ಸಿನಿಮಾ

ಶಿವಣ್ಣನ ಬರ್ತಡೆಗೆ ಅಭಿಮಾನಿಯೊಬ್ಬ ಕೊಟ್ಟ ಗಿಫ್ಟ್ ಏನು ಗೊತ್ತಾ?

ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ನಿನ್ನೆ 57ನೇ ವಸಂತಕ್ಕೆ ಕಾಲಿಟ್ಟರು. ಅಣ್ಣಾವ್ರ ಮಗ ಶಿವಣ್ಣ ನಿನ್ನೆ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಶಿವಣ್ಣ ಬರ್ತ್‍ಡೇಯಂದು ಅಭಿಮಾನಿಗಳು ತಡರಾತ್ರಿಯಿಂದಲೇ ಅದ್ದೂರಿಯಾಗಿ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ. 56ನೇ ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳು 56 ಕೆಜಿ ತೂಕದ ಕೇಕ್ ತಯಾರಿಸಿದ್ದು ವಿಶೇಷವಾಗಿತ್ತು.

 

ಇನ್ನು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ದಿ ವಿಲನ್ ಸಿನಿಮಾ ಫ್ಯಾನ್ ಮೇಡ್ ಪ್ರಮೋಷನಲ್ ಸಾಂಗ್ ಬಿಡುಗಡೆ ಆಗಿದೆ. ‘ಗುಮ್ತಲಕಡಿ ಗುಲಾ ಗುಲಾ’ ಎನ್ನುವ ಈ ಲಿರಿಕಲ್​ ವಿಡಿಯೋ ಸಾಂಗ್​ನಲ್ಲಿ ಶಿವಣ್ಣ ,ಸುದೀಪ್ ಹಾಗೂ ನಿರ್ದೇಶಕ ಪ್ರೇಮ್​ ಅವರ ಗುಣಗಾನ ಮಾಡಿದ್ದಾರೆ.

 

‘ದಿ ವಿಲನ್’ ಫ್ಯಾನ್ ಮೇಡ್ ಸಾಂಗ್ ನೋಡಿ:

 

ಇನ್ನು ಕೆಲವು ದಿನಗಳ ಹಿಂದೆ ‘ದಿ ವಿಲನ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಅನೆಬಂತೊಂದಾನೆ ಅನ್ನುವ ಧ್ವನಿಯಲ್ಲಿ ಕಿಚ್ಚ ಡೈಲಾಗ್ ಅಬ್ಬರಿಸಿ ಬೊಬ್ಬಿರೆದ್ರೆ, ಶಿವರಾಜ್‍ಕುಮಾರ್ ನಾನ್ ಸೈಲೆಂಟಾಗಿದ್ರೆ ರಾಮಾ, ವೈಲೆಂಟಾದ್ರೆ ರಾವಣ ಎಂಬುದಾಗಿ ಡೈಲಾಗ್ ಹೊಡೆದಿದ್ದಾರೆ. ಇಬ್ಬರ ಪಾತ್ರದಲ್ಲೂ ಸಖತ್ ಕ್ಯೂರಿಯಾಸಿಟಿ ಸೃಷ್ಟಿ ಮಾಡಿದ್ದಾರೆ ನಿರ್ದೇಶಕ ಪ್ರೇಮ್. ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನವಿದ್ದು, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಏಮಿಜಾಕ್ಸನ್, ಮಿಥುನ್ ಚಕ್ರವರ್ತಿ ಸೇರಿದಂತೆ ಅತೀ ದೊಡ್ಡತಾರಾಗಣ ಈ ಸಿನಿಮಾದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top