ಸಮಾಚಾರ

ರೈತರ ಕಷ್ಟಕ್ಕೆ ನೆರವಾಗಲು 1 ತಿಂಗಳ ಸಂಬಳ ದೇಣಿಗೆ ನೀಡಿದ ಶಾಸಕ ಬಿ.ಸಿ ಪಾಟೀಲ್

ರಾಜ್ಯವೇ ಮೆಚ್ಚುವಂತ ಕೆಲಸವನ್ನು ಹಿರೆಕೆರೂರು ವಿಧಾಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಒಂದು ತಿಂಗಳ ಸಂಬಳವಾದ 25 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಸಂಬಳ ನೀಡಿದ ಬಗ್ಗೆ ಮಾತನಾಡಿದ ಶಾಸಕರು ಪ್ರತಿಯೊಬ್ಬ ಶಾಸಕ ಮತ್ತು ವಿಧಾನಪರಿಷತ್ ಸದಸ್ಯರು ತಮ್ಮ 1 ತಿಂಗಳ ಸಂಬಳವನ್ನು ಈ ರೈತರ ಸಾಲ ಮನ್ನಾ ಆಗಲು ಬಿಟ್ಟು ಕೊಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಇನ್ನು ಎಲ್ಲ ನೌಕರರಿಗೆ ವಿನಂತಿ ಮಾಡಿರುವ ಶಾಸಕ ಇಂದು ನಾನು ನನ್ನ 1 ತಿಂಗಳ ಸಂಬಳ 25 ಸಾವಿರ ರೂ.ವನ್ನು ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಸಿಎಂ ಪರಿಹಾರ ನಿಧಿಗೆ ಕೊಟ್ಟಲ್ಲಿ ರಾಜ್ಯದ ಅಭಿವೃದ್ಧಿ ಮುಂದೆ ಸಾಗುತ್ತದೆ ಎನ್ನುವ ದೃಷ್ಟಿಯಿಂದ ಸರ್ಕಾರಿ ನೌಕರರು, ಶಾಸಕರು ಕೂಡ ತಮ್ಮ ಸಂಬಳವನ್ನು ಪರಿಹಾರ ನಿಧಿಗೆ ನೀಡಬೇಕು ಎಂದು ಈ ವೇಳೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವು ದಿನಗಳ ಹಿಂದೆ ಬಜೆಟ್ ನಲ್ಲಿ, ಕುಮಾರಸ್ವಾಮಿ ಅವರು ಹೇಳಿದಂತೆ ರೈತರ ಸಾಲಮನ್ನಾ ಮಾಡಿದ್ದಾರೆ. ಸಂಪೂರ್ಣ ಸಾಲಮನ್ನಾಕ್ಕೆ ಬದಲು 2 ಲಕ್ಷ ಸಾಲ ಮಾತ್ರ ಮನ್ನಾ ಆಗಲಿದೆ.ರೈತರ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೂಢೀಕರಣ ಸರ್ಕಾರಕ್ಕೆ ಬಹುದೊಡ್ಡ ತಲೆನೋವಾಗಿತ್ತು. ಆದರೆ ಅಂತೂ ಇಂತೂ ಪೇಚಾಡಿ ಕೊನೆಗೂ ಕುಮಾರಸ್ವಾಮಿ ಅವರು ಸ್ವಲ್ಪವಾದರೂ ಸಾಲಮನ್ನಾ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top