ಹೆಚ್ಚಿನ

ನಿಮ್ಮನ್ನು ನಿಬ್ಬೆರಗಾಗಿಸುವ ವಿಶ್ವದ 7 ಏಳು ಸ್ಥಳಗಳಿಗೆ ಭೇಟಿ ನೀಡಲೇಬೇಕು.

1.  ಚೀನಾದ 500 ಅಡಿ ಎತ್ತರದ ಸೇತುವೆ

ನಿಮ್ಮ ಜೀವನದಲ್ಲಿ ನೀವು ಹೆಚ್ಚು ರೋಚಕತೆ ಮತ್ತು ಸಾಹಸವನ್ನು ಬಯಸಿದ್ದರೆ, ಈ ಆಕಾಶ ಸೇತುವೆಯ(ಸ್ಕೈ ಬ್ರಿಜ್) ಮೇಲೆ ಖಂಡಿತವಾಗಿಯೂ ನಡೆಯಲೇಬೇಕು. ಚೀನಾದ ಚೊಂಗ್ಕಿಂಗ್ನಲ್ಲಿರುವ ಈ ಸೇತುವೆಯ ಮೇಲೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ನಡೆಯುತ್ತಾರೆ. ಪ್ರತಿ ವ್ಯಕ್ತಿ 500 ಅಡಿ ಎತ್ತರದಲ್ಲಿ ನಡೆಯುತ್ತಾನೆ. ಇಲ್ಲಿ ನಡೆಯುವದೂ ಎಷ್ಟು ಥ್ರಿಲ್ಲಿಂಗ್ ಆಗಿರುತ್ತದೆಯೋ ಅಷ್ಟೇ ಭಯಾನಕ ಕೂಡ ಆಗಿರುತ್ತದೆ.

 

 

 

2. ಸಿಎನ್ ಟವರ್, ಕೆನಡಾ

ಕೆನಡಾದ ಒಂಟಾರಿಯೊ ನಗರದಲ್ಲಿ ಇರುವ ಸಿಎನ್ ಟವರ್ ನೋಟವು ಸಂಪೂರ್ಣವಾಗಿ ಉಸಿರುಕಟ್ಟುವಂತಿರುತ್ತದೆ. ಇದು 1976 ರಿಂದ 2007 ರವರೆಗೆ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡವಾಗಿತ್ತು. 553.33 ಮೀಟರ್ ಎತ್ತರವಿದೆ. ಇದು ಒಂಟಾರಿಯೊ ನಗರದ ಸಂಕೇತದಂತಿದೆ.

 

3. ಕ್ಯೂಬ್ ಹೌಸ್, ನೆದರ್ಲ್ಯಾಂಡ್

ಮನೆ ಅಂದ್ರೆ ಏನು ಎಂಬ ನಿಮ್ಮ ಕಲ್ಪನೆಯನ್ನು ಸಂಪೂರ್ಣವಾಗಿ ಬದಲಿಸಲು ನೀವು ಬಯಸುವಿರಾ? ಹಾಗಾದರೆ ನೀವು ಕ್ಯೂಬ್ ಹೌಸ್ ಗೆ ಭೇಟಿ ಮಾಡಲೇಬೇಕು. ಪ್ರಸಿದ್ಧ ವಾಸ್ತುಶಿಲ್ಪಿ ಆಗಿದ್ದ ಪೀಟ್ ಬ್ಲಾಮ್ ಅವರು 1984 ರಲ್ಲಿ ನೆದರ್ಲ್ಯಾಂಡಿನ ರೋಟರ್ಡ್ಯಾಮ್ ನಲ್ಲಿರುವ ಈ ಮನೆಗಳನ್ನು ವಿನ್ಯಾಸಗೊಳಿಸಿದರು. ಅವರು ತಮ್ಮ ವಿಶಿಷ್ಟ ವಿನ್ಯಾಸಕ್ಕೆ ಜಗತ್ತಿನಾದ್ಯಂತ ಅಲ್ಪಾವಧಿಗೆ ಪ್ರಸಿದ್ಧರಾಗಿದ್ದರು.

