ಸಮಾಚಾರ

ಉಪಮುಖ್ಯಮಂತ್ರಿ ಪರಮೇಶ್ವರ್ ವಿರುದ್ಧ ಗರಂ ಆದ ಹುಚ್ಚ ವೆಂಕಟ್.

ಇತ್ತೀಚಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋತು ಸುಣ್ಣವಾಗಿ, ಕೆಲ ದಿನಗಳಿಂದ ಯಾವ ರಗಳೆ ರಾಮಾಯಣಗಳೂ ಇಲ್ಲದೆ ತನ್ನ ಪಾಡಿಗೆ ತಾನಿದ್ದಂತಿದ್ದ ಸ್ವಯಂ ಘೋಷಿತ ವಿಶ್ವ ವಿಖ್ಯಾತ ನಟ ಹುಚ್ಚಾ ವೆಂಕಟ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಹಾಗಂತ ಈ ಬಾರಿ ಆತ ಯಾವುದೋ ರಂಖಲು ಮಾಡಿಕೊಂಡು ಗೊಣ್ಣೆ ಸುರಿಸುತ್ತಾ ಮಾಧ್ಯಮದವರನ್ನು ಭೇಟಿಯಾಗಿಲ್ಲ. ಬದಲಾಗಿ ಮಾನ್ಯ ಉಪಮುಖ್ಯಮಂತ್ರಿಗಳ ವಿರುದ್ಧ ಕೆಂಡಕಾರಿದ್ದಾರೆ.

 

 

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಈ ಸಂಭಂದ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ವೆಂಕಟ್ “ಹಂಪಿಗೆ ಕುಟುಂಬದವರು ಪ್ರವಾಸ ಮಾಡಿದರೆ ಏನು ಕಷ್ಟ ಅನುಭವಿಸಬೇಕಾಗುತ್ತದೆ” ಎಂದು ಡಿಸಿಎಂ ಪರಮೇಶ್ವರ್ ಅವರಿಗೆ ಕೇಳಿದ್ದಾರೆ.. “ಪ್ರವಾಸಕ್ಕೆಂದು ಹಂಪಿಗೆ ಬಂದರೆ ಫ್ಯಾಮಿಲಿ ಜನರಿಗೆ ಉಳಿದುಕೊಳ್ಳಲು ಸರಿಯಾದ ಒಂದು ರೂಮ್ ಸಿಗುತ್ತಿಲ್ಲ. ಗೆಸ್ಟ್ ಹೌಸ್’ಗಳ ಕೊರತೆ ತುಂಬಾ ಇದೆ. ಸರ್ಕಾರದ ವಸತಿ ಗೃಹಗಳಲ್ಲಿ ಎಲ್ಲಾ ಕಡೆ ಬರಿ ಬ್ಯಾಚುಲರ್ ಹುಡುಗರೇ ಇರುತ್ತಾರೆ. ಅವರು ಅಲ್ಲಿ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಾರೆ. ಅವರ ಮಧ್ಯೆ ನಮ್ಮಂತ ಕುಟುಂಬಸ್ಥರು ಇರೋದಕ್ಕೆ ಆಗುತ್ತಾ” ಎಂದು ಸಿಟ್ಟಿನಿಂದಲೇ ಪರಮೇಶ್ವರ್ ಅವರನ್ನು ಕೇಳಿದ್ದಾರೆ.

 

ಹಾಗೆ ನೋಡಿದರೆ ವೆಂಕಟ್ ಅವರು ಪ್ರವಾಸೋದ್ಯಮ ಸಚಿವರಾದ ಬಾಮಾ ಹರೀಶ್ ಅವರನ್ನು ಪ್ರಶ್ನಿಸಬೇಕಿತ್ತು. ಆದರೆ ಸಿಎಂ ಕುಮಾರಸ್ವಾಮಿಯವರನ್ನೂ ಪ್ರಶ್ನಿಸದೆ ಗೃಹ ಖಾತೆ ಹೊಂದಿರುವ ಪರಮೇಶ್ವರ್ ಅವರನ್ನೇ ಯಾಕೆ ಟಾರ್ಗೇಟ್ ಮಾಡಿದ್ದಾರೆ ಎಂಬುದು ಜನರಲ್ಲಿ ಮಾರ್ಮಿಕವಾಗಿ ಉಳಿದುಕೊಂಡಿದೆ. ಅದೇನೇ ಇದ್ದರೂ ಪರಮೇಶ್ವರ್ ಅವರೂ ಕೂಡ ಸರ್ಕಾರದ ಒಂದು ಭಾಗವಾಗಿ ಪ್ರಧಾನ ಹುದ್ದೆಯಲ್ಲಿದ್ದು ಅವರೂ ಈ ಬಗ್ಗೆ ಗಮನ ಕೊಡಬೇಕು ಎಂಬುದು ವೆಂಕಟ್ ಮನಸಿನಲ್ಲಿದ್ದರಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top