ಮನೋರಂಜನೆ

ಕೆಲಸದ ಬಿರುಸಿನಲ್ಲಿ ಕಣ್ಣಿಗೆ ಕುತ್ತು ತಂದುಕೊಂಡ ಪವನ್ ಕಲ್ಯಾಣ್.

ತೆಲುಗು ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಪವನ್ ಕಲ್ಯಾಣ್. ಕಳೆದೆರಡು ದಶಕಗಳಿಂದಲೂ ನಂಬರ್ ಒನ್ ನಟನಾಗಿ ಅಸಂಖ್ಯ ಅಭಿಮಾನಿಗಳ ಪಾಲಿನ ಪಾಲಿನ ಪವರ್ ಸ್ಟಾರ್ ಆಗಿ ಮೆರೆಯುತ್ತಿರುವ ಪವನ್ ರಾಜಕೀಯಕ್ಕೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಜನಸೇನಾ ಎಂಬ ಪಕ್ಷವನ್ನು ಸ್ಥಾಪಿಸಿ ರಾಜ್ಯಾದ್ಯಂತ ಅನೇಕ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿರುವ ಪವನ್ ಕಲ್ಯಾಣ್ ಇದೀಗ ತಮ್ಮ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.

 

 

ಕೆಲ ದಿನಗಳ ಹಿಂದೆ ಪವನ್ ​ಎಡಗಣ್ಣಿನ ಮೇಲೆ ಸಣ್ಣ ಗುಳ್ಳೆಯೊಂದು ಕಾಣಿಸಿಕೊಂಡಿತ್ತು. ಆದರೆ ಅದನ್ನು ನಿರ್ಲಕ್ಷಿದ ಪವನ್ ತಮ್ಮ ಪಕ್ಷದ ಹೊರಟಗಳಲ್ಲಿ ಬಿರುಸಿನಿಂದ ಪಾಲ್ಗೊಂಡಿದ್ದರು. ಕಣ್ಣಿಗೆ ಸೂರ್ಯನ ಕಿರಣ ಬೀಳದಂತೆ ಅವರು ಕನ್ನಡಕ ಬಳಸುತ್ತಿದ್ದರು.. ಆದರೆ ದಿನಕಳೆಯುತ್ತಿದ್ದಂತೆ ಆ ಗುಳ್ಳೆ ಮಾರಕವಾಗಿ ಪರಿಣಮಿಸಿದ್ದು ವಿಪರೀತ ನೋವುಂಟು ಮಾಡಿದೆ..

ಇನ್ನು ಇದನ್ನು ನಿರ್ಲಕ್ಷಿಸಿದರೆ ಕಣ್ಣಿಗೆ ಅಪಾಯವಾಗುತ್ತದೆ ಎಂದು ಎಚ್ಚೆತ್ತುಕೊಂಡ ಪವನ್ ನೆನ್ನೆ(ಗುರುವಾರ) ಹೈದರಾಬಾದ್​ನ ಎಲ್​.ವಿ. ಪ್ರಸಾದ್​ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎರಡು ದಿನಗಳ ಕಾಲ ಅವರಿಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದು ಅಭಿಮಾನಿಗಳು ಗಾಬರಿಯಾಗುವಂತಹ ಸಮಸ್ಯೆಯೇನು ಆಗಿಲ್ಲ ಎಂದು ಖಚಿತಪಡಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top