 

4. ಬನ್ಪೊ ಬ್ರಿಜ್, ರೇನ್ಬೋ ಫೌಂಟೇನ್, ದಕ್ಷಿಣ ಕೊರಿಯಾ

ನೀವು ವಿಶ್ವದ ಅತ್ಯಂತ ಸುಂದರವಾದ ಕಾರಂಜಿಯೊಂದನ್ನು ನೋಡಬೇಕೆಂದು ಇಷ್ಟ ಪಟ್ಟಿದ್ದರೆ, ನೀವು ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಬೇಕು, ಏಕೆಂದರೆ ಅಲ್ಲಿ ನೀವು ವಿಶ್ವದಲ್ಲೇ ಅತಿ ಉದ್ದವಾದ ಸೇತುವೆ-ಕಾರಂಜಿ ಕಾಣುವಿರಿ. 10,000 ಎಲ್.ಈ.ಡಿ ಗಳು ಮತ್ತು 380 ನೀರಿನ ಜೆಟ್ ಗಳಿಂದ ಕುಡಿದ ಕಾರಂಜಿ ನಿಮಗೆ ಆಕರ್ಷಣೆಯಲ್ಲಿ ಅದ್ಬುತ ಅನುಭವ ನೀಡುತ್ತವೆ, ಇದು 190 ಟನ್ಗಳಷ್ಟು ನೀರನ್ನು ಭಾರಿ ಒತ್ತಡದಲ್ಲಿ ಹೊರಸೂಸುತ್ತದೆ. ನೀರನ್ನು ನೇರವಾಗಿ ಹಾನ್ ನದಿಯಿಂದ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.

 

5. ಗ್ಲಾಸ್ ಬ್ರಿಡ್ಜ್, ಚೀನಾ

ವಿಶ್ವದ ಅತಿ ಎತ್ತರದ ಹಾಗು ದೊಡ್ಡ ಗ್ಲಾಸ್ ಬ್ರಿಡ್ಜ್ ಇದಾಗಿದ್ದು ನೋಡೋಕೆ ಎಷ್ಟು ಸುಂದರವೋ ದಾಟೋಕೂ ಅಷ್ಟೇ ಭಯಂಕರವಾಗಿದೆ. ವಿಶೇಷ ಏನಪ್ಪ ಅಂದ್ರೆ ಇದು ದಿನಕ್ಕೆ 8000ದಷ್ಟೂ ಜನ್ರನ್ನ ಮಾತ್ರ ತಡಿಯೋದಂತೆ.

 

 

 

6. ಭಾಸ್ಫೊರಸ್ ಬ್ರಿಡ್ಜ್, ಇಸ್ತಾನ್ಬುಲ್- ಟರ್ಕಿ
ಯೂರೋಪ್ ಮತ್ತು ಏಷ್ಯಾನ ಕನೆಕ್ಟ್ ಮಾಡೋ ಇದು, ಪ್ರಪಂಚದ ಅತಿ ದೊಡ್ಡ ತೂಗು ಸೇತುವೆ ಆಗಿದೆ. ಇನ್ನು ದಿನಾ ಈ ಸೇತುವೇನಾ ಸಾವಿರಾರು ಜನ ವೀಕ್ಷಣೆಗೆ ಬರುತ್ತಾರೆ ಎಂದು ತಿಳಿದು ಬಂದಿದೆ.

 

7. ಮ್ಯಾಕಿನಾಕ್ ಬ್ರಿಡ್ಜ್, ಮಿಷಿಗನ್
ಪ್ರಪಂಚದ ಎಷ್ಟನೇ ಅದ್ಭುತಾನೋ ಅಂತ ಅನ್ನಿಸೋ ಈ ಸೇತುವೆ 5 ಮೈಲಿ ಉದ್ದ ಇದೆಯಂತೆ. ನೀರಿನ ಮಟ್ಟದಿಂದ 199 ಅಡಿ ಎತ್ತರ ಇರೋ ಈ ಸೇತುವೆ ಹೊಸತರಲ್ಲಿ ಎಲ್ಲರಿಗೂ ಭಯ ಹುಟ್ಟಿಸಿತ್ತಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top