಐರಾವತ ಚಿತ್ರದಿಂದ ಡಿ ಬಾಸ್ ಎಂದು ದರ್ಶನ ಅವರನ್ನು ಕರೆಯುತ್ತಾರೆ ದರ್ಶನ ಅವರು ‘ರಾವಣೇಶ್ವರ’ ಎಂಬ ಚಿತ್ರದಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ .ದರ್ಶನ ಅವರ ತಮ್ಮ ದಿನಕರ್ ಅವರು ಅಣ್ಣ ಜೊತೆ ಅವರು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಮತ್ತು ಕನ್ನಡ ಡೈರೆಕ್ಟರ್ , ರೈಟರ್ , ಆಕ್ಟರ್ ಆಗಿ ಕೂಡ ಅವರ ಕೆಲಸಗಳನ್ನು ಮಾಡುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